ಉತ್ಥಾನ - ಸದಭಿರುಚಿಯ ಮಾಸಪತ್ರಿಕೆ
ಪ್ರಕಟಣೆಯ
60ನೇ
ವರ್ಷ

ಉತ್ಥಾನ - ಸದಭಿರುಚಿಯ ಮಾಸಪತ್ರಿಕೆ

Utthana > 2020 > March

ಕೌಟುಂಬಿಕತೆ ಬಲಿಷ್ಠವಾಗಲಿ

“ಇತ್ತೀಚೆಗೆ ಅವಿಭಕ್ತ ಕುಟುಂಬ ಪದ್ಧತಿ ದುರ್ಬಲವಾಗುತ್ತಿದೆ. ಜನರಲ್ಲಿ ನೈತಿಕಪ್ರಜ್ಞೆ ಕುಸಿಯುತ್ತಿದೆ. ಆಧುನಿಕವೆನಿಸಿಕೊಳ್ಳುವ ಆಡಂಬರದ ಜೀವನರೀತಿ ಪ್ರಚುರಗೊಂಡಿರುವುದೂ ದಾಂಪತ್ಯವಿಚ್ಛೇದನಗಳಿಗೆ ಒಂದು ಪ್ರಮುಖ ಕಾರಣವೆನಿಸುತ್ತಿದೆ” – ಎಂದು ಇತ್ತೀಚೆಗೆ ದಾವಣಗೆರೆ ಜಿಲ್ಲಾ ಕೌಟುಂಬಿಕ ನ್ಯಾಯಾಲಯದ ನ್ಯಾಯಾಧೀಶರು ಕಳವಳ ವ್ಯಕ್ತಪಡಿಸಿದರು. ನ್ಯಾಯಾಲಯಗಳಲ್ಲಿ ಸಲ್ಲಿಕೆಯಾಗುತ್ತಿರುವ ವಿಚ್ಛೇದನ ಅರ್ಜಿಗಳ ಸಂಖ್ಯೆ ಹೆಚ್ಚುತ್ತಿದೆ. ಹರಿಹರ, ದಾವಣಗೆರೆ – ಈ ಎರಡೇ ತಾಲೂಕುಗಳಲ್ಲಿ ಕಳೆದೊಂದು ದಶಕದಲ್ಲಿ ಸಲ್ಲಿಸಲಾಗಿದ್ದ ವಿಚ್ಛೇದನ ಅರ್ಜಿಗಳು 2848. ಈಗ್ಗೆ ಮೂವತ್ತು-ನಲವತ್ತು ವರ್ಷ ಹಿಂದೆ ವಿಚ್ಛೇದನ ಪ್ರಕರಣಗಳು ತೀರಾ ವಿರಳವಾಗಿದ್ದವು. ಈಗ ಜಿಲ್ಲಾ ಕೌಟುಂಬಿಕ […]

‘ವಿರೋಧಕ್ಕಾಗಿ ವಿರೋಧ’

ಎಸ್.ಆರ್.ಆರ್. ಸಾತ್ತ್ವಿಕ ವರ್ತನೆ ಸೌಮ್ಯವಾಗಿರುವುದರಿಂದ ಅದರಲ್ಲಿ ಆಕರ್ಷಣೆ ಕಡಮೆ; ರಾಜಸಿಕ ಸಂಚಲನಗಳಲ್ಲಿ ಹೆಚ್ಚಿನ ಉರುಬು, ಉನ್ಮಾದ, ಉರವಣೆಗಳು ಇರುತ್ತವಾದ್ದರಿಂದ ಇವುಗಳಲ್ಲಿ ಸೆಳೆತ ಹೆಚ್ಚು. ಈಗಲಾದರೋ ರಾಷ್ಟ್ರದ ಅತ್ಯುನ್ನತ ನಿರ್ಣಯಸ್ಥಾನಗಳಾದ ಸಂಸತ್ತು ಸರ್ವೋಚ್ಚ ನ್ಯಾಯಾಲಯಗಳ ತೀರ್ಪುಗಳ ವಿರುದ್ಧವೂ ವಿಕ್ಷಿಪ್ತ ವ್ಯಕ್ತಿಗಳಂತೆ ರಾಜ್ಯಸರ್ಕಾರಗಳೂ ಸೆಡವನ್ನು ತೋರುವ ಪ್ರವೃತ್ತಿ ಬೆಳೆದಿದೆ. ಇದನ್ನು ಒಂದು ಅಧೋಬಿಂದು ಎನ್ನಬೇಕಾಗಿದೆ. ವ್ಯವಸ್ಥೆಯಿಂದ ನಾವು ಒತ್ತಾಸೆಯನ್ನು ಅಪೇಕ್ಷಿಸಿದರೆ ವ್ಯವಸ್ಥೆಯನ್ನು ನಾವು ಗೌರವಿಸಲೇಬೇಕೆಂಬುದು ಅನಿವಾರ್ಯ. ಅಸಮ್ಮತಿಯ ಅಭಿವ್ಯಕ್ತಿಗೆ ಶಿಷ್ಟಮಾರ್ಗಗಳು ಲಭ್ಯವಿವೆ. ಬೀದಿಕಲಹಗಾರಿಕೆಯು ಸಂಸದೀಯ ಪ್ರಜಾಪ್ರಭುತ್ವ ಮರ್ಯಾದೆಗೆ ಹೊಂದುವ ವಿಧಾನವಲ್ಲ. […]

