
ಭಾರತೀಯ ಜ್ಞಾನಕ್ಷೇತ್ರದ ಮಹಾನ್ ಸಾಧಕರನ್ನು, ಕವಿಗಳನ್ನು, ಅಮರಕೃತಿಗಳನ್ನು ಪ್ರಪಂಚಕ್ಕೆ ನೀಡಿದ ನಾಡು ಭಾರತದ ಮಕುಟಮಣಿಯಾದ ಕಾಶ್ಮೀರ. ಇಂತಹ ಕಾಶ್ಮೀರದಲ್ಲಿ ಬರೆಹವನ್ನು ಮಾಡಲು ಪ್ರಧಾನವಾಗಿ ಬಳಸುತ್ತಿದ್ದ ಲಿಪಿ ಶಾರದಾಲಿಪಿ. ಶಾರದಾ ಲಿಪಿಯು ಕಾಶ್ಮೀರ ಪ್ರದೇಶದಲ್ಲಿ ಬಳಕೆಯಲ್ಲಿರುವ/ಬಳಕೆಯಲ್ಲಿದ್ದ ಪ್ರಮುಖ ಲಿಪಿಯಾಗಿದ್ದು, ಕ್ರಿ.ಶ. 8ನೆಯ ಶತಮಾನದ ಸುಮಾರಿನಿಂದ ಅಸ್ತಿತ್ವದಲ್ಲಿತ್ತು. ಕಾಶ್ಮೀರಕ್ಕೆ ಶಾರದಾಪೀಠವೆಂಬ ಪ್ರಸಿದ್ಧಿಯುಂಟು (ನಮಸ್ತೇ ಶಾರದಾದೇವೀ ಕಾಶ್ಮೀರಪುರವಾಸಿನೀ). ಸರಸ್ವತೀ ದೇವಿಯ ಮತ್ತೊಂದು ಹೆಸರಾದ ಶಾರದಾ ಎಂಬುದನ್ನೇ ಈ ಲಿಪಿಗೆ ಇಟ್ಟಿರುವುದು ಕಂಡುಬರುತ್ತದೆ. ಈ ಲಿಪಿಯು ಕಾಶ್ಮೀರ, ಲಡಾಖ್, ಗಾಂಧಾರ (ಈಗಿನ ಆಫಘನಿಸ್ತಾನದ […]