ಉತ್ಥಾನ
ವಾರ್ಷಿಕ ಕಥಾ ಸ್ಪರ್ಧೆ-2017ರ ಫಲಿತಾಂಶ
ಉತ್ಥಾನ ಮಾಸಪತ್ರಿಕೆ ಆಯೋಜಿಸಿದ ಉತ್ಥಾನ ವಾರ್ಷಿಕ ಕಥಾಸ್ಪರ್ಧೆ-೨೦೧೭ರ ಫಲಿತಾಂಶ ಪ್ರಕಟಗೊಂಡಿದೆ.
ಹೈದರಾಬಾದ್‌ನ ಅರ್ಪಣ ಎಚ್.ಎಸ್., ಅವರ ‘ಬಲಿ’ ಕಥೆಗೆ ಮೊದಲ ಬಹುಮಾನ (ರೂ. ೧೫,೦೦೦) ಲಭಿಸಿದೆ.
ಬೆಂಗಳೂರಿನ ದೀಪಾ ಜೋಶಿ ಅವರು ‘ಪಾವನಿ’ ಕಥೆಗೆ ದ್ವಿತೀಯ ಬಹುಮಾನ (ರೂ. ೧೨,೦೦೦) ಹಾಗೂ ಟಿ.ಎಂ. ರಮೇಶ, ಸಿದ್ದಾಪುರ ಅವರು ‘ಪರಾವರ್ತನ’ ಕಥೆಗೆ ಮೂರನೆಯ ಬಹುಮಾನ (ರೂ. ೧೦,೦೦೦) ಗಳಿಸಿದ್ದಾರೆ
ಮೆಚ್ಚುಗೆಯ ಬಹುಮಾನಗಳು: (ತಲಾ ರೂ. ೨,೦೦೦)
- ಬೇರು ಮಣ್ಣುಗಳ ಜೀವಯಾನ
ರೇಶ್ಮಾ ಭಟ್, ಬಂಟ್ವಾಳ
- ಹೆದ್ದಾರಿ ರಾಕೇಸನೂ ನಾಗಮ್ಮ ವಕ್ಕಲತಿಯ ಗುಡಿಸಲೂ
ಹುಳಗೋಳ ನಾಗಪತಿ ಹೆಗಡೆ, ಅಂಕೋಲಾ
- ಸಾವು-ಹುಟ್ಟು
ಗಣೇಶ ಭಟ್ಟ ಕೊಪ್ಪಲತೋಟ, ಶಿರಸಿ
- ಹೆಸರು ಹೇಳದವನು!
ಎಸ್.ಜಿ. ಶಿವಶಂಕರ್, ಮೈಸೂರು
- ಅಂಗಡಿ
ರಾಘವೇಂದ್ರ ಬಿ. ರಾವ್, ಕಾರ್ಕಳ
ಉತ್ಥಾನ ಮಾಸಪತ್ರಿಕೆ ಕಳೆದ ಹಲವು ವರ್ಷಗಳಿಂದ ವಾರ್ಷಿಕ ಕಥಾ ಸ್ಪರ್ಧೆಗಳನ್ನು ನಡೆಸಿಕೊಂಡು ಬರುತ್ತಿದೆ. ಉತ್ಥಾನ ಕಥಾಸ್ಪರ್ಧೆ ೨೦೧೭ಕ್ಕೆ ರಾಜ್ಯದ ವಿವಿಧೆಡೆಗಳಿಂದ ೩0೦ಕ್ಕೂ ಅಧಿಕ ಕಥೆಗಳು ಆಗಮಿಸಿದ್ದವು. ಪ್ರಸಿದ್ಧ ಕಥೆಗಾರರಾದ ಡಾ. ಗುರುಪ್ರಸಾದ ಕಾಗಿನೆಲೆ ಅವರು ತೀರ್ಪುಗಾರರಾಗಿ ವಿಜೇತರನ್ನು ಆಯ್ಕೆ ಮಾಡಿದರು.
ಎಸ್. ಆರ್. ರಾಮಸ್ವಾಮಿ
ಪ್ರಧಾನ ಸಂಪಾದಕ