[df
ಉತ್ಥಾನ ಜುಲೈ 2021
Month : August-2021 Episode : Author :
Month : August-2021 Episode : Author :
Month : July-2021 Episode : Author :
* ಶ್ರೀ ಸದ್ಗುರು ಬ್ರಹ್ಮಚೈತನ್ಯ ಗೋಂದಾವಲೇಕರ ಮಹಾರಾಜರು * ಜಗತ್ತಿನಲ್ಲಿಯ ಅನೇಕ ಸಾಧನೆಗಳನ್ನು ನೋಡಿದರೆ ಎಲ್ಲ ಸಾಧನೆಗಳ ಮೊದಲನೆ ಮೆಟ್ಟಲು ಎಂದರೆ ಮನುಷ್ಯನಿಗೆ ತನ್ನ ಅವಗುಣಗಳು ಕಾಣತೊಡಗುವುದು. ಸಾಧನೆಯು ಬೆಳೆಯುತ್ತಹೋದಂತೆ ನಮ್ಮಲ್ಲಿಯ ಅವಗುಣಗಳು ಪ್ರಖರವಾಗಿ ಕಾಣತೊಡಗುತ್ತವೆ ಹಾಗೂ ಮುಂದೆ ಮುಂದೆ, ಈ ಅವಗುಣಗಳ ಪರ್ವತವೇ ಇದ್ದಂತೆ ಅನ್ನಿಸುತ್ತದೆ. “ಹೇ ಭಗವಂತನೇ, ನಾನು ಇಷ್ಟೆಲ್ಲ ಅವಗುಣಗಳಿಂದ ತುಂಬಿಕೊAಡಿರುವಾಗ ನಿನ್ನ ದರ್ಶನವಾಗಬೇಕೆಂದು ಅಪೇಕ್ಷೆಯನ್ನಾದರೂ ಹೇಗೆ ಮಾಡಲಿ? ಇಂಥ ಪರ್ವತಪ್ರಾಯ ಅವಗುಣಗಳ ರಾಶಿಯೊಳಗಿನಿಂದ ನನಗೆ ನಿನ್ನ ದರುಶನವು ಕಾಲತ್ರಯದಲ್ಲಾದರೂ ಆಗಲು ಶಕ್ಯವೆ?” […]
Month : July-2021 Episode : ಯೋಧರ ವೀರಗಾಥೆಗಳು Author : ಎಸ್. ಎಸ್. ನರೇಂದ್ರಕುಮಾರ್
ಮಹಾದಿಕ್ ಅವರು ಕೈಗೊಂಡಿದ್ದ ಒಂದು ಮಹತ್ತ್ವದ ಕೆಲಸವೆಂದರೆ ಕಾಶ್ಮೀರದ ಜನರ ಹೃದಯವನ್ನು ಗೆಲ್ಲುವ ಕಾರ್ಯ. ಕುಪ್ವಾರ ಜಿಲ್ಲೆಯ ಮಕ್ಕಳಿಗಾಗಿ ಯೋಗ ಶಿಬಿರಗಳು ಅವರಲ್ಲಿ ನಾಯಕತ್ವದ ಗುಣ ಬೆಳೆಸುವ ಕಾರ್ಯಕ್ರಮಗಳು ಪ್ರವಾಸೋದ್ಯಮದ ಬೆಳವಣಿಗೆ ಇತ್ಯಾದಿ… ೨೦೧೫ನೇ ಇಸವಿಯ ನವೆಂಬರ್ ತಿಂಗಳ ೧೬ನೇ ತಾರೀಖು, ಮಧ್ಯರಾತ್ರಿಯ ಸಮಯ. ಆಗಸದಲ್ಲಿ ದಟ್ಟವಾಗಿ ಕವಿದಿರುವ ಮೋಡಗಳು. ಚಂದಿರನ ಸುಳಿವೂ ಇಲ್ಲದ ಇರುಳಿನ ಕಗ್ಗತ್ತಲಿನಲ್ಲಿ ಜಗತ್ತೆಲ್ಲವೂ ಕರಗಿ ನೀರವ ಮೌನ ಎಲ್ಲೆಡೆ ಆವರಿಸಿದೆ. ಇದಕ್ಕೆ ಜೊತೆಯೇನೋ ಎಂಬಂತೆ ಮರಗಟ್ಟಿಸುವ ಚಳಿ. ಜಮ್ಮು-ಕಾಶ್ಮೀರ ಪ್ರಾಂತದ ಚಳಿ […]
