
ನೀವು ನಂಬಲಿಕ್ಕಿಲ್ಲ, ಈ ’ಜನಪ್ರಿಯ’ ಉಪಾಧಿಯನ್ನು ನೆಚ್ಚಿಕೊಂಡಿದ್ದರಿಂದಾಗಿ ನನ್ನ ಮಾನ ಮೂರಾಬಟ್ಟೆಯಾಗಿಹೋಯ್ತು; ಅದೂ ನನ್ನಾಕೆಯ ಮುಂದೆ. ಕಾರ್ಯಕ್ರಮವೊಂದಕ್ಕೆ ಉಪನ್ಯಾಸನೀಡಲು ಬರಬೇಕೆಂದು ಅಪರಿಚಿತ ತರುಣರೀರ್ವರು ಎಂಟುದಿನ ಮುಂಚಿತವಾಗಿಯೆ ಆಗ್ರಹಿಸಿ ಹೋಗಿದ್ದರು. ಅದಾದ ಮೂರುದಿನಕ್ಕೆ ಅಂಚೆಯಲ್ಲಿ ಬಂದಿತ್ತು ಆಮಂತ್ರಣಪತ್ರಿಕೆ. ಕೆಟ್ಟ ಕುತೂಹಲದಿಂದ, ಆಮಂತ್ರಣಪತ್ರಿಕೆಯಲ್ಲಿ ನನ್ನ ಹೆಸರಿಗಾಗಿ ಕಣ್ಣೋಡಿಸಿದ್ದೆ, ಮಾಮೂಲಾಗಿ. ಆಶ್ಚರ್ಯ… ನನ್ನ ಹೆಸರಿನೊಂದಿಗೆ ’ಜನಪ್ರಿಯ ಹಾಸ್ಯಸಾಹಿತಿ’ ಎಂಬ ಉಪಾಧಿ ರಾರಾಜಿಸುತ್ತಿದೆ! ಸಾಹಿತಿಗಳಿಗೂ ಈ ಉಪಾಧಿ ತಗಲಿಹಾಕಿದ್ದಾರಲ್ಲ? ಅದು ಹೇಗೊ ಈ ’ಜನಪ್ರಿಯ’ ಎಂಬ ನಾಲ್ಕುವರೆ ಅಕ್ಷರದ ಮಾಯಾಂಗನೆ ತಲೆಗೇರಿಬಿಟ್ಟಿದ್ದಳು! ಅವಳದೆ […]