ಉತ್ಥಾನ
ಕಾಲೇಜು ವಿದ್ಯಾರ್ಥಿಗಳಿಗಾಗಿ ಪ್ರಬಂಧ ಸ್ಪರ್ಧೆ – ೨೦೨೧
ವಿಷಯ: ಭಾರತದ ಸ್ವಾತಂತ್ರ್ಯ ಹೋರಾಟಕ್ಕಿದೆ ಸಾವಿರಾರು ವರ್ಷಗಳ ಇತಿಹಾಸ
ಉತ್ಥಾನ ಮಾಸಪತ್ರಿಕೆಯ ವತಿಯಿಂದ ಕಾಲೇಜು ವಿದ್ಯಾರ್ಥಿಗಳಿಗಾಗಿ ’ಭಾರತದ ಸ್ವಾತಂತ್ರ್ಯ ಹೋರಾಟದ ಮಜಲುಗಳು’ ಎಂಬ ವಿಷಯದ ಕುರಿತು ರಾಜ್ಯಮಟ್ಟದ ವಾರ್ಷಿಕ ಪ್ರಬಂಧ ಸ್ಪರ್ಧೆಯನ್ನು ಆಯೋಜಿಸಲಾಗಿತ್ತು. ಅದರಲ್ಲಿ ಪುತ್ತೂರು ವಿವೇಕಾನಂದ ಮಹಾವಿದ್ಯಾಲಯದ ಪತ್ರಿಕೋದ್ಯಮ ವಿದ್ಯಾರ್ಥಿ ಅರುಣ್‌ಕುಮಾರ್ ಡಿ. ಪ್ರಥಮಸ್ಥಾನ (ರೂ. ೧೦,೦೦೦) ಪಡೆದಿದ್ದಾರೆ.
ತುಮಕೂರು ವಿಶ್ವವಿದ್ಯಾನಿಲಯದ ವಿದ್ಯಾರ್ಥಿ ಅಭಿಷೇಕ್ ಎಂ.ವಿ. ಎರಡನೆಯ ಬಹುಮಾನವನ್ನು (ರೂ. ೭,೦೦೦) ಮತ್ತು ಕುಂದಾಪುರ ಭಂತಿಂಡರ್ ಕಾರ್ಸ್ ಕಲಾ ಮತ್ತು ವಿಜ್ಞಾನ ಕಾಲೇಜಿನ ವಿದ್ಯಾರ್ಥಿನಿ ಸರಿತಾ ಶೆಟ್ಟಿ ಮೂರನೆಯ ಬಹುಮಾನವನ್ನು (ರೂ. ೫,೦೦೦) ಪಡೆದುಕೊಂಡಿದ್ದಾರೆ.
ಈ ಪ್ರಬಂಧ ಸ್ಪರ್ಧೆಯಲ್ಲಿ ಹತ್ತು ಮೆಚ್ಚುಗೆಯ ಬಹುಮಾನಗಳಿದ್ದು, (ತಲಾ ರೂ. ೨,೦೦೦) ಹೇಮಾ ಬಿ. ಆರ್., ಕಾವ್ಯ ಎಂ.ಡಿ., ಜಯಶ್ರೀ ಶ್ರೀಪಾದ ಭಟ್ಟ, ಮೇಘಶ್ರೀ.ಕೆ, ನವೀನ್ ಆರ್. ಭಟ್, ವನಜಾಕ್ಷಿ ಬಿ.ಆರ್., ಸುವರ್ಣ ಎಸ್., ಪನ್ನಗ ಪಿ. ರಾಯ್ಕರ್, ಶಬ್ರಿನ್ ಕೌಸರ್, ಮಮತಾ ಎಚ್.ಜಿ. ಪಡೆದಿದ್ದಾರೆ.
ಪ್ರಬಂಧ ಸ್ಪರ್ಧೆಯಲ್ಲಿ ಕರ್ನಾಟಕ ನಾಟಕ ಅಕಾಡೆಮಿ ಅಧ್ಯಕ್ಷರಾದ ಪ್ರೊ. ಆರ್. ಭೀಮಸೇನ, ಕುಂದಾಪುರದ ಪ್ರಾಧ್ಯಾಪಕರಾದ ಡಾ. ಸೌಮ್ಯ ಪ್ರದೀಪ್ ಹಾಗೂ ತುಮಕೂರಿನ ಪ್ರಾಧ್ಯಾಪಕರಾದ ಡಾ. ಗೋವಿಂದರಾಯ ತೀರ್ಪುಗಾರರಾಗಿದ್ದರು.