Month : July-2021 Episode : Author : ಡಾ. ಕೆ. ಜಗದೀಶ್ ಪೈ
ಸಂಸಾರದಲ್ಲಿ ಹೆಂಡತಿಗೆ ಗಂಡ ತನ್ನ ಹಿಡಿತದಲ್ಲಿರಬೇಕೆಂಬ ಅಪೇಕ್ಷೆ. ಗಂಡನಿಗೆ ಹೆಂಡತಿ ತಾನು ಹೇಳಿದಂತೆ ಬಿದ್ದಿರಬೇಕೆಂಬ ಬಯಕೆ. ಆದರೆ ಇಬ್ಬರ ಅಪೇಕ್ಷೆ – ಬಯಕೆಗಳು ಪೂರ್ತಿಯಾಗಿ ಈಡೇರಲಾರವು. ಗಂಡ ಹೆಂಡತಿಯ, ಹೆಂಡತಿ ಗಂಡನ ಕಾಲೆಳೆಯುವ ಪ್ರವೃತ್ತಿ ಪ್ರತಿಯೊಬ್ಬರ ಸಂಸಾರದಲ್ಲೂ ಸಾಮಾನ್ಯವಾಗಿ ಕಂಡುಬರುತ್ತದೆ. ಇದನ್ನು ಪ್ರತಿಷ್ಠೆಯ ಪ್ರಶ್ನೆಯನ್ನಾಗಿಸಿದರೆ ಸಂಸಾರದ ಗಾಲಿಗಳು ಚಲಿಸುವುದಿಲ್ಲ. ಸಂಸಾರದಲ್ಲಿ ಸಾರ ಇರುವುದೇ ದಂಪತಿಗಳ ಜಗಳದಲ್ಲಿ. ಭಿನ್ನಮತವಿಲ್ಲದ ಸಂಸಾರ ನಿಸ್ಸಾರವೇ ಸರಿ. ವಿರಸ ಅತಿಯಾದಾಗ ಸರಸ ಹುಟ್ಟುತ್ತದೆ. ಸರಸ ಅಧಿಕವಾದಾಗ ವಿರಸ ಹುಟ್ಟುತ್ತದೆ – ಸರಸ-ವಿರಸಗಳು ಒಂದೇ […]
Month : July-2021 Episode : Author :
ಒಂದು ಊರಿನಲ್ಲಿ ಒಬ್ಬ ರಾಜನಿದ್ದ. ಆತನಿಗೆ ತನ್ನ ರಾಜ್ಯದ ಪ್ರಜೆಗಳು ಹೇಗೆ ಯೋಚಿಸುತ್ತಾರೆ ಎಂದು ತಿಳಿದುಕೊಳ್ಳುವ ಬಯಕೆಯಾಯಿತು. ಅವರನ್ನು ಪರೀಕ್ಷಿಸಲು ರಾಜ್ಯದ ಮುಖ್ಯದ್ವಾರದ ಬಳಿ ಒಂದು ಕಲ್ಲನ್ನು ಇಟ್ಟ. ದೂರದಿಂದಲೇ ಆ ಕಲ್ಲನ್ನು ಯಾರಾದರೂ ಸರಿಸುವರೋ ಎಂದು ಪರೀಕ್ಷಿಸತೊಡಗಿದ. ಆ ದಾರಿಯಾಗಿ ಅಡ್ಡಾಡುವ ಬಹಳಷ್ಟು ಜನ ಆ ಕಲ್ಲನ್ನು ನೋಡಿ ‘ಥೂ! ಈ ಕಲ್ಲನ್ನು ಇಲ್ಲಿ ಯಾರಿಟ್ಟಿದ್ದಾರೋ’ಎಂದು ಬಯ್ಯುತ್ತಾ ಸಾಗುತ್ತಿದ್ದರೇ ಹೊರತು ಯಾರೂ ಆ ಕಲ್ಲನ್ನು ಪಕ್ಕಕ್ಕೆ ಸರಿಸಲು ಪ್ರಯತ್ನಿಸಲಿಲ್ಲ. ಕೆಲವು ದಿನಗಳು ಕಳೆಯಿತು. ಒಂದು ದಿನ […]
Month : July-2021 Episode : Author : ಸಂಗೀತಕಲಾರತ್ನ ಎಸ್. ಶಂಕರ್
