ಉತ್ಥಾನ ಮಾಸಪತ್ರಿಕೆಯು ಕಾಲೇಜು ವಿದ್ಯಾರ್ಥಿಗಳಿಗಾಗಿ ರಾಜ್ಯಮಟ್ಟದ ಪ್ರಬಂಧ ಸ್ಪರ್ಧೆಯನ್ನು ಆಯೋಜಿಸಿದೆ.
ಕ್ರೀಡೆಯೆಂದರೆ ಕ್ರಿಕೆಟ್ ಮಾತ್ರವೇ? ಉಳಿದ ಕ್ರೀಡೆಗಳ ಬಗೆಗೆ ಭಾರತೀಯರಿಗೇಕೆ ನಿರಾಸಕ್ತಿ? ಪ್ರಬಂಧ ವಿಷಯವಾಗಿದೆ. ಪ್ರಬಂಧ ಕಳುಹಿಸಲು 2023 ಅಕ್ಟೋಬರ್ 20 ಶುಕ್ರವಾರ ಕೊನೆಯ ದಿನಾಂಕವಾಗಿದೆ.
ವಿಷಯ:
ಕ್ರೀಡೆಯೆಂದರೆ ಕ್ರಿಕೆಟ್ ಮಾತ್ರವೇ?
ಉಳಿದ ಕ್ರೀಡೆಗಳ ಬಗೆಗೆ ಭಾರತೀಯರಿಗೇಕೆ ನಿರಾಸಕ್ತಿ?
ಭಾರತದಲ್ಲಿ ಕ್ರಿಕೆಟ್ ಅತ್ಯಂತ ಜನಪ್ರಿಯ. ಭಾರತೀಯ ಕ್ರೀಡಾರಂಗವನ್ನು ಸಂಪೂರ್ಣವಾಗಿ ಕ್ರಿಕೆಟ್ ಆವರಿಸಿದೆ. ಕ್ರಿಕೆಟ್ ಕ್ರೀಡೆ ಮಾತ್ರವಲ್ಲ ಮನರಂಜನೆಯ ದೊಡ್ಡ ಉದ್ಯಮ. ಬ್ರಿಟಿಷರಿಂದಾಗಿ ಭಾರತದಲ್ಲಿ ನೆಲೆಯೂರಿದ ಕ್ರಿಕೆಟ್ ಭಾರತದ ಯುವ ಸಮೂಹದ ಮೇಲೆ ಮಾನಸಿಕ ಗುಲಾಮಗಿರಿಯನ್ನು ಹೇರುತ್ತಿದೆಯೇ? ಉಳಿದ ಅಸಂಖ್ಯ ಕ್ರೀಡೆಗಳೇಕೆ ನಿರ್ಲಕ್ಷ್ಯಕ್ಕೆ ಒಳಗಾದವು? ಒಲಂಪಿಕ್ಸ್ ಪದಕ ಪಟ್ಟಿ ನಮಗೇಕೆ ತಲೆತಗ್ಗಿಸುವಂತೆ ಮಾಡುತ್ತದೆ? ಶ್ರಮ, ಬೆವರು ಹರಿಸಿದ ಅನ್ಯ ಕ್ರೀಡಾಳುಗಳಿಗೆ ಪ್ರೋತ್ಸಾಹ ಸಾಲದಾಯಿತೆ? ನಾವು ಸೋತಿದ್ದೆಲ್ಲಿ? ಎಲ್ಲ ಕ್ರೀಡೆಗಳು ಗೆಲ್ಲುವಂತಾಗಲು ಏನು ಮಾಡಬೇಕು? ಬನ್ನಿ ಅಸಂಖ್ಯ ಕ್ರೀಡೆಗಳ ಗೆಲುವಿನ ಮೆಟ್ಟಿಲನ್ನು ಹುಡುಕೋಣ
ಈ ವಿಷಯದ ಕುರಿತಾದ ನಿಮ್ಮ ವಿಚಾರಸರಣಿಯನ್ನು ಪ್ರಬಂಧ ರೂಪದಲ್ಲಿ ಬರೆಯಿರಿ. ಪ್ರಬಂಧವು ೧೫೦೦ ಪದಗಳು ಮೀರದಂತೆ ಇರಲಿ.
ಮೊದಲ ಬಹುಮಾನ: ರೂ. 10,000 /-
ಎರಡನೆಯ ಬಹುಮಾನ: ರೂ. 7,000 /-
ಮೂರನೆಯ ಬಹುಮಾನ: ರೂ. 5,000 /-
ಹತ್ತು ಮೆಚ್ಚುಗೆಯ ಬಹುಮಾನಗಳು: ತಲಾ ರೂ. 2,000 /-
ಪ್ರಬಂಧ ನಮಗೆ ತಲಪಲು ಕೊನೆಯ ದಿನಾಂಕ: ಅಕ್ಟೋಬರ್ ೨೦, ೨೦೨೩
ಸ್ಪರ್ಧೆಯ ನಿಯಮಗಳು:
- ಈ ಸ್ಪರ್ಧೆಯಲ್ಲಿ ಪದವಿ, ಯಾ ತತ್ಸಮಾನ ಮತ್ತು ಸ್ನಾತಕೋತ್ತರ ಕಾಲೇಜು ವಿದ್ಯಾರ್ಥಿಗಳು ಮಾತ್ರ ಭಾಗವಹಿಸಬಹುದು.
