ಉತ್ಥಾನ - ಸದಭಿರುಚಿಯ ಮಾಸಪತ್ರಿಕೆ
ಪ್ರಕಟಣೆಯ
59ನೇ
ವರ್ಷ

ಉತ್ಥಾನ - ಸದಭಿರುಚಿಯ ಮಾಸಪತ್ರಿಕೆ

Utthana > 2021 > February

ಚೀಣಾ ವಿಸ್ತರಣವಾದದ ಬೇರೊಂದು ಮುಖ

ಚೀಣಾ ವಿಸ್ತರಣವಾದದ ಬೇರೊಂದು ಮುಖ

ಚೀಣಾದಿಂದ ಟಿಬೆಟ್ ದುರಾಕ್ರಮಣ, ಭಾರತದ ಈಶಾನ್ಯ ಭಾಗ ಪ್ರದೇಶದ ಒತ್ತುವರಿ, ಈಚಿನ ವರ್ಷಗಳಲ್ಲಿ ಜಗತ್ತಿನ ಹಲವಾರೆಡೆಗಳಲ್ಲಿ ಬಗೆಬಗೆಯಾಗಿ ನೇರವಾಗಿಯೂ ಛದ್ಮಮಾರ್ಗಗಳಲ್ಲಿಯೂ ಚೀಣಾ ತನ್ನ ಮಾರುಕಟ್ಟೆಗಳನ್ನು ನಿರ್ಮಿಸಿಕೊಳ್ಳುತ್ತಿರುವುದು – ಇವೆಲ್ಲ ಸರ್ವವಿದಿತವೇ ಆಗಿವೆ. ಚೀಣಾದ ವಿಸ್ತರಣ ಪ್ರಯತ್ನಗಳ ಇನ್ನು ಹಲವು ಮುಖಗಳು ಇತ್ತೀಚೆಗೆ ಬೆಳಕಿಗೆ ಬಂದಿವೆ. ಈಗ್ಗೆ ಒಂದು ವರ್ಷ ಹಿಂದೆ (ಫೆಬ್ರುವರಿ 2020) ಅಮೆರಿಕದ ‘ವಾಲ್ ಸ್ಟ್ರೀಟ್ ಜರ್ನಲ್’ನಡೆಸಿದ ಒಂದು ತನಿಖೆಯಿಂದ ಹೊರಪಟ್ಟ ಸಂಗತಿ – ಅಮೆರಿಕದ ಎರಡು ಜಗತ್ಪ್ರಸಿದ್ಧ ವಿಶ್ವವಿದ್ಯಾಲಯಗಳಿಗೆ ಚೀಣಾದಿಂದಲೂ ಸೌದಿ ಅರೇಬಿಯ, ಖಟಾರ್, […]

ಪುನಶ್ಚೇತನ

ಕಳೆದ ವರ್ಷದ ಆರಂಭದಲ್ಲಿ ಜಗತ್ತನ್ನು ಆಕ್ರಮಿಸಿದ ಕೋವಿಡ್-19 ಸಾಂಕ್ರಾಮಿಕ ಈ ವರ್ಷದ ಆರಂಭದಲ್ಲಿ ಬಹುಮಟ್ಟಿಗೆ ಹಿಂದಕ್ಕೆ ಸರಿಯತೊಡಗಿರುವ ಲಕ್ಷಣಗಳು ಗೋಚರಿಸಿವೆ. ಕಳೆದ ಹತ್ತು-ಹನ್ನೊಂದು ತಿಂಗಳಲ್ಲಿ ದೇಶದ ಸಾಮಾಜಿಕ-ಆರ್ಥಿಕ ಜೀವನವಷ್ಟೂ ಗ್ರಹಣಗ್ರಸ್ತವಾದಂತಿತ್ತು. ಜನರಲ್ಲಿ ಹಿಂದೆ ಇದ್ದುದಕ್ಕಿಂತ ಹೆಚ್ಚಿನ ಅನುಶಾಸನವನ್ನು ತಂದಿತೆಂಬ ಪ್ರಶಂಸೆಗೂ ವೈರಾಣು ಅರ್ಹವಾಗಿದೆ. ಎಲ್ಲಿಂದಲೊ ಬಂದೆರಗಿದ ವಿಪತ್ತನ್ನು ಶಾಪವಾಗಿ ಭಾವಿಸದೆ ಅವಕಾಶವನ್ನಾಗಿ ಪರಿವರ್ತಿಸಿದ್ದು ಪ್ರಧಾನಿ ನರೇಂದ್ರ ಮೋದಿಯವರ ಮುತ್ಸದ್ದಿತನ. ಅದರಿಂದಾಗಿ ಆತ್ಮನಿರ್ಭರತೆಯತ್ತಲೂ ಸ್ವಾವಲಂಬನೆಯತ್ತಲೂ ಸ್ಥಳೀಯ ಉತ್ಪಾದನೆಗಳಿಗೆ ಆದ್ಯತೆ ಸಲ್ಲಬೇಕೆನ್ನುವತ್ತಲೂ ದೇಶದ ಗಮನ ಹರಿಯುವಂತಾಯಿತು. ಪರಿಣಾಮವಾಗಿ ಮುಖ್ಯವಾದ ಆರ್ಥಿಕ […]

