ಪ್ರಣವಸ್ವರೂಪಿಯಾದ ಶಿವನನ್ನು ಹೊಂದಲು ನಮ್ಮ ಪ್ರಣಯದ ಆಸೆ ಆಕಾಂಕ್ಷೆಗಳ ಕಾಮಕಲ್ಮಶಗಳು ಮೊದಲು ಸುಟ್ಟುಹೋಗಬೇಕು. ಅದರ ಸಂಕೇತವೇ ಕಾಮದಹನ. ಇದು ನಿತ್ಯವೂ ನಮ್ಮ ಧರ್ಮ ಕರ್ಮಗಳ ಅನುಷ್ಠಾನದಲ್ಲಿ ನಮ್ಮ ವಿವೇಕೋದಯದಿಂದ ನಡೆಯಬೇಕಾಗಿದೆ. ಉತ್ಸವಗಳು, ಹಬ್ಬಗಳು ನಮ್ಮ ಧಾರ್ಮಿಕ ಮತ್ತು ಸಾಮಾಜಿಕ ಜೀವನದೊಂದಿಗೆ ಅವಿನಾಭಾವ ಸಂಬಂಧವನ್ನು ಹೊಂದಿವೆ. ಕಾರಣ ಮನುಷ್ಯನು ಸಹಜವಾಗಿ ಉತ್ಸವಪ್ರಿಯನಾಗಿರುವುದು. ಈ ಸತ್ಯವನ್ನು ಮಹಾಕವಿ ಕಾಲಿದಾಸನು ತನ್ನ ಶಾಕುಂತಲ ನಾಟಕದ 6ನೇ ಅಂಕದಲ್ಲಿ ಹೀಗೆ ವ್ಯಕ್ತಪಡಿಸಿದ್ದಾನೆ: ‘ಉತ್ಸವಪ್ರಿಯಾಃ ಖಲು ಮನುಷ್ಯಾಃ.’ ಉತ್ಸವಗಳು ಮನುಷ್ಯಜೀವನದಲ್ಲಿ ಒದಗುವ ಸಂತೋಷದ ಸಂದರ್ಭಗಳು. […]
ಹೋಳಿ ಹಬ್ಬ : ಎಲ್ಲ ಹಬ್ಬಗಳಂತೆ ಅಲ್ಲ ಈ ಹಬ್ಬ
Month : March-2021 Episode : Author : ಕಾಕುಂಜೆ ಕೇಶವ ಭಟ್ಟ