ಉತ್ಥಾನ - ಸದಭಿರುಚಿಯ ಮಾಸಪತ್ರಿಕೆ
ಪ್ರಕಟಣೆಯ
59ನೇ
ವರ್ಷ

ಉತ್ಥಾನ - ಸದಭಿರುಚಿಯ ಮಾಸಪತ್ರಿಕೆ

Utthana > News > ಉತ್ಥಾನ ಕಾಲೇಜು ವಿದ್ಯಾರ್ಥಿಗಳಿಗಾಗಿ ನಡೆದ ಪ್ರಬಂಧ ಸ್ಪರ್ಧೆ 2018 ಫಲಿತಾಂಶ

ಉತ್ಥಾನ ಕಾಲೇಜು ವಿದ್ಯಾರ್ಥಿಗಳಿಗಾಗಿ ನಡೆದ ಪ್ರಬಂಧ ಸ್ಪರ್ಧೆ 2018 ಫಲಿತಾಂಶ

ಮುದ್ರಣ ಹಾಗೂ ವಿದ್ಯುನ್ಮಾನ ಮಾಧ್ಯಮಗಳ ಸಂಪಾದಕರುಗಳೆಲ್ಲರೂ ಒಂದೆಡೆ ಸೇರಿ ಸಮಾಜಕ್ಕೆ ಎಂತಹ ಸುದ್ದಿಗಳನ್ನು ನೀಡಬೇಕು ಎಂಬ ಕುರಿತು ಗಂಭೀರ ಚರ್ಚೆ ನಡೆಸಬೇಕಾದ ಅಗತ್ಯವಿದೆ ಎಂದು ಕನ್ನಡ ಪ್ರಭ  ಹಾಗೂ  ಸುವರ್ಣ  ನ್ಯೂಸ್ ನ  ಪ್ರಧಾನ  ಸಂಪಾದಕರಾದ  ರವಿ  ಹೆಗಡೆ ಅವರು  ಅಭಿಪ್ರಾಯಪಟ್ಟಿದ್ದಾರೆ.

ಅವರು ಬೆಂಗಳೂರಿನ ಉತ್ಥಾನ ಮಾಸಪತ್ರಿಕೆ ಕಾಲೇಜು ವಿದ್ಯಾರ್ಥಿಗಳಿಗಾಗಿ ಆಯೋಜಿಸಿದ ರಾಜ್ಯ ಮಟ್ಟದ ಪ್ರಬಂಧ ಸ್ಪರ್ಧೆಯ ಬಹುಮಾನ ವಿತರಣಾ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿಮಾತನಾಡಿದರು.

ಸಮಾಜದಲ್ಲಿ ಮೌಲ್ಯಗಳು ಕುಸಿಯುತ್ತಿರಲು ಹಲವು ಕಾರಣಗಳಲ್ಲಿ ಮಾಧ್ಯಮದ ಪಾತ್ರ ಕೂಡ ಒಂದು ಎಂಬುದು ಸತ್ಯ. ಇದನ್ನು ಬದಲಿಸಬೇಕಾದ ಅಗತ್ಯವಿದೆ. ಅದಕ್ಕಾಗಿ ಮಾಧ್ಯಮಗಳ ಪ್ರಮುಖರು ಬಂದುಗೂಡಿ ಎಂತಹ ಸುದ್ದಿಗಳನ್ನು ಸಮಾಜಕ್ಕೆ ನೀಡಬೇಕು ಎಂಬ ಕುರಿತು ಸುದೀರ್ಘ ಚರ್ಚೆ ನಡೆಸಬೇಕಾದ ಅಗತ್ಯವಿದೆ ಎಂದರು.

ವೈಚಾರಿಕತೆ, ಸಂಶೋಧನೆಯಿಂದ ಪ್ರಾರಂಭಿಸಿ ಆರೋಗ್ಯದ ತನಕ ನಾವು ಎಲ್ಲ ವಿಷಯಗಳನ್ನು ವಿದೇಶೀ ಮಾನದಂಡಗಳ ಆಧಾರದಲ್ಲಿ ಪ್ರಸ್ತುತ ಪಡಿಸುತ್ತಿದ್ದೇವೆ. ಆದರೆ ಇದು ದೇಶ- ಕಾಲಕ್ಕೆ ಭಿನ್ನವಾಗಿರುತ್ತದೆ.  ಈ ವಾಸ್ತವವನ್ನು  ಮನಸ್ಸಿನಲ್ಲಿಟ್ಟುಕೊಂಡು  ನಮ್ಮ ಸಂಶೋಧನೆಗಳು ನಡೆಯಬೇಕಾಗಿದೆ  ಎಂದು  ರವಿ ಹೆಗಡೆ ಹೇಳಿದರು.

