
ಅವನು ಹೀಗೆ ಸಟಕ್ಕನೆ ಬರುತ್ತಾನೆಂದು ತಿಳಿದುಕೊಂಡಿರಲಿಲ್ಲ. ‘ಥರ್ಡ್ ಮೇನ್… ಸಿಕ್ಸ್ ಕ್ರಾಸ್…. ನಾಗರಬಾವಿ ಏರಿಯಾ ಅಲ್ಲವೇನೋ….’ ಮೊನ್ನೆ ನಾನು ಆಫೀಸಿನಲ್ಲಿದ್ದಾಗ ಅವನಿಂದ ಫೋನ್ ಬಂದಿತ್ತು. ‘ಅಡ್ರೆಸ್ ಸರಿಯಾಗಿದೆ…’ ಎಂದು ಫೋನ್ ಇಟ್ಟವನಿಗೆ ಆಫೀಸಿನ ಕೆಲಸದ ಮಧ್ಯೆ ಮರೆತುಹೋಗಿತ್ತು. ‘ಈ ಬೆಂಗಳೂರಿನಲ್ಲಿ ಇವನು ಅಡ್ರೆಸ್ ಹುಡುಕಿ ಬರುವುದಾದರೂ ಹೌದಾ?’ ಎಂಬ ಉಡಾಫೆ… ಶೀಲಾಳ ಬಳಿಯೂ ಹೇಳಿರಲಿಲ್ಲ. ಆದರೆ ಆ ದಿನ ಸಂಜೆ ಮನೆಯೊಳಗೆ ಬರುತ್ತಿದ್ದಂತೆ ಹಲಸಿನಹಣ್ಣಿನ ಘಮಘಮ ಮೂಗಿಗೆ… ಹಲಸೆಂದರೆ ತುಂಬ ಪ್ರೀತಿ ನನಗೆ…. ಪರಿಮಳ ಬಂದಿದ್ದು ನನ್ನ […]