ಗಮನ ಸೆಳೆದ ಇತ್ತೀಚಿನ ಎರಡು ವರದಿಗಳು ಹೀಗಿವೆ: ವರದಿ ೧: ಬೆಂಗಳೂರಿನ ಪರಪ್ಪನ ಅಗ್ರಹಾರ ಎದುರಿಗೆ ಜೈಲುವಾಸಿಗಳೇ ನಿರ್ಮಿಸಿದ ಒಂದು ಬೇಕರಿ. ಸ್ಥಳದಲ್ಲಿ ಜಮಾಯಿಸುತ್ತಿದ್ದ ಪತ್ರಕರ್ತರ, ಪೊಲೀಸು ಅಧಿಕಾರಿಗಳ ಹಸಿವು ತಣಿಸುತ್ತಿರುವ ಈ ಪುಣ್ಯಕಾರ್ಯದ ಯೋಚನೆ ಬಂದಿದ್ದೂ ಅಲ್ಲಿನ ಜೈಲುವಾಸಿಗಳಿಗೇ! ಐವತ್ತಕ್ಕೂ ಹೆಚ್ಚು ಖೈದಿಗಳು ಸೇರಿ ಆಧುನಿಕ ಯಂತ್ರೋಪಕರಣಗಳಿಂದ ಕೇಕ್, ಬ್ರೆಡ್ ಇನ್ನಿತರ ಆಹಾರ ತಿನಿಸುಗಳನ್ನು ತಾವೇ ತಯಾರಿಸಿ ಮಾರಾಟಕ್ಕಿಡುತ್ತಿದ್ದಾರೆ. ತಂದಿಡುವ ತಿನಿಸುಗಳೂ ಫಟಾಫಟ್ ಎಂಬಂತೆ ಖಾಲಿಯಾಗುತ್ತಿವೆಯಂತೆ. ದಿನಾಂತ್ಯಕ್ಕೆ ಉಳಿದ ಆಹಾರೋತ್ಪನ್ನಗಳನ್ನು ಮರುದಿನ ಮಾರಾಟ ಮಾಡಲಾಗುವುದಿಲ್ಲ.
ಬದಲಾವಣೆಗೊಂದು ಅವಕಾಶ ನೀಡೋಣವೇ?
Month : March-2015 Episode : Author :