ಉತ್ಥಾನ
ಉತ್ಥಾನ ಸದಭಿರುಚಿಯ ಕನ್ನಡ ಮಾಸಪತ್ರಿಕೆ,ಬೆಂಗಳೂರು ೫೬೦ ೦೧೯
ಕಾಲೇಜು ವಿದ್ಯಾರ್ಥಿಗಳಿಗಾಗಿ ಸಂಶೋಧನ ಪ್ರಬಂಧ ಸ್ಪರ್ಧೆ – ೨೦೧೭
ವಿಷಯ : ಸ್ವಾತಂತ್ರ್ಯದ ನಾಳೆಗಳು : ಕ್ಯಾಂಪಸ್‌ನ ಒಳಗೆ – ಹೊರಗೆ
ಕಾಲೇಜು ಕ್ಯಾಂಪಸ್ – ಒಂದು ಅದ್ಭುತ ಲೋಕ. ಚಿಟ್ಟೆಯಾಗುವ ಕಂಬಳಿಹುಳಕ್ಕೆ ಗೂಡಿನವಾಸ ಅನಿವಾರ್ಯ. ಕ್ಯಾಂಪಸ್‌ನಲ್ಲಿ ಮುಕ್ತ ವೈಚಾರಿಕ ಚರ್ಚೆಯ ಅವಕಾಶವೂ ಬೇಕು. ಪಠ್ಯಪುಸ್ತಕ, ಪರೀಕ್ಷೆಯ ಅಂಕಗಳನ್ನೂ ಮೀರಿದ ವ್ಯಕ್ತಿತ್ವವನ್ನೂ ಕಾಲೇಜು ವಿದ್ಯಾಭ್ಯಾಸವು ವಿದ್ಯಾರ್ಥಿಗಳಲ್ಲಿ ಮೈಗೂಡಿಸಬೇಕು. ತಂತ್ರಜ್ಞಾನದ ಮೂಲಕ ಸಂವಹನ ಮಾಧ್ಯವಗಳು ಅಂಗೈಗೆ ಬಂದಿರುವುದೂ ನಿಜವೇ.
ಈ ಎಲ್ಲ ಹಿನ್ನೆಲೆಯಲ್ಲಿ ಕಾಲೇಜು ಕ್ಯಾಂಪಸ್‌ನ ವೈಚಾರಿಕ ಚರ್ಚೆಯ ಅವಕಾಶ ಹೇಗಿದೆ? ವಿಚಾರದ ದಿಕ್ಕು-ದಿಸೆ ಏನಿದೆ? ವೈಚಾರಿಕ ಚರ್ಚೆಗಳಿಂದ ದೂರ ಉಳಿದು ಕೇವಲ ಕೆರಿಯರಿನಲ್ಲಿ ಮುಳುಗುವುದು ಎಷ್ಟು ಸರಿ? ವಿಚಾರಸ್ವಾತಂತ್ರ್ಯ ಅತಿಯಾಗಿ ದೇಶದ ಘನತೆಯನ್ನು ಪ್ರಶ್ನಿಸುವ ಸ್ವೇಚ್ಛಾಚಾರವಾಗುತ್ತಿದೆಯೇ? ವಿಚಾರಸ್ವಾತಂತ್ರ್ಯದ ನಾಳೆಗಳು ಹೇಗಿದ್ದರೆ ಸಮಂಜಸ? – ನಿಮ್ಮ ಅಭಿಪ್ರಾಯಗಳನ್ನು ಪ್ರಬಂಧ ರೂಪದಲ್ಲಿ ಬರೆದು ನಮಗೆ ಕಳುಹಿಸಿ.
ಪ್ರಸ್ತುತ ಕ್ಯಾಂಪಸ್ ವಾತಾವರಣದ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳಲ್ಲಿ ಸಕಾರಾತ್ಮಕ, ಆದರ್ಶ ಚಿಂತನೆಯನ್ನು ಪ್ರಚೋದಿಸುವುದಕ್ಕಾಗಿಯೆ ಈ ಸ್ಪರ್ಧೆ.
ಗಮನಿಸಿ:
ವಿಷಯ ಮಂಡನೆಯ ಸಂದರ್ಭದಲ್ಲಿ ಇವುಗಳಿಗೆ ಆದ್ಯತೆಯಿರಲಿ –
- ಸೂಕ್ತ ಮಾಹಿತಿಗಳು
- ಪೂರಕ ಅಂಕಿ-ಅಂಶಗಳು
- ಸಮೀಕ್ಷಾತ್ಮಕ ತುಲನಾತ್ಮಕ ದೃಷ್ಟಿಕೋನ.
– ಇವುಗಳೆಲ್ಲವೂ ಸಾಧಾರವಾಗಿರಲಿ..
ಮೊದಲನೆಯ ಬಹುಮಾನ‘ -೮,೦೦೦
ಎರಡನೆಯ ಬಹುಮಾನ – ೫,೦೦೦
ಮೂರನೆಯ ಬಹುಮಾನ – ‘ ೩,೦೦೦
ಎರಡು ಮೆಚ್ಚುಗೆಯ ಬಹುಮಾನಗಳು- ತಲಾ ‘ ೧,೦೦೦
ಸ್ಪರ್ಧೆಯ ನಿಯಮಗಳು:
- ಈ ಸ್ಪರ್ಧೆಯಲ್ಲಿ ಪದವಿ ಮತ್ತು ಸ್ನಾತಕೋತ್ತರ ವಿದ್ಯಾರ್ಥಿಗಳು ಮಾತ್ರ ಭಾಗವಹಿಸಬಹುದು.
