
೬೯ ವರ್ಷ ವಯಸ್ಸಿನ ವ್ಯಕ್ತಿಯೊಬ್ಬರು ತಮ್ಮ ದೇಶವನ್ನು ಬಿಟ್ಟು ಪರಿಚಯವೇ ಇಲ್ಲದ ಮತ್ತೊಂದು ದೇಶದಲ್ಲಿ ಸುಮಾರು ೧೨ ವರ್ಷಗಳ ಕಾಲ ಸುತ್ತಾಡುತ್ತಾ ಹರೇ ರಾಮ ಮಂತ್ರವನ್ನು ಅಲ್ಲಿನ ಜನರ ಮೂಲಕ ನುಡಿಸುತ್ತಾ ಕೃಷ್ಣಪ್ರಜ್ಞೆಯನ್ನು ಹಬ್ಬಿಸಿದ ರೀತಿ ಅಮೋಘವೇ ಸರಿ. ಶ್ರೀಲ ಪ್ರಭುಪಾದರು ನಿಸ್ಸಂಶಯವಾಗಿ ಭಾರತವು ಜಗತ್ತಿಗೆ ಕೊಡುಗೆಯಾಗಿ ಕೊಟ್ಟ ಶ್ರೇಷ್ಠ ಆಚಾರ್ಯರಲ್ಲೊಬ್ಬರು. ನಾವೆಲ್ಲರೂ ನಮ್ಮ ನೈಜ ವ್ಯಕ್ತಿತ್ವವನ್ನು ಅರಿಯದೆ ಇರುವುದರಿಂದ ಹುಟ್ಟು ಅಜ್ಞಾನಿಗಳೇ. ಸಾಮಾನ್ಯವಾಗಿ ‘ದೇಹವೇ ನಾನು’ ಎಂದು ಭಾವಿಸಿಬಿಡುತ್ತೇವೆ. ಅದು ವಾಸ್ತವವಲ್ಲ. ಉದಾಹರಣೆಗೆ ನೀವು ನಿಮ್ಮ […]