ದೀಪ್ತಿ

ಯದಿ ಸಂತಿ ಗುಣಾಃ ಪುಂಸಾಂ ವಿಕಸಂತ್ಯೇವ ತೇ ಸ್ವಯಂ | ನ ಹಿ ಕಸ್ತೂರಿಕಾಮೋದಃ ಶಪಥೇನ ವಿಭಾವ್ಯತೇ || – ಕುವಲಯಾನಂದ “ಜನರಲ್ಲಿ ಸ್ವಭಾವಗತವಾದ ಔದಾರ್ಯಾದಿ ಒಳ್ಳೆಯ ಗುಣಗಳಿದ್ದರೆ ಅವು ಯಾವ ಅನ್ಯಪ್ರೋತ್ಸಾಹನವೂ ಇಲ್ಲದೆ ತಾವಾಗಿ ಪ್ರಕಾಶಗೊಳ್ಳುತ್ತವೆ. ಕಸ್ತೂರಿಯ ಸುಗಂಧವನ್ನು ಯಾರೂ ಬಲವಂತದಿಂದ ಹೊರಹೊಮ್ಮಿಸಬೇಕಾಗಿಲ್ಲವಷ್ಟೆ?” ಬೇರೆಯವರಿಗೆ ಉಪಕಾರ ಮಾಡುವುದು ಉತ್ತಮ ವರ್ತನೆ. ಸಂದರ್ಭವಶದಿಂದಲೊ ವ್ಯವಸ್ಥಾನುಗುಣವಾಗಿಯೊ ಅನ್ಯಪ್ರೇರಣೆಯಿಂದಲೊ ಯಾರಿಗೋ ಉಪಕಾರ ಮಾಡಿದರೂ ಅದಕ್ಕೆ ಮೆಚ್ಚಿಕೆ ಸಲ್ಲತಕ್ಕದ್ದೇ. ಆದರೆ ಪರೋಪಕಾರದ ಶ್ರೇಷ್ಠ ರೂಪವೆಂದರೆ ಅವಕಾಶ ಗೋಚರಿಸಿದೊಡನೆ ಯಾವುದಕ್ಕೂ ಕಾಯದೆ ನೆರವಿಗೆ […]