ಗೀತಂ ವಾದ್ಯಂ ತಥಾ ನೃತ್ಯಂ ತ್ರಯಂ ಸಂಗೀತಮುಚ್ಯತೇ” ಎಂಬುದು ಶಾಸ್ತ್ರಕಾರರ ಅಭಿಮತ. ಅಂದರೆ ಗಾಯನ, ವಾದನ ಮತ್ತು ನೃತ್ಯಗಳ ಸಮ್ಮಿಲನವೇ ಸಂಗೀತವೆನ್ನಲಾಗಿದೆ. ಈ ನಿಟ್ಟಿನಲ್ಲಿ ವೈಣಿಕ ವಿದ್ವಾನ್ ಎಂ.ಆರ್. ಶಶಿಕಾಂತ್, ಅವರ ಧರ್ಮಪತ್ನಿ ನೃತ್ಯಪಟು ಡಾ|| ಮಾಲಾ ಶಶಿಕಾಂತ್ ಮತ್ತು ಇವರ ಏಕೈಕ ಸುಪುತ್ರಿ ಗಾಯಕಿ ಕುಮಾರಿ ಸಿಂಧು, ಸಂಗೀತ ಎಂಬ ಪದಕ್ಕೆ ಅನ್ವರ್ಥವಾದವರೆಂದೇ ಹೇಳಬಹುದು. ಈ ಕುಟುಂಬವು ಸಾಧನೆ, ಬೋಧನೆ, ವಿನಿಕೆ ಮತ್ತು ಪ್ರಚಾರದಲ್ಲಿ ತಮ್ಮನ್ನು ತಾವೇ ತೊಡಗಿಸಿಕೊಂಡು ಸಾರ್ಥಕಜೀವನ ನಡೆಸುತ್ತಿರುವುದು ಹೆಮ್ಮೆಯ ವಿಷಯ. ಶ್ರೀ […]
Month : July-2021 Episode : Author : ಸವಿತಾ ಮಾಧವ ಶಾಸ್ತ್ರಿ
ರೈಲಿನ ಪ್ರಯಾಣಕ್ಕೂ ಜೀವನದ ಪ್ರಯಾಣಕ್ಕೂ ಬಹಳ ಸಾಮ್ಯತೆ ಇದೆ. ಜೀವನದಲ್ಲಿದ್ದಂತೆ ರೈಲಿನಲ್ಲಿಯೂ ಅನೇಕರು ನಮ್ಮೊಂದಿಗೆ ಪಯಣಿಸುತ್ತಾರೆ. ಕೆಲವರು ಯಾರೊಂದಿಗೂ ಬೆರೆಯದೇ ಗಾಂಭೀರ್ಯದಿಂದ ಇದ್ದು ಕೊನೆಯವರೆಗೂ ನಮಗೆ ಅಪರಿಚಿತರಾಗಿಯೇ ಉಳಿಯುತ್ತಾರೆ. ಇನ್ನು ಕೆಲವರು ನಮಗೆ ಆತ್ಮೀಯರಾಗುತ್ತಾರೆ. ಒಂದು ಮುಗುಳ್ನಗೆಯೊಂದಿಗೆ ಪ್ರಾರಂಭವಾದ ಪರಿಚಯ ಎಷ್ಟೋ ವರ್ಷಗಳ ಪರಿಚಯದಂತೆ ಭಾಸವಾಗಿಬಿಡುತ್ತದೆ! ನೀವೇನೇ ಹೇಳಿ ಬಸ್ಸು, ವಿಮಾನ, ಕಾರು ನೀವು ಯಾವುದರಲ್ಲಿ ಪ್ರಯಾಣ ಮಾಡಿದ್ದರೂ ಅದು ರೈಲು ಪ್ರಯಾಣಕ್ಕೆ ಸರಿಸಮನಲ್ಲ. ನೀವೊಮ್ಮೆ ಆರ್ಡಿನರಿ ಬೋಗಿಯಲ್ಲಿ ಕುಳಿತು ಪ್ರಯಾಣಿಸಿ ನೋಡಿ, ಅಲ್ಲಿ ನಿಮಗೊಂದು ಮಿನಿ […]
Month : July-2021 Episode : ಪರಕಾಶ ಪ್ರವೇಶ Author : ರಾಧಾಕೃಷ್ಣ ಕಲ್ಚಾರ್
(ಭಾಗ – ೫) ಈ ಶೋಧಕಾರ್ಯದಲ್ಲಿ ನನಗೆ ಸಿಕ್ಕಿದ ಬೇರೆ ಸುಳಿವುಗಳನ್ನಾಗಲಿ, ಖನಕನ ಹೆಸರನ್ನಾಗಲಿ ನಾನು ಹೇಳಲಿಲ್ಲ. ಸುರಂಗಮಾರ್ಗದ ವಿಚಾರವನ್ನು ಉಲ್ಲೇಖಿಸಲಿಲ್ಲ. ನನ್ನೆದುರು ನಿಂತಿದ್ದವನು ಮೌನವಾಗಿದ್ದ. ಏನೋ ಚಿಂತಿಸುತ್ತ ಇದ್ದಿರಬೇಕು. ಅವನ ನಗು ನನ್ನಲ್ಲಿ ಭಯವನ್ನೇನೂ ಹುಟ್ಟಿಸಲಿಲ್ಲ. ನನಗೆ ಸದ್ಯ ಇವರು ಯಾರು ಮತ್ತು ನನ್ನನ್ನು ಬಂಧಿಸಿದ್ದು ಯಾಕೆ ಎಂಬುದನ್ನು ತಿಳಿದುಕೊಳ್ಳಬೇಕಿತ್ತು. ಒಂದಂತೂ ಅರ್ಥವಾಯಿತು. ನಾನು ಅರಗಿನಮನೆಯ ಪ್ರಕರಣವನ್ನು ಶೋಧಿಸುವುದು ಇವರಿಗೆ ಬೇಕಿಲ್ಲ; ಅಥವಾ ಅದರಿಂದ ತೊಡಕಾಗುತ್ತದೆ. ಹಾಗಿದ್ದರೆ ಹಸ್ತಿನಾವತಿಯ ಪ್ರಧಾನ ರಕ್ಷಣಾಧಿಕಾರಿಗಾಗಲಿ, ಪ್ರಭುತ್ವಕ್ಕಾಗಲಿ ಸಂಬಂಧಿಸಿದವರು ಇವರಲ್ಲ. […]
Month : July-2021 Episode : Author :
ವಸಂತನೆಂದರೆ ಚೈತ್ರ- ವೈಶಾಖ, ಮಾವು-ಬೇವು, ಬಿಸಿಲಿನ ಕಾವು! ಗ್ರೀಷ್ಮಕ್ಕಿದೋ ಜೇಷ್ಠ-ಆಷಾಡ, ಗುಡುಗಿದೆ ನೋಡ ಮುಂಗಾರಿನ ಮೋಡ! ವರ್ಷದ ಧಾರೆಗೆ ಶ್ರಾವಣ- ಭಾದ್ರಪದ, ಲಕುಮಿ, ಗೌರಿ-ಗಣಪರ ಹಬ್ಬಗಳ ಸಡಗರ! ಶರದ್ ಪಾಲಿಗಿದೆ ಆಶ್ವಯುಜ-ಕಾರ್ತಿಕ, ದಸರೆಯ ಜೊತೆಗೆ ದೀಪದ ತಿಲಕ! ಹೇಮಂತನೊಳಗೆ ಮಾರ್ಗಶಿರ-ಪುಷ್ಯ, ಗಡಗಡ ನಡುಕ ತಾಳೆನು ಶಿಷ್ಯ ! ಶಿಶಿರದ ಶಿರದಿ ಮಾಘ-ಫಾಲ್ಗುಣ ಸುಗ್ಗಿ, ಶಿವರಾತ್ರಿಯ ನಾಟ್ಯ ರಿಂಗಣ ! -ಕೆ.ವಿ. ರಾಜಲಕ್ಷ್ಮಿ
Month : July-2021 Episode : Author : ಅಕ್ಷರಾ ಖೋಡೆ
ಒಂದು ಚಿಕ್ಕ ಗ್ರಾಮ. ಅಲ್ಲಿ ಒಬ್ಬ ಪೂಜಾರಿ ಇದ್ದ. ಅವನು ಸದಾ ದೇವರ ಧ್ಯಾನದಲ್ಲೇ ಜೀವನವನ್ನು ಕಳೆಯುತ್ತಿದ್ದ. ಆ ಪೂಜಾರಿಯ ಮಗಳು ಪಕ್ಕದ ಊರಿನಲ್ಲಿರುವ ಅವಳ ಗಂಡ ಮನೆಯಲ್ಲಿ ವಾಸಿಸುತ್ತಿದ್ದಳು. ಒಮ್ಮೆ ಪೂಜಾರಿಯನ್ನು ತನ್ನ ಗಂಡನ ಮನೆಗೆ ಬರುವಂತೆ ಮಗಳು ಕರೆದಳು. ‘ಆಯ್ತು’ ಎಂದು ಒಪ್ಪಿದ ಪೂಜಾರಿ ಪಕ್ಕದ ಊರಿನಲ್ಲಿರುವ ಮಗಳ ಮನೆಗೆ ಹೊರಟ. ಆಗ ದಾರಿಯಲ್ಲಿ ಸಿಕ್ಕ ಒಬ್ಬ ಇಸ್ತ್ರಿ ಮಾಡುವವ “ಅಯ್ಯೋ ಪೂಜಾರಿಯವರೇ ಈಗ ಸಮಯ ೮ ಗಂಟೆಯಾಗಿದೆ. ಮುಂದೆ ಒಂದು ದೊಡ್ಡದಾದ ಕಾಡು […]