ಕನ್ನಡದ ಸಮಸ್ಯೆ ಎನೆಂದರೆ ಇದರ ಆರ್ಥಿಕ ಮೌಲ್ಯ. ಪ್ರತಿಯೊಂದು ಭಾಷೆಗೂ ಒಂದು ಆರ್ಥಿಕ ಮೌಲ್ಯವಿರುತ್ತದೆ. ಉದಾಹರಣಗೆ ಒಂದು ಹಾಲಿವುಡ್, ಬಾಲಿವುಡ್  ಅಥವಾ ಟಾಲಿವುಡ್ ಸಿನಿಮಾಗಳ ಮಾರುಕಟ್ಟೆ ದೊಡ್ಡದಾಗಿರುತ್ತದೆ. ಹೀಗಾಗಿ ಅವರ ಖರ್ಚಿಗಿಂತ ಒಂದೆರಡು ಪಟ್ಟು ಹೆಚ್ಚು ಗಳಿಕೆ ಮಾಡಬಲ್ಲದು. ಆದರೆ ಕನ್ನಡದ ಪರಿಸ್ಥಿತಿ ಹಾಗಿಲ್ಲ. ನಮ್ಮಲ್ಲಿ ಗರಿಷ್ಠ ಖರ್ಚಿನ ಮುಕ್ಕಾಲು ಭಾಗ ಗಳಿಕೆಮಾಡಬಹುದಷ್ಟೆ.  ದಕ್ಷಿಣ ಕರ್ನಾಟಕದ ಸಿನೆಮಾ ಉತ್ತರ ಕರ್ನಾಟಕದಲ್ಲಿ ಪ್ರದರ್ಶನ ಕಾಣುವುದಿಲ್ಲ. ಇದು ಬದಲಾಗಬೇಕು. ಕನ್ನಡ ತನ್ನದೇ ಆದ ಮಾರುಕಟ್ಟೆ,  ಆರ್ಥಿಕತೆಯನ್ನು ಗಳಿಸಬೇಕು. ಸಾಮಾಜಿಕ ಘನೆತೆ ಹಾಗೂ ತನ್ನ ಪೂರೈಕೆಗಳನ್ನು ಪೂರೈಸುವ ಸಾಮರ್ಥ್ಯವನ್ನು ಕನ್ನಡ ಗಳಿಸಿಕೊಂಡಾಗ

ಮಾತ್ರ ಅದರ ಅಸ್ಥಿತ್ವ ಉಳಿಯಲು ಬೆಳೆಯಲು ಸಾಧ್ಯ. ಭಾಷೆ ಬೆಳೆಯಬೇಕಾದರೆ ವ್ಯಾವಾಹಾರಿಕ ಮತ್ತು ಆಡಳಿತಾತ್ಮಕತೆ ಅಗತ್ಯ ಎಂದರು.

ಉತ್ಥಾನ ಮಾಸಪತ್ರಿಕೆ ಕಳೆದ 6  ವರ್ಷಗಳಿಂದ ಕಾಲೇಜು ವಿದ್ಯಾರ್ಥಿಗಳಿಗಾಗಿ ರಾಜ್ಯ ಮಟ್ಟದ ಸಂಶೋಧನಾ ಪ್ರಬಂಧವನ್ನು ನಡೆಸುತ್ತಿದ್ದು, ಈ ವರ್ಷ ಕನ್ನಡ ಭಾಷೆ: ನಿನ್ನೆ-ಇಂದು-ನಾಳೆ ಸವಾಲುಗಳು ಮತ್ತು  ಅವಕಾಶಗಳು ಎಂಬ ವಿಷಯದ ಕುರಿತು ನಡೆದ  ಸ್ಪರ್ಧೆ ನಡೆಯಿತು. ಫಲಿತಾಂಶ ಹೀಗಿದೆ.

  1. ಮೊದಲ ಬಹುಮಾನ : ದಕ್ಷಿಣ ಕನ್ನಡದ ನೆಹರು ಮೆಮೋರಿಯಲ್  ಕಾಲೇಜಿನ ತೃತೀಯ ಬಿ.ಎಸ್ಸಿ. ವಿದ್ಯಾರ್ಥಿನಿ ಸುಶ್ಮಿತಾ ಕೆ.ವೈ.
  2. ದ್ವಿತೀಯ ಬಹುಮಾನ : ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನ ವಿವೇಕಾನಂದ ಮಹಾವಿದ್ಯಾಲಯದ ಪ್ರಥಮ ಬಿ.ಎಸ್ಸಿ. ವಿದ್ಯಾರ್ಥಿನಿ  ಭಾಗ್ಯಲಕ್ಷ್ಮೀ
  3. ಮೂರನೇ ಬಹುಮಾನ :  ಬೆಂಗಳೂರಿನ ಪಿ.ಇ.ಎಸ್. ಯುನಿವರ್ಸಿಟಿಯ  ತೃತೀಯ ವರ್ಷದ ಇಂಜಿನಿಯರ್  ವಿದ್ಯಾರ್ಥಿನಿ ಮಾನಸಾ ಎಂ. ಹೆಗಡೆ
  4.  ಮೆಚ್ಚುಗೆಯ ಬಹುಮಾನ : ಸುಳ್ಯದ ನೆಹರು ಮೆಮೋರಿಯಲ್ ಕಾಲೇಜಿನ ಶರಣ್ಯಎಸ್. ಹಾಗೂ ಕಾರ್ಕಳದ ಭುವನೇಂದ್ರ ಕಾಲೇಜಿನ ಕೆ. ಸುಷ್ಮಾ