- ಸ್ಪರ್ಧೆಗೆ ಕಳುಹಿಸುವ ಪ್ರಬಂಧ ವಿದ್ಯಾರ್ಥಿಯ ಸ್ವಂತ ರಚನೆಯಾಗಿರಬೇಕು. ಈವರೆಗೆ ಎಲ್ಲಿಯೂ ಯಾವ ರೀತಿಯಲ್ಲೂ ಪ್ರಕಟ ಅಥವಾ ಪ್ರಸಾರ ಆಗಿರಬಾರದು.
- ಕಳುಹಿಸುವ ಪ್ರಬಂಧವನ್ನು ಕಾಲೇಜು/ವಿಭಾಗ ಮುಖ್ಯಸ್ಥರಿಂದ ದೃಢೀಕರಿಸಬೇಕು.
- ಸ್ಪರ್ಧೆಯಲ್ಲಿ ಭಾಗವಹಿಸಿದ ಪ್ರಬಂಧವನ್ನು ಹಿಂದಿರುಗಿಸುವ ವ್ಯವಸ್ಥೆ ಇರುವುದಿಲ್ಲ.
ಪ್ರಬಂಧವನ್ನು ಹಾಳೆಯ ಒಂದೆ ಮಗ್ಗುಲಲ್ಲಿ ಸ್ಫುಟವಾಗಿ ಬರೆದಿರಬೇಕು. ಹಾಳೆಗಳನ್ನು ಚಿತ್ರಗಳಿಂದ, ಬಣ್ಣಗಳಿಂದ ಅಲಂಕರಿಸುವುದು ಬೇಡ.
- ಸ್ಪರ್ಧಿಗಳು ತಮ್ಮ ಹೆಸರು, ಪರಿಚಯ, ಮೊಬೈಲ್ ನಂಬರ್, ಕಾಲೇಜಿನ ಹೆಸರು, ವಿಳಾಸ ಇತ್ಯಾದಿಗಳನ್ನು ಪ್ರತ್ಯೇಕ ಹಾಳೆಯಲ್ಲಿ ಬರೆದು ಲಗತ್ತಿಸಬೇಕು. ಜೊತೆಗೆ ಭಾವಚಿತ್ರವೂ ಇರಬೇಕು.
- ಪ್ರಬಂಧವನ್ನು ನುಡಿ ಅಥವಾ ಯೂನಿಕೋಡ್ ತಂತ್ರಾಂಶದಲ್ಲಿ ಸಿದ್ಧಪಡಿಸಿ (pdf ಮತ್ತು word file – ಎರಡನ್ನೂ) [email protected] – ಈ ವಿಳಾಸಕ್ಕೆ ಇ-ಮೇಲ್ ಮೂಲಕವೂ ಕಳುಹಿಸಬಹುದು.
- ಬಹುಮಾನಿತ ಪ್ರಬಂಧಗಳನ್ನು ಯಾವುದೇ ರೂಪದಲ್ಲಿ, ಯಾವಾಗ ಬೇಕಾದರೂ ಬಳಸಿಕೊಳ್ಳುವ ಹಕ್ಕನ್ನು ’ಉತ್ಥಾನ’ವು ಕಾಯ್ದಿರಿಸಿಕೊಂಡಿದೆ.
- ತೀರ್ಪುಗಾರರ ಮೌಲ್ಯನಿರ್ಣಯದ ನಂತರ ಫಲಿತಾಂಶವನ್ನು ’ಉತ್ಥಾನ’ದಲ್ಲಿ ಪ್ರಕಟಿಸಲಾಗುವುದು. ಅದಕ್ಕೆ ಪೂರ್ವದಲ್ಲಿ ಯಾವುದೇ ಪತ್ರವ್ಯವಹಾರ ಸಾಧ್ಯವಾಗದು.
- ಸ್ಪರ್ಧೆಗೆ ಸಂಬಂಧಿಸಿದ ಎಲ್ಲ ವಿಚಾರಗಳಲ್ಲೂ ವ್ಯವಸ್ಥಾಪಕರದ್ದೇ ಅಂತಿಮ ತೀರ್ಮಾನ.
ಪ್ರಬಂಧವನ್ನು ಕಳುಹಿಸಬೇಕಾದ ವಿಳಾಸ:
ಸಂಪಾದಕರು
’ಉತ್ಥಾನ’ ವಾರ್ಷಿಕ ಪ್ರಬಂಧ ಸ್ಪರ್ಧೆ – 2023
’ಕೇಶವ ಶಿಲ್ಪ’, ಕೆಂಪೇಗೌಡನಗರ ಮುಖ್ಯರಸ್ತೆ,
ಕೆಂಪೇಗೌಡನಗರ, ಬೆಂಗಳೂರು – 560 ೦೦4
ಹೆಚ್ಚಿನ ಮಾಹಿತಿಗಾಗಿ: 77954 41894 ,080-2660 4673 E-mail: u [email protected]