ಉತ್ಥಾನ ಜೂನ್ 2021ರ ಸಂಚಿಕೆಯಲ್ಲಿ ಏನೇನಿದೆ?
Month : June-2021 Episode : Author :
Month : June-2021 Episode : Author :
Month : June-2021 Episode : Author : ಎಸ್.ಆರ್. ರಾಮಸ್ವಾಮಿ
ಚುನಾವಣೆಗಳು ಪಾಠ ಕಲಿಸುತ್ತವೆ ಎಂಬುದು ದಿಟವೇ. ಆದರೆ ಪ್ರತಿ ಸಾರಿ ಬೇರೆಯವೇ ಪಾಠಗಳನ್ನು ಕಲಿಸುತ್ತವೆಂಬುದೂ ದಿಟವೇ. ಯಾವುದೇ ತಂತ್ರಗಾರಿಕೆಗಳ ವಿನ್ಯಾಸವು ಸದಾಕಾಲ ನಿರೀಕ್ಷಿತ ಪರಿಣಾಮಗಳನ್ನು ನೀಡಲಾರದೆಂಬುದು ಹಲವು ಬಾರಿ ಪುರಾವೆಗೊಂಡಿದೆ. ಯಾವುದೊ ‘ಅಲೆ’ಗಳು ಪವಾಡವನ್ನೆಸಗಿಬಿಡುತ್ತದೆಂಬುದನ್ನು ಪೂರ್ಣ ನೆಚ್ಚುವಂತಿಲ್ಲವೆಂಬುದೂ ಹಲವು ಬಾರಿ ಸಾಬೀತಾಗಿದೆ. ಹಲವು ತಿಂಗಳುಗಳಿಂದ ದೇಶಾದ್ಯಂತ ತೀವ್ರ ಕುತೂಹಲವನ್ನು ಕೆರಳಿಸಿದ್ದ ಐದು ರಾಜ್ಯಗಳ ವಿಧಾನಸಭಾ ಚುನಾವಣೆಗಳ ಫಲಿತಾಂಶ ಮೇ 2ರಂದು ಹೊರಬಿದ್ದಿದೆ. ಅಸ್ಸಾಮಿನಲ್ಲಿ ಭಾಜಪ, ಪುದುಚೇರಿಯಲ್ಲಿ ಎನ್.ಡಿ.ಎ. ಮೈತ್ರಿಕೂಟ ಜಯ ಗಳಿಸಿವೆ. ಕೇರಳದಲ್ಲಿ ಎಲ್.ಡಿ.ಎಫ್., ತಮಿಳುನಾಡಿನಲ್ಲಿ ಡಿ.ಎಂ.ಕೆ., […]
Month : June-2021 Episode : Author : ಎಸ್.ಆರ್. ರಾಮಸ್ವಾಮಿ
ಕಾಶ್ಮೀರವನ್ನು ಭಾರತ ಗಣರಾಜ್ಯದಲ್ಲಿ ಉಳಿಸುವುದಕ್ಕಾಗಿ ಡಾ|| ಶ್ಯಾಮಾಪ್ರಸಾದ ಮುಖರ್ಜಿಯವರ ಬಲಿದಾನವಾದದ್ದರ (23 ಜೂನ್ 1953) 68ನೇ ವರ್ಷ ಇದು (2021). ಯಾವ ಧ್ಯೇಯಕ್ಕಾಗಿ ಡಾ|| ಮುಖರ್ಜಿಯವರು ಹುತಾತ್ಮರಾದರೋ ಆ ಲಕ್ಷ್ಯ ಇನ್ನೂ ನೇರವೇರಬೇಕಾಗಿದೆ. ಆ ಪ್ರಖರ ರಾಷ್ಟ್ರಭಕ್ತರ ತ್ಯಾಗವು ವ್ಯರ್ಥವಾಗದಿರಲೆಂದು ಹಾರೈಸುತ್ತ ಆ ಸಮರ್ಪಿತ ಪ್ರೇರಣಾದಾಯಿ ಜೀವನದ ಹಲವು ಮುಖಗಳನ್ನು ಇಲ್ಲಿ ಸ್ಮರಿಸಲಾಗಿದೆ. ನವಭಾರತ ಇತಿಹಾಸ ನಿರ್ಮಾಪಕರ ಪಂಕ್ತಿಯಲ್ಲಿ ಗಣ್ಯ ಸ್ಥಾನ ಪಡೆದವರು ಡಾ|| ಶ್ಯಾಮಾಪ್ರಸಾದ ಮುಖರ್ಜಿ (6.7.1901-23.6.1953). ರಾಷ್ಟ್ರವಾದಿ ರಾಜಕಾರಣದ ಪ್ರವರ್ತಕರೆಂದು ಸಾಮಾನ್ಯವಾಗಿ ಅವರನ್ನು ನೆನೆಯಲಾಗುತ್ತದೆ. […]