ತೀರ್ಪುಗಾರರು : 

  1. ಸಿಬಂತಿ ಪದ್ಮನಾಭ, ಉಪನ್ಯಾಸಕರು, ಪತ್ರಿಕೋದ್ಯಮ ವಿಭಾಗ,   ತುಮಕೂರು ವಿಶ್ವವಿದ್ಯಾಲಯ
  2. ಡಾ. ಲೋಕೇಶ್, ಉಪನ್ಯಾಸಕರು, ಆರ್.ವಿ.ಟೀಚರ್ಸ್ ಕಾಲೇಜು, ಬೆಂಗಳೂರು
  3. ಸಂತೋಷ್ ತಮ್ಮಯ್ಯ, ಪತ್ರಕರ್ತರು
  4. ಬೇಳೂರು ಸುದರ್ಶನ್,  ಲೇಖಕರು

ಬಹುಮಾನ ವಿತರಣಾ  ಕಾರ್ಯಕ್ರಮದಲ್ಲಿ ರಾಷ್ಟ್ರೋತ್ಥಾನ ಪರಿಷತ್ತಿನ ಪ್ರಧಾನ ಕಾರ್ಯದರ್ಶಿ ನಾ. ದಿನೇಶ್ ಹೆಗ್ಡೆ,  ತೀರ್ಪುಗಾರರಾದ ಸಿಬಂತಿ ಪದ್ಮನಾಭ ಹಾಗೂ  ಡಾ|| ಲೋಕೇಶ್, ಆಡಳಿತ ಮಂಡಳಿ ಸದಸ್ಯ ಕೆ.ಎಸ್. ನಾರಾಯಣ, ಉತ್ಥಾನದ ಸಂಪಾದಕ ಕಾ. ಕೇಶವ ಭಟ್,  ಆರೆಸ್ಸೆಸ್ ಪ್ರಚಾರ ವಿಭಾಗದ ರಾಧಾಕೃಷ್ಣ ಹೊಳ್ಳ ಉಪಸ್ಥಿತರಿದ್ದರು.

 

ನಿಮ್ಮ ಪ್ರತಿಕ್ರಿಯೆ ನೀಡಿ

ಉತ್ಥಾನ - ಸದಭಿರುಚಿಯ ಮಾಸಪತ್ರಿಕೆ

`ಉತ್ಥಾನ’ : ೧೯೬೫ರಿಂದ ಪ್ರಕಟವಾಗುತ್ತಿರುವ ಕನ್ನಡದ ಹೆಮ್ಮೆಯ ಸದಭಿರುಚಿಯ ಮಾಸಪತ್ರಿಕೆ. ರಾಜ್ಯದಾದ್ಯಂತ ಪ್ರಸರಣ ಇರುವ ಸಂಚಿಕೆಯು ಈಗ ಕ್ರೌನ್‌ ಚತುರ್ದಳ ಆಕಾರದಲ್ಲಿ ೧೧೨ ವರ್ಣಪುಟಗಳಲ್ಲಿ ವೈವಿಧ್ಯಮಯ ಲೇಖನ, ನುಡಿಚಿತ್ರ, ಸಾಹಿತ್ಯದ ಬರಹಗಳನ್ನು ಪ್ರಕಟಿಸುತ್ತಿದೆ.  ಸಂಚಿಕೆಯ ಬೆ ಲೆ ೨೦ ರೂ.

Utthana
Kannada Monthly Magazine ​
Utthana Trust
Keshavashilpa, Kempegowda Nagara
Bengaluru - 560019
Karnataka State , INDIA

Phone : 080-26612732
Email : utthana1965@gmail.com

ಉತ್ಥಾನದ ಹೊಸ ಪ್ರಕಟಣೆಗಳ ಬಗ್ಗೆ ನಿಮ್ಮ ಈಮೈಲ್‌ ಅಂಚೆಪೆಟ್ಟಿಗೆಯಲ್ಲೇ ಮಾಹಿತಿ ಪಡೆಯಿರಿ. ಇದಕ್ಕಾಗಿ ನಮ್ಮ ವಾರ್ತಾಪತ್ರಕ್ಕೆ ಉಚಿತವಾಗಿ ಚಂದಾದಾರರಾಗಿ