
ಪ್ರತಿ ಪ್ರಜೆಯೂ ಹಣವನ್ನು ಸರ್ಕಾರಕ್ಕೆ ತೆರಿಗೆ ಮತ್ತು ಇನ್ನಿತರ ರೂಪದಲ್ಲಿ ಕೊಡದ ಹೊರತು ಅವನು ಹೆಚ್ಚು ಪಡೆಯಲು ಸಾಧ್ಯವಿಲ್ಲ. ಸರ್ಕಾರದಿಂದ ಎಲ್ಲವನ್ನೂ ಉಚಿತವಾಗಿ ಪಡೆದು, ಕ?ಪಡದೆ ಮತ್ತು ಪರಾವಲಂಬಿಗಳಾಗಿ ಜೀವಿಸುವ ಒಂದು ವರ್ಗವನ್ನು ಬಜೆಟ್ ಮೂಲಕ ನಿರ್ಮಾಣ ಮಾಡಬೇಕೆ ಎಂದು ಯೋಚಿಸುವ ಕಾಲ ಈಗ ಬಂದಿದೆ ಎನಿಸುತ್ತದೆ. ಹಣಕಾಸು ಸಚಿವರು ಅಂತಾರಾಷ್ಟ್ರೀಯ ಮತ್ತು ರಾಷ್ಟ್ರೀಯ ಮಟ್ಟದಲ್ಲಿ ನಡೆಯುತ್ತಿರುವ ಆರ್ಥಿಕ ಬದಲಾವಣೆಗಳ ಹಿನ್ನೆಲೆಯಲ್ಲಿ ತಮ್ಮ 4ನೇ ಬಜೆಟ್ನ್ನು ಮಂಡಿಸಿದ್ದಾರೆ. ಅಂತಾರಾಷ್ಟ್ರೀಯ ಮಟ್ಟದಲ್ಲಿ ಜಾಗತೀಕರಣದ ಎರಡು ದಶಕಗಳ ನಂತರ ಅಭಿವೃದ್ಧಿ […]