೨೦೨೧ರ ಸಾಲಿನ ’ಉತ್ಥಾನ’ ಪ್ರಬಂಧ ಸ್ಪರ್ಧೆಗೆ ರಾಜ್ಯದ ೨೦ ಜಿಲ್ಲೆಗಳ ೧೨೬ ಕಾಲೇಜುಗಳಿಂದ ಒಟ್ಟು ೨೨೪ ವಿದ್ಯಾರ್ಥಿಗಳು ಭಾಗವಹಿಸಿದ್ದರು.
ಈ ಪ್ರಬಂಧ ಸ್ಪರ್ಧೆಯಲ್ಲಿ ಸ್ವರಾಜ್ಯ ಅಥವಾ ಸ್ವಾತಂತ್ರ್ಯ ಎಂದರೆ ನಿಮ್ಮ ಕಲ್ಪನೆ ಏನು? ಜಗತ್ತಿನ ಇನ್ನಾವುದೇ ದೇಶ ಎದುರಿಸಿದಷ್ಟು ಪರಕೀಯ ಆಕ್ರಮಣಗಳನ್ನು ಎದುರಿಸಿದ ನಂತರವೂ ಭಾರತ ತನ್ನತನವನ್ನು ಉಳಿಸಿ, ಸಂರಕ್ಷಿಸಿಕೊಂಡು ಬಂದಿದೆ. ಇದು ಹೇಗೆ ಸಾಧ್ಯವಾಯಿತು? ಗ್ರೀಕರು, ಕುಶಾನರು, ಹೂಣರು, ಅರಬ್ಬರು, ಮೊಘಲರು, ಪೋರ್ಚುಗೀಸರು, ಡಚ್ಚರು, ಫ್ರೆಂಚರು, ಕೊನೆಗೆ ಆಂಗ್ಲರು – ಹೀಗೆ ಭಾರತದ ಸ್ವಾತಂತ್ರ್ಯ ಹೋರಾಟಕ್ಕೆ ದೀರ್ಘಕಾಲಿಕ ಇತಿಹಾಸವಿದೆಯಲ್ಲವೆ? ಭಾರತದ ಸ್ವಾತಂತ್ರ್ಯ ಹೋರಾಟದಲ್ಲಿ ಎಷ್ಟು ಧಾರೆಗಳನ್ನು ಗುರುತಿಸಬಹುದು? ಭಾರತದ ಸ್ವರಾಜ್ಯ-ಸ್ವಾತಂತ್ರ್ಯ ಹೋರಾಟದಲ್ಲಿ ಸಮಾಜ ಸುಧಾರಣೆಯ ಪಾತ್ರವೇನು ಎಂಬ ಪ್ರಮುಖ ಆಧಾರ ಬಿಂಧುಗಳೊಂದಿಗೆ ೧೫೦೦ ಪದಗಳಿಗೆ ಮೀರದಂತೆ ಪ್ರಬಂಧ ರಚಿಸಲು ಸೂಚಿಸಲಾಗಿತ್ತು.
ಮೊದಲ ಬಹುಮಾನ: ರೂ. ೧೦,೦೦೦ /-
ಅರುಣ್‌ಕುಮಾರ್ ಡಿ
ಎಂ.ಎ., ದ್ವಿತೀಯ ವರ್ಷ,
ಪತ್ರಿಕೋದ್ಯಮ ವಿಭಾಗ, ವಿವೇಕಾನಂದ ಮಹಾವಿದ್ಯಾಲಯ, ಪುತ್ತೂರು
ಎರಡನೆಯ ಬಹುಮಾನ: ರೂ. ೭,೦೦೦ /-
ಅಭಿಷೇಕ್ ಎಂ.ವಿ.
