ಕನ್ನಡ ರಾಜ್ಯೋತ್ಸವ ಪ್ರಯುಕ್ತ ರಾಷ್ಟ್ರೋತ್ಥಾನ ಸಾಹಿತ್ಯ ನವೆಂಬರ್ ತಿಂಗಳು ಪೂರ್ತಿ ನಮ್ಮ ಪ್ರಕಾಶನದ ಎಲ್ಲ ಕನ್ನಡ ಪುಸ್ತಕಗಳಿಗೆ 45% ರ ವರೆಗೆ ವಿಶೇಷ ರಿಯಾಯಿತಿ ಘೋಷಿಸಿದೆ.
ನವೆಂಬರ್ 1 ರಿಂದ ನ. 30ರ ತನಕ ರಾಷ್ಟ್ರೋತ್ಥಾನ ಸಾಹಿತ್ಯದ ಎಲ್ಲ ಕನ್ನಡ ಪುಸ್ತಕಗಳಿಗೆ 20%ರ ವಿಶೇಷ ರಿಯಾಯಿತಿ ದರದಲ್ಲಿ ಮಾರಾಟ ನಡೆಯಲಿದೆ.
ರೂ. 500ಕ್ಕಿಂತಲೂ ಅಧಿಕ ಮೊತ್ತದ ಪುಸ್ತಕಗಳನ್ನು ಖರೀದಿಸಿದರೆ 30% ರಷ್ಟು ಹಾಗೂ 1000 (ಒಂದು ಸಾವಿರ) ರೂಪಾಯಿಗಿಂತ ಅಧಿಕ ಮೊತ್ತದ ಪುಸ್ತಕಗಳನ್ನು ಖರೀದಿಗೆ 40% ರಷ್ಟು ವಿಶೇಷ ರಿಯಾಯಿತಿ ದೊರೆಯಲಿದೆ. ಜೊತೆಗೆ ಶಾಲಾಕಾಲೇಜುಗಳ ಗ್ರಂಥಾಲಯಗಳಿಗೆ ಶೇ. 45ರಷ್ಟು ವಿಶೇಷ ರಿಯಾಯಿತಿ ನೀಡಲಾಗುವುದು.
ಆನ್‌ಲೈನ್ ನಲ್ಲಿ ಕೂಡಾ ಇದೇ ರಿಯಾಯಿತಿ ದರದಲ್ಲಿ* www.sahityabooks.com ಖರೀದಿಸಬಹುದು. (* ಪೋಸ್ಟಲ್ ವೆಚ್ಚ ಪಾವತಿಸಬೇಕಾಗುತ್ತದೆ.)
ನೂರಾರು ಶತಮಾನಗಳಿಂದ ನಮ್ಮ ರಾಷ್ಟ್ರಜೀವನವನ್ನು ವೈಭವಶಾಲಿಯಾಗಿಸಿದ ನಮ್ಮ ಸಂಸ್ಕೃತಿ, ಪರಂಪರೆ, ಇತಿಹಾಸ, ತತ್ತ್ವಜ್ಞಾನ, ಜೀವನಾದರ್ಶಗಳ ಹಿರಿಮೆಯನ್ನು ಪರಿಚಯಿಸುವ, ಸಾಮಾಜಿಕ ಚಿಂತನಪ್ರಧಾನವಾದ ಸಾಹಿತ್ಯದ ಕೊರತೆಯನ್ನು ತುಂಬಿ ನಾಡಿನ ಜನರೆದೆಯಲ್ಲಿ ಸ್ಫೂರ್ತಿ-ಉತ್ಸಾಹಗಳನ್ನು ಮೂಡಿಸುವ ಸಲುವಾಗಿ 1965ರಲ್ಲಿ ರಾಷ್ಟ್ರೋತ್ಥಾನ ಸಾಹಿತ್ಯ ಪ್ರಾರಂಭವಾಯಿತು. ಈವರೆಗೆ 260ಕ್ಕೂ ಅಧಿಕ ಪುಸ್ತಕಗಳನ್ನು ಹಾಗೂ ಮಕ್ಕಳ ಸಾಹಿತ್ಯದಲ್ಲಿ ವಿಶಿಷ್ಟ ದಾಖಲೆಯನ್ನೇ ಸೃಷ್ಟಿಸಿದ ಭಾರತ-ಭಾರತಿ ಪುಸ್ತಕಮಾಲೆಯಲ್ಲಿ ಈವರೆಗೆ 610 ಮಹಾಪುರುಷರ ಕುರಿತು ಪುಸ್ತಕಗಳನ್ನು ಪ್ರಕಟಿಸಲಾಗಿದೆ.
ಬೆಂಗಳೂರಿನ 3 ಕಡೆಗಳಲ್ಲಿರುವ ನಮ್ಮ ಮಳಿಗೆಗಳಲ್ಲಿ ಈ ವಿಶೇಷ ರಿಯಾಯಿತಿ ದೊರೆಯುತ್ತದೆ
Rashtrotthana Sahitya
‘Keshava Shilpa’, Kempegowdanagar, Bengaluru – 560 019
Ph. : 080 – 26612730, 31, 32
Rashtrotthana Sahitya
No. 14/3-A, Nrupatunga Road, Bengaluru – 560 001
Ph.: 080 – 22271889
Rashtrotthana Sahitya
‘Ajita Smruthi’, 36th Cross, 10th Main Road, 4th Block
Jayanagara, Bengaluru – 560 011. Ph: 080-22441486