ಬೆಂಗಳೂರು: ಬರವಣಿಗೆ ಸಾಮಾಜಿಕ ಬದ್ಧತೆ ಮತ್ತು ಹೊಣೆಗಾರಿಕೆಯಿಂದ ಕೂಡಿರಬೇಕು. ನಮ್ಮ ಸೃಜನಶೀಲತೆ ಬರವಣಿಗೆಯ ಮೌಲ್ಯವನ್ನು ಹೆಚ್ಚಿಸುತ್ತದೆ ಎಂದು ಕರ್ನಾಟಕ ಸರ್ಕಾರದ ಮಾನ್ಯ ಮುಖ್ಯಮಂತ್ರಿ ಇ-ಆಡಳಿತ ಸಲಹೆಗಾರರಾದ ಬೇಳೂರು ಸುದರ್ಶನ್ ಅವರು ತಿಳಿಸಿದರು.
ಅವರು ಉತ್ಥಾನ ಮಾಸಪತ್ರಿಕೆ ವತಿಯಿಂದ ಕೆಂಪೇಗೌಡ ನಗರದ ರಾಷ್ಟ್ರೋತ್ಥಾನ ಪರಿಷತ್‌ನಲ್ಲಿ ಫೆ. ೨೭ರಂದು ನಡೆದ ಉತ್ಥಾನ ವಾರ್ಷಿಕ ಪ್ರಬಂಧ ಸ್ಪರ್ಧೆ ೨೦೨೧ರ ಬಹುಮಾನ ವಿತರಣಾ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿ ಮಾತನಾಡಿದರು.
ಬರಹಗಾರನಿಗೆ ಭಾಷೆಯ ಮೇಲೆ ಹಿಡಿತವಿರಬೇಕು. ಈ ಹಿಡಿತ ಅಧ್ಯಯನದಿಂದಲೇ ಸಿದ್ದಿಸುತ್ತದೆ. ಕಲಿಯಬೇಕಾಗರುವುದು ಸಾಗರದಷ್ಟಿದೆ. ಸದಾ ವಿದ್ಯಾರ್ಥಿಯಾಗಿ ಕಲಿಯುತ್ತಿರೋಣ ಎಂದರು.
ಸಾಮಾಜಿಕ ಕಾರ್ಯಕರ್ತರಾದ ವಾದಿರಾಜ್ ಮಾತನಾಡಿ, ಬರಹಗಾರನಿಗೆ ಸಮಾಜದ ನೋವು-ನಲಿವು ಅರಿವಿರಬೇಕು. ಇದಕ್ಕಾಗಿ ಅಧ್ಯಯನದ ಜೊತೆಜೊತೆಗೆ ಅವುಗಳನ್ನು ಸ್ವತಃ ಸಂದರ್ಶಿಸುವ, ಭೇಟಿ ನೀಡುವುದನ್ನು ರೂಢಿಸಿಕೊಳ್ಳಬೇಕು. ವಿವಿಧ ಸ್ಥಳ ಭೇಟಿ ಮತ್ತು ಅಲ್ಲಿನ ಒಳಹೊರಗುಗಳನ್ನು ಒಳನೋಟಗಳಿಂದ ಗ್ರಹಿಸುವ ಸಾಮರ್ಥ್ಯ ರೂಢಿಸಿಕೊಳ್ಳಬೇಕು. ಆಗ ನಮ್ಮ ಬರಹ ಗಟ್ಟಿಯಾಗಿರುತ್ತದೆ ಮತ್ತು ದೀರ್ಘಕಾಲ ಉಳಿಯುತ್ತದೆ ಎಂದರು.
ರಾಷ್ಟ್ರೋತ್ಥಾನ ಪರಿಷತ್ತಿನ ಪ್ರಧಾನ ಕಾರ್ಯದರ್ಶಿಯಾದ ನಾ. ದಿನೇಶ್ ಹೆಗ್ಡೆ ಮಾತನಾಡಿ, ರಾಷ್ಟ್ರೋತ್ಥಾನ ಪರಿಷತ್ ಹಲವು ದಶಕಗಳಿಂದ ಸಾಮಾಜಿಕ ಸೇವೆಯಲ್ಲಿ ತೊಡಗಿದೆ. ಸಾಹಿತ್ಯ ಕ್ಷೇತ್ರ, ಪತ್ರಿಕಾ ಕ್ಷೇತ್ರ ಮತ್ತು ಶಿಕ್ಷಣ ಕ್ಷೇತ್ರದಲ್ಲಿ ಗಮನಾರ್ಹ ಸೇವೆಯನ್ನು ಮಾಡಿದೆ ಎಂದು ಹೇಳಿದರು.
ಈ ವೇಳೆ ಉತ್ಥಾನ ವಾರ್ಷಿಕ ಪ್ರಬಂಧ ಸ್ಪರ್ಧೆ-೨೦೨೧ರ ವಿಜೇತರಿಗೆ ಬಹುಮಾನವನ್ನು ನೀಡಲಾಯಿತು.
ವಿಜೇತರು: ಉತ್ಥಾನ ವಾರ್ಷಿಕ ಪ್ರಬಂಧ ಸ್ಪರ್ಧೆ ೨೦೨೧ರಲ್ಲಿ ಪುತ್ತೂರಿನ ವಿವೇಕಾನಂದ ಮಹಾವಿದ್ಯಾಲಯದ ಅರುಣ್ ಕುಮಾರ್ ಡಿ. (ಪ್ರಥಮ), ತುಮಕೂರು ವಿಶ್ಯವಿದ್ಯಾಲಯದ ಅಭಿಷೇಕ್ ಎಂ.ವಿ. (ದ್ವಿತೀಯ) ಕುಂದಾಪುರದ ಭಂಡಾರ್‌ಕಾರ್ಸ್ ಕಾಲೇಜಿನ ಸರಿತಾ ಶೆಟ್ಟಿ (ತೃತೀಯ) ಬಹುಮಾನಕ್ಕೆ ಪಾತ್ರರಾಗಿದ್ದಾರೆ.