ಎಂ.ಎ. ಅಂತಿಮ ವರ್ಷ
ತುಮಕೂರು ವಿಶ್ವವಿದ್ಯಾನಿಲಯ ತುಮಕೂರು
ಮೂರನೆಯ ಬಹುಮಾನ: ರೂ. ೫,೦೦೦/-
ಸರಿತಾ ಶೆಟ್ಟಿ
ಬಿ.ಎ. ೩ನೇ ವರ್ಷ
ಭಂಡರ್ ಕಾರ್ಸ್ ಕಲಾ ಮತ್ತು ವಿಜ್ಞಾನ ಕಾಲೇಜು ಕುಂದಾಪುರ
ಹತ್ತು ಮೆಚ್ಚುಗೆಯ ಬಹುಮಾನಗಳು: ತಲಾ ರೂ. ೨,೦೦೦/-
ಹೇಮಾ ಬಿ. ಆರ್.
ಬಿ.ಇಡಿ. ೨ನೇ ಸೆಮಿಸ್ಟರ್
ಬಿಜಿಎಸ್ ಶಿಕ್ಷಣ ಮಹಾವಿದ್ಯಾಲಯ, ಆದಿಚುಂಚನಗಿರಿ, ಮಂಡ್ಯ
ಕಾವ್ಯ ಎಂ.ಡಿ.
ಬಿ.ಎಸ್ಸಿ. ೨ನೇ ವರ್ಷಸಹ್ಯಾದ್ರಿ ವಿಜ್ಞಾನ ಕಾಲೇಜು, ಶಿವಮೊಗ್ಗ
ಜಯಶ್ರೀ ಶ್ರೀಪಾದ ಭಟ್ಟ
ಬಿ.ಎಡ್. ೧ನೇ ವರ್ಷ
ಶಿವಾಜಿ ಶಿಕ್ಷಣ ಮಹಾವಿದ್ಯಾಲಯ, ಬಾಡ, ಕಾರವಾರ
ಮೇಘಶ್ರೀ.ಕೆ
ಬಿ.ಎಡ್., ೧ನೇ ವರ್ಷ
ಶಿವಾಜಿ ಶಿಕ್ಷಣ ಮಹಾವಿದ್ಯಾಲಯ ಬಾಡ, ಕಾರವಾರ, ಉತ್ತರ ಕನ್ನಡ
ನವೀನ್ ಆರ್.ಭಟ್
ಎಂಬಿಎ ೨ನೇ ವರ್ಷ
ಪೂರ್ಣಪ್ರಜ್ಞ ಇನ್‌ಸ್ಟಿಟ್ಯೂಟ್ ಆಫ್ ಮ್ಯಾನೇಜ್‌ಮೆಂಟ್ ಉಡುಪಿ
ವನಜಾಕ್ಷಿ ಬಿ.ಆರ್.
ಬಿ.ಇ. ೨ನೇ ವರ್ಷ
ಸರ್ಕಾರಿ ಇಂಜಿನಿಯರಿಂಗ್ ಕಾಲೇಜು, ಹಾಸನ
ಸುವರ್ಣ ಎಸ್.
ಬಿಕಾಂ, ೩ನೇ ಸೆಮಿಸ್ಟರ್
ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಕೆಂಬಾವಿ
ಪನ್ನಗ ಪಿ. ರಾಯ್ಕರ್
ಬಿ.ಕಾಂ. ೨ನೇ ವರ್ಷ
ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಹೊಸದುರ್ಗ
ಶಬ್ರಿನ್ ಕೌಸರ್
ಎಂ.ಎ. ಕನ್ನಡ ೨ನೇ ವರ್ಷ
ಕುವೆಂಪು ಕನ್ನಡ ಅಧ್ಯಯನ ಸಂಸ್ಥೆ ಮೈಸೂರು
ಮಮತಾ ಎಚ್.ಜಿ.
ಬಿ.ಕಾಂ., ೧ನೇ ವರ್ಷ
ಸರ್ಕಾರಿ ಪ್ರಥಮ ದರ್ಜೆ ಕಾಲೇಜು ತುಮಕೂರು
ತೀರ್ಪುಗಾರರು:
ಪ್ರೊ. ಆರ್. ಭೀಮಸೇನ, ಅಧ್ಯಕ್ಷರು, ಕರ್ನಾಟಕ ನಾಟಕ ಅಕಾಡೆಮಿ
ಡಾ. ಸೌಮ್ಯ ಪ್ರದೀಪ್, ಪ್ರಾಧ್ಯಾಪಕರು, ಕುಂದಾಪುರ
ಡಾ. ಗೋವಿಂದರಾಯ, ಪ್ರಾಧ್ಯಾಪಕರು, ತುಮಕೂರು