- ಸ್ಪರ್ಧೆಗೆ ಕಳುಹಿಸುವ ಪ್ರಬಂಧ ವಿದ್ಯಾರ್ಥಿಯ ಸ್ವಂತ ರಚನೆಯಾಗಿರಬೇಕು. ಈವರೆಗೆ ಎಲ್ಲಿಯೂ ಯಾವ ರೂಪದಲ್ಲೂ ಪ್ರಕಟ ಅಥವಾ ಪ್ರಸಾರ ಆಗಿರಬಾರದು.
- ಪ್ರಬಂಧವು ೧೦೦೦ ಪದಗಳನ್ನು ಮೀರಬಾರದು.
- ವಿದ್ಯಾರ್ಥಿಗಳು ತಮ್ಮ ಪ್ರಬಂಧವನ್ನು ಕಾಲೇಜು/ವಿಭಾಗ ಮುಖ್ಯಸ್ಥರಿಂದ ದೃಢೀಕರಿಸಬೇಕು.
- ಸ್ಪರ್ಧೆಗೆ ಕಳುಹಿಸಿದ ಬರಹವನ್ನು ಹಿಂದಿರುಗಿಸುವ ವ್ಯವಸ್ಥೆ ಇರುವುದಿಲ್ಲ.
- ಸ್ಪರ್ಧಿಗಳು ತಮ್ಮ ಹೆಸರು, ವಿಳಾಸ, ಕಿರುಪರಿಚಯ ಮುಂತಾದ ವಿವರಗಳನ್ನು ಪ್ರಬಂಧದ ಜೊತೆಯಲ್ಲಿ ಬರೆಯದೆ, ಪ್ರತ್ಯೇಕ ಪುಟದಲ್ಲಿ ಬರೆದು ಕಳಿಸಬೇಕು. ಜೊತೆಗೆ ಸ್ಪರ್ಧಿಯ ಭಾವಚಿತ್ರವೂ ಇರಬೇಕು.
- ಪ್ರಬಂಧವನ್ನು ನುಡಿ, ಬರಹ ಅಥವಾ ಯೂನಿಕೋಡ್ ತಂತ್ರಾಂಶದಲ್ಲಿ ಸಿದ್ಧಪಡಿಸಿ ಇ-ಮೇಲ್ ಮೂಲಕವೂ ಕಳುಹಿಸಬಹುದು. ಇ-ಮೇಲ್ ವಿಳಾಸ: [email protected]
- ಸ್ಪರ್ಧೆಯಲ್ಲಿ ಅಂತಿಮ ಹಂತಕ್ಕೆ ಆಯ್ಕೆಯಾದ ಸ್ಪರ್ಧಿಗಳು ಸೀಮಿತ ಪ್ರೇಕ್ಷಕರ ಜೊತೆಗಿರುವ ತೀರ್ಪುಗಾರರ ಮುಂದೆ ತಮ್ಮ ಪ್ರಬಂಧವನ್ನು ಮಂಡಿಸಬೇಕು. PPT ಮೂಲಕ ಮಂಡಿಸುವ ಪ್ರಬಂಧಗಳಿಗೆ ಆದ್ಯತೆಯಿರುತ್ತದೆ.
- ಬಹುಮಾನಿತ ಪ್ರಬಂಧಗಳನ್ನು ಯಾವುದೇ ರೂಪದಲ್ಲಿ, ಯಾವಾಗ ಬೇಕಾದರೂ ಬಳಸಿಕೊಳ್ಳುವ ಹಕ್ಕನ್ನು ’ಉತ್ಥಾನ’ ಕಾಯ್ದಿರಿಸಿಕೊಂಡಿದೆ.
- ತೀರ್ಪುಗಾರರ ಮೌಲ್ಯನಿರ್ಣಯಾನಂತರ ಫಲಿತಾಂಶವನ್ನು ’ಉತ್ಥಾನ’ದಲ್ಲಿ ಪ್ರಕಟಿಸಲಾಗುವುದು.
- ವಿಜೇತರಿಗೆ ಮಾತ್ರ ಪತ್ರಬರೆದು ತಿಳಿಸಲಾಗುವುದು. ಅದಕ್ಕೆ ಪೂರ್ವದಲ್ಲಿ ಯಾವುದೇ ಪತ್ರವ್ಯವಹಾರ ಸಾಧ್ಯವಾಗದು. ಸ್ಪರ್ಧೆಗೆ ಸಂಬಂಧಿಸಿದ ಎಲ್ಲ ವಿಚಾರಗಳಲ್ಲೂ ವ್ಯವಸ್ಥಾಪಕರದ್ದೇ ಅಂತಿಮ ತೀರ್ಮಾನ.
ಪ್ರಬಂಧಗಳು ನಮಗೆ ತಲಪಲು ಕೊನೆಯ ದಿನಾಂಕ ಸೆಪ್ಟೆಂಬರ್ ೩೦, ೨೦೧೭
ವಿಳಾಸ:
`ಸಂಪಾದಕರು’,
ಉತ್ಥಾನ’ ಸಂಶೋಧನ ಪ್ರಬಂಧ ಸ್ಪರ್ಧೆ – ೨೦೧೭’
ಕೇಶವ ಶಿಲ್ಪ’, ಕೆಂಪೇಗೌಡನಗರ ಮುಖ್ಯರಸ್ತೆ,
ಕೆಂಪೇಗೌಡನಗರ, ಬೆಂಗಳೂರು – ೫೬೦ ೦೧೯
ದೂರವಾಣಿ: ೦೮೦ – ೨೬೬೦ ೪೬೭೩