Month : June-2021 Episode : Author :
ಕಳೆದ ಹದಿನೈದು ತಿಂಗಳಿಂದ ಕೊರೋನಾ ಸಾಂಕ್ರಾಮಿಕವನ್ನು ಎದುರಿಸಲು ದೇಶವೆಲ್ಲ ಸರ್ವಪ್ರಯತ್ನವನ್ನೂ ತೊಡಗಿಸಿ ಒಂದಷ್ಟುಮಟ್ಟಿನ ನಿಯಂತ್ರಣವನ್ನು ಸಾಧಿಸಿತ್ತು. ಆದರೆ ಎರಡನೇ ಅಲೆಯ ಆಘಾತದ ಪ್ರಮಾಣವೂ ವೇಗವೂ ಎಲ್ಲ ನಿರೀಕ್ಷೆಯನ್ನೂ ಮೀರಿಸಿದೆ. ಮೊದಲ ಅಲೆಯ ಅವಧಿಯಲ್ಲಿ 13 ತಿಂಗಳಲ್ಲಿ ಮೃತರ ಸಂಖ್ಯೆ 4,620ರಷ್ಟು ಇತ್ತು. ಈಗಿನ ಅಲೆಯಲ್ಲಾದರೋ ಒಂದೂವರೆ ತಿಂಗಳೊಳಗೇ ಅಷ್ಟು ಜನ ಅಸುನೀಗಿದ್ದಾರೆ. ಹಿಂದೆಯೇ ದೇಶದಲ್ಲಿ ಆರೋಗ್ಯಸೇವಾ ಲಭ್ಯತೆ ಜನಸಂಖ್ಯೆಗೆ ಪರ್ಯಾಪ್ತವಾಗುವಷ್ಟು ಇರಲಿಲ್ಲ. ಈಗಿನ ಸ್ಥಿತಿಯಂತೂ ಆತಂಕಕಾರಿಯೇ ಆಗಿದೆ. ಅವಶ್ಯ ಪ್ರಮಾಣದ ಲಸಿಕೆ ಪೂರೈಕೆಯಾಗುತ್ತಿಲ್ಲ. ಒಂದು ಹಂತದಲ್ಲಿ ವೆಂಟಿಲೇಟರುಗಳ […]
Month : June-2021 Episode : Author :
ನಮಂತಿ ಫಲಿತಾ ವೃಕ್ಷಾ ನಮಂತಿ ಚ ಬುಧಾ ಜನಾಃ| ಶುಷ್ಕಕಾಷ್ಠಾನಿ ಮೂರ್ಖಾಶ್ಚ ಭಿದ್ಯಂತೇ ನ ನಮಂತಿ ಚ|| – ಸುಭಾಷಿತಸುಧಾನಿಧಿ “ಕೊಂಬೆಗಳ ತುಂಬಾ ಹಣ್ಣು ಬಿಟ್ಟ ಮರಗಳು ಬಾಗುತ್ತವೆ. ಜ್ಞಾನಿಗಳಾದ ಜನರು ವಿನಯದಿಂದ ಬಾಗಿ ನಡೆಯುತ್ತಾರೆ. ಆದರೆ ಒಣಗಿದ ಮರಗಳೂ ಮೂರ್ಖರೂ ಸೆಟೆದುಕೊಂಡಿರುವ ಕಾರಣ ಬಾಗುವುದಿಲ್ಲ; ಅಂತಹವರ ಮೊಂಡುತನ ಖಂಡನೆಗೊಳಗಾಗುತ್ತದೆ.” ನಮ್ರತೆಯಿಂದ ಬಾಗಿ ನಡೆಯುವವರು ಎಲ್ಲರ ಆದರಣೆಗೆ ಪಾತ್ರರಾಗುತ್ತಾರೆ. ದುರಹಂಕಾರದಿಂದ ಮೆರೆಯುವ ಅಭ್ಯಾಸ ಮಾಡಿಕೊಂಡವರು ಉಳಿದವರ ತಾತ್ಸಾರಕ್ಕೆ ಗುರಿಯಾಗುತ್ತಾರೆ. ವಿನಯಪೂರ್ವಕ ವರ್ತನೆಯನ್ನೂ ಮೆದುಮಾತನ್ನೂ ಇತರರು ದೌರ್ಬಲ್ಯವೆಂದುಕೊಂಡಾರು – […]