ವಸಂತನೆಂದರೆ
ಚೈತ್ರ- ವೈಶಾಖ,
ಮಾವು-ಬೇವು,
ಬಿಸಿಲಿನ ಕಾವು!
ಗ್ರೀಷ್ಮಕ್ಕಿದೋ
ಜೇಷ್ಠ-ಆಷಾಡ,
ಗುಡುಗಿದೆ ನೋಡ
ಮುಂಗಾರಿನ ಮೋಡ!
ವರ್ಷದ ಧಾರೆಗೆ
ಶ್ರಾವಣ- ಭಾದ್ರಪದ,
ಲಕುಮಿ, ಗೌರಿ-ಗಣಪರ
ಹಬ್ಬಗಳ ಸಡಗರ!
ಶರದ್ ಪಾಲಿಗಿದೆ
ಆಶ್ವಯುಜ-ಕಾರ್ತಿಕ,
ದಸರೆಯ ಜೊತೆಗೆ
ದೀಪದ ತಿಲಕ!
ಹೇಮಂತನೊಳಗೆ
ಮಾರ್ಗಶಿರ-ಪುಷ್ಯ,
ಗಡಗಡ ನಡುಕ
ತಾಳೆನು ಶಿಷ್ಯ !
ಶಿಶಿರದ ಶಿರದಿ
ಮಾಘ-ಫಾಲ್ಗುಣ
ಸುಗ್ಗಿ, ಶಿವರಾತ್ರಿಯ
ನಾಟ್ಯ ರಿಂಗಣ !
-ಕೆ.ವಿ. ರಾಜಲಕ್ಷ್ಮಿ