ಕಾಲೇಜು ವಿದ್ಯಾರ್ಥಿಗಳಿಗಾಗಿ ನಡೆದ ವಾರ್ಷಿಕ ಪ್ರಬಂಧಸ್ಪರ್ಧೆ – 2020 ಫಲಿತಾಂಶ

ಕಾಲೇಜು ವಿದ್ಯಾರ್ಥಿಗಳಿಗಾಗಿ ನಡೆದ ವಾರ್ಷಿಕ ಪ್ರಬಂಧಸ್ಪರ್ಧೆ – 2020 ಫಲಿತಾಂಶ

ಉತ್ಥಾನ ಮಾಸಪತ್ರಿಕೆ ಯ ಕಾಲೇಜು ವಿದ್ಯಾರ್ಥಿಗಳಿಗಾಗಿ ಆಯೋಜಿಸಿದ ವಾರ್ಷಿಕ ಪ್ರಬಂಧ ಸ್ಪರ್ಧೆ 2020ರ ಬಹುಮಾನ ವಿತರಣಾ ಕಾರ್ಯಕ್ರಮ ಇಂದು ಬೆಂಗಳೂರಿನ ರಾಷ್ಟ್ರೋತ್ಥಾನ ರಕ್ತಕೇಂದ್ರ ದಲ್ಲಿ ನಡೆಯಿತು. ಹೊಸದಿಗಂತ ದಿನಪತ್ರಿಕೆಯ ಪ್ರಧಾನ ಸಂಪಾದಕರಾದ ವಿನಾಯಕ ಭಟ್ ಮುರೂರು ಅವರು ಮುಖ್ಯ ಅತಿಥಿಗಳಾಗಿ ಆಗಮಿಸಿ ಪ್ರಶಸ್ತಿ ಪ್ರಧಾನ ಮಾಡಿದರು. ಆರ್ಥಿಕ ತಜ್ಞ ಡಾ. ಸಮೀರ್ ಕಾಗಲ್ಕರ್ ಹಾಗೂ ದಯಾನಂದ ಸಾಗರ ದಂತ ವಿಜ್ಞಾನ ಕಾಲೇಜಿನ ಪ್ರಾಂಶುಪಾಲರಾದ ಡಾ|| ಹೇಮಂತ್ ಕುಮಾರ್ ಅವರು ತೀರ್ಪುಗಾರರಾಗಿ ಆಗಮಿಸಿದರು. ರಾಷ್ಟ್ರೋತ್ಥಾನ ಪರಿಷತ್ತಿನ ಪ್ರಧಾನ ಕಾರ್ಯದರ್ಶಿ […]

ಉತ್ಥಾನ - ಸದಭಿರುಚಿಯ ಮಾಸಪತ್ರಿಕೆ

`ಉತ್ಥಾನ’ : ೧೯೬೫ರಿಂದ ಪ್ರಕಟವಾಗುತ್ತಿರುವ ಕನ್ನಡದ ಹೆಮ್ಮೆಯ ಸದಭಿರುಚಿಯ ಮಾಸಪತ್ರಿಕೆ. ರಾಜ್ಯದಾದ್ಯಂತ ಪ್ರಸರಣ ಇರುವ ಸಂಚಿಕೆಯು ಈಗ ಕ್ರೌನ್‌ ಚತುರ್ದಳ ಆಕಾರದಲ್ಲಿ ೧೧೨ ವರ್ಣಪುಟಗಳಲ್ಲಿ ವೈವಿಧ್ಯಮಯ ಲೇಖನ, ನುಡಿಚಿತ್ರ, ಸಾಹಿತ್ಯದ ಬರಹಗಳನ್ನು ಪ್ರಕಟಿಸುತ್ತಿದೆ.  ಸಂಚಿಕೆಯ ಬೆ ಲೆ ೨೦ ರೂ.

Utthana
Kannada Monthly Magazine ​
Utthana Trust
Keshavashilpa, Kempegowda Nagara
Bengaluru - 560019
Karnataka State , INDIA

Phone : 080-26612732
Email : [email protected]

ಉತ್ಥಾನದ ಹೊಸ ಪ್ರಕಟಣೆಗಳ ಬಗ್ಗೆ ನಿಮ್ಮ ಈಮೈಲ್‌ ಅಂಚೆಪೆಟ್ಟಿಗೆಯಲ್ಲೇ ಮಾಹಿತಿ ಪಡೆಯಿರಿ. ಇದಕ್ಕಾಗಿ ನಮ್ಮ ವಾರ್ತಾಪತ್ರಕ್ಕೆ ಉಚಿತವಾಗಿ ಚಂದಾದಾರರಾಗಿ