೧೦ ಮಂದಿಗೆ ಮೆಚ್ಚುಗೆ ಬಹುಮಾನ: ಆದಿಚುಂಚನಗಿರಿಯ ಬಿಜಿಎಸ್ ಶಿಕ್ಷಣ ಮಹಾವಿದ್ಯಾಲಯದ ಹೇಮಾ ಬಿ. ಆರ್., ಶಿವಮೊಗ್ಗದ ಸಹ್ಯಾದ್ರಿ ವಿಜ್ಞಾನ ಕಾಲೇಜಿನ ಕಾವ್ಯ ಎಂ.ಡಿ., ಕಾರವಾರದ ಶಿವಾಜಿ ಶಿಕ್ಷಣ ಮಹಾವಿದ್ಯಾಲಯದ ಜಯಶ್ರೀ ಶ್ರೀಪಾದ ಭಟ್ಟ ಹಾಗೂ ಮೇಘಶ್ರೀ.ಕೆ, ಉಡುಪಿಯ ಪೂರ್ಣಪ್ರಜ್ಞ ಇನ್‌ಸ್ಟಿಟ್ಯೂಟ್ ಆಫ್ ಮ್ಯಾನೇಜ್‌ಮೆಂಟ್‌ನ ನವೀನ್ ಆರ್. ಭಟ್, ಹಾಸನದ ಸರ್ಕಾರಿ ಇಂಜಿನಿಯರಿಂಗ್ ಕಾಲೇಜಿನ ವನಜಾಕ್ಷಿ ಬಿ.ಆರ್., ಯಾದಗಿರಿಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಸುವರ್ಣ ಎಸ್., ಹೊಸದುರ್ಗದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪನ್ನಗ ಪಿ. ರಾಯ್ಕರ್, ಮೈಸೂರಿನ ಕುವೆಂಪು ಕನ್ನಡ ಅಧ್ಯಯನ ಸಂಸ್ಥೆಯ ಶಬ್ರಿನ್ ಕೌಸರ್, ತುಮಕೂರಿನ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಮಮತಾ ಎಚ್.ಜಿ. ಅವರು ಮೆಚ್ಚುಗೆ ಬಹುಮಾನವನ್ನು ಪಡೆದಿದ್ದಾರೆ.
ಕಾರ್ಯಕ್ರಮದಲ್ಲಿ ಉತ್ಥಾನ ಮಾಸಪತ್ರಿಕೆಯ ಗೌರವ ಸಂಪಾದಕರಾದ ಎಸ್.ಆರ್. ರಾಮಸ್ವಾಮಿ, ರಾಷ್ಟ್ರೋತ್ಥಾನ ಪರಿಷತ್ತಿನ ಖಜಾಂಚಿಯಾದ ಕೆ.ಎಸ್. ನಾರಾಯಣ, ಉತ್ಥಾನ ಮಾಸಪತ್ರಿಕೆಯ ಸಂಪಾದಕರಾದ ಅನಿಲ್‌ಕುಮಾರ್ ಮೊಳಹಳ್ಳಿ ಅವರು ಭಾಗವಹಿಸಿದ್ದರು.
ಪ್ರಥಮ ಸ್ಥಾನ ಪಡೆದ ಅರುಣ್ ಕುಮಾರ್ ಡಿ. ಅವರಿಗೆ ಗಣ್ಯರಿಂದ ಬಹುಮಾನ ವಿತರಣೆ
ದ್ವಿತೀಯ ಸ್ಥಾನ ಪಡೆದ ಅಭಿಷೇಕ್ ಎಂ.ವಿ. ಅವರಿಗೆ ಗಣ್ಯರಿಂದ ಬಹುಮಾನ ವಿತರಣೆ
ಮೆಚ್ಚುಗೆಯ ಬಹುಮಾನ ಪಡೆದ ಹೇಮಾ ಬಿ.ಆರ್. ಅವರಿಗೆ ಗಣ್ಯರಿಂದ ಬಹುಮಾನ ವಿತರಣೆ
ಮೆಚ್ಚುಗೆಯ ಬಹುಮಾನ ಪಡೆದ ವನಜಾಕ್ಷಿ ಬಿ. ಆರ್. ಅವರಿಗೆ ಗಣ್ಯರಿಂದ ಬಹುಮಾನ ವಿತರಣೆ
ಮೆಚ್ಚುಗೆಯ ಬಹುಮಾನ ಪಡೆದ ಮೇಘಶ್ರೀ ಕೆ. ಅವರಿಗೆ ಗಣ್ಯರಿಂದ ಬಹುಮಾನ ವಿತರಣೆ
ಮೆಚ್ಚುಗೆಯ ಬಹುಮಾನ ಪಡೆದ ಪನ್ನಗ ಪಿ. ರಾಯ್ಕರ್ ಅವರಿಗೆ ಗಣ್ಯರಿಂದ ಬಹುಮಾನ ವಿತರಣೆ
ಮೆಚ್ಚುಗೆಯ ಬಹುಮಾನ ಪಡೆದ ಮಮತಾ ಎಚ್.ಜಿ. ಅವರಿಗೆ ಗಣ್ಯರಿಂದ ಬಹುಮಾನ ವಿತರಣೆ