ದೀಪ್ತಿ

ಕಿಂ ಯಜ್ಞೈರ್ವಿಪುಲಾಯಾಸೈಃ ಕಿಂ ವ್ರತೈಃ ಕಾಯಶೋಷಣೈಃ | ಅವ್ಯಾಜಸೇವಾ ಸುಭಗಾ ಭಕ್ತಿರ್ಯೇಷಾಂ ಮಹೇಶ್ವರೇ || – ಸುಭಾಷಿತ ಸುಧಾನಿಧಿ “ತುಂಬಾ ಆಯಾಸವನ್ನುಂಟುಮಾಡುವ ಯಜ್ಞಾಚರಣೆಗಳಿಂದಾಗಲಿ ದೇಹದಂಡನೆಗೆ ಕಾರಣವಾಗುವ ಕಠಿಣವ್ರತಗಳಿಂದಾಗಲಿ ಆಗುವುದೇನಿದೆ? ಆ ವಿಧಾನಗಳಿಂದ ದೊರೆಯಬಹುದಾದ ಆನಂದವು ಯಾರಿಗಾದರೂ ನಿರ್ನಿಮಿತ್ತವಾಗಿ ಸೇವೆ ಮಾಡುವ ಸುಲಭ ಮಾರ್ಗದಿಂದಲೇ ದೊರೆತೀತು. ಈಶ್ವರನಲ್ಲಿ ಭಕ್ತಿ ತಳೆಯುವುದೆಂದರೂ ಅದೇ.” ಭಗವದ್ಭಕ್ತಿ, ಯಾರಾದರೊಬ್ಬರಲ್ಲಿ ಪ್ರೇಮ, ಜೀವಸ್ನೇಹಾಭ್ಯಾಸ – ಇವುಗಳ ವಿಶೇಷತೆಯೆಂದರೆ ಮಾರ್ಗವೂ ಅದೇ, ಗಮ್ಯವೂ ಅದೇ. ಪರಮಪ್ರೇಮವು ತಾನೇ ಫಲಸ್ವರೂಪದ್ದೂ ಆಗಿದೆ – ಎಂದಿದ್ದಾರೆ ನಾರದರು. ಫಲಾಪೇಕ್ಷೆಯಿಂದ […]

Enjoy Instant Play: Top Casinos Without Lengthy Registration

I’ve always been a fan of quick and hassle-free online experiences, and when it comes to online gambling, nothing beats the convenience of instant play casinos. These platforms have revolutionized the way we play by eliminating the tedious registration process, letting players dive straight into the action. Imagine being able to access your favorite slots […]

ಉತ್ಥಾನ - ಸದಭಿರುಚಿಯ ಮಾಸಪತ್ರಿಕೆ

`ಉತ್ಥಾನ’ : ೧೯೬೫ರಿಂದ ಪ್ರಕಟವಾಗುತ್ತಿರುವ ಕನ್ನಡದ ಹೆಮ್ಮೆಯ ಸದಭಿರುಚಿಯ ಮಾಸಪತ್ರಿಕೆ. ರಾಜ್ಯದಾದ್ಯಂತ ಪ್ರಸರಣ ಇರುವ ಸಂಚಿಕೆಯು ಈಗ ಕ್ರೌನ್‌ ಚತುರ್ದಳ ಆಕಾರದಲ್ಲಿ ೧೧೨ ವರ್ಣಪುಟಗಳಲ್ಲಿ ವೈವಿಧ್ಯಮಯ ಲೇಖನ, ನುಡಿಚಿತ್ರ, ಸಾಹಿತ್ಯದ ಬರಹಗಳನ್ನು ಪ್ರಕಟಿಸುತ್ತಿದೆ.  ಸಂಚಿಕೆಯ ಬೆ ಲೆ ೨೦ ರೂ.

Utthana
Kannada Monthly Magazine ​
Utthana Trust
Keshavashilpa, Kempegowda Nagara
Bengaluru - 560019
Karnataka State , INDIA

Phone : 080-26612732
Email : [email protected]

ಉತ್ಥಾನದ ಹೊಸ ಪ್ರಕಟಣೆಗಳ ಬಗ್ಗೆ ನಿಮ್ಮ ಈಮೈಲ್‌ ಅಂಚೆಪೆಟ್ಟಿಗೆಯಲ್ಲೇ ಮಾಹಿತಿ ಪಡೆಯಿರಿ. ಇದಕ್ಕಾಗಿ ನಮ್ಮ ವಾರ್ತಾಪತ್ರಕ್ಕೆ ಉಚಿತವಾಗಿ ಚಂದಾದಾರರಾಗಿ