
ಹಿಂದೂಧರ್ಮವು ಇಂದು ಮಾನವಜನಾಂಗದ ಏಳನೇ ಒಂದು ಭಾಗದ ಜನರ ಮೇಲೆ ಪ್ರಭಾವ ಬೀರುತ್ತಿದೆ; ಅಂದರೆ ಮುಖ್ಯವಾಗಿ ಅವರು ಅದನ್ನು ಅನುಸರಿಸುತ್ತಾರೆ. ಇದು ಸನಾತನ ಅಥವಾ ಶಾಶ್ವತಧರ್ಮ. ಇಂದು ಅದು ಜಗತ್ತಿಗೆ ನೀಡುವ ಆಧ್ಯಾತ್ಮಿಕ ಸಂದೇಶ ಏನು? ಮನುಷ್ಯನ ಅತಿ ಪ್ರಾಚೀನ ಸಾಹಿತ್ಯ ಎಂದರೆ ವೇದಗಳೇ ಇದರ ಮೂಲ. ವೇದಗಳದ್ದು ಅನಾದಿ (ಆರಂಭವಿಲ್ಲದ) ಜ್ಞಾನ. ಅವು ಜೀವನದ ಮೂಲಭೂತ ವೈವಿಧ್ಯದ ಬಗ್ಗೆ ಹೇಳುತ್ತವೆ. ಮನುಷ್ಯನ ಸ್ವಭಾವ ಏನು? ಈ ಜಗತ್ತಿನ ಸ್ವಭಾವ ಏನು? ಮನುಷ್ಯ ಅಂತಿಮವಾಗಿ ಎಲ್ಲಿಗೆ ಮುಟ್ಟುತ್ತಾನೆ? […]