
ನಿವೇದಿತಾರವರಿಗೆ ಹಿಂದೂಧರ್ಮದ ಶ್ರೇಷ್ಠತೆಯ ಸ್ಥಾಪನೆಯು ಆದ್ಯತೆಯ ಸಂಗತಿಯಾಗಿದ್ದೀತೇ ವಿನಾ ತಮ್ಮ ವ್ಯಕ್ತಿಪ್ರತಿಷ್ಠೆ ಬೆಳೆಯಬೇಕೆಂಬುದಾಗಿರಲಿಲ್ಲ. ಅನೇಕ ಸಂದರ್ಭಗಳಲ್ಲಿ ತಮಗೆ ಒಂದಷ್ಟು ಹೆಸರನ್ನು ತಂದುಕೊಡಬಹುದಾಗಿದ್ದ ಸನ್ನಿವೇಶಗಳನ್ನು ಅವರು ಪ್ರಯತ್ನಪೂರ್ವಕ ನಿವಾರಿಸುತ್ತಿದ್ದುದೂ ಉಂಟು. ನಿವೇದಿತಾರವರು ಸ್ವಾಮಿಜೀಯವರ ಬಗೆಗೆ ಬೆಳೆಸಿಕೊಂಡಿದ್ದ ಭಕ್ತಿಭಾವನೆಯು ಕೇವಲ ಆಕ?ಣೆಯ ಕಾರಣದಿಂದಲ್ಲ. ಅದರಲ್ಲಿ ಪ್ರಜ್ಞಾಪೂರ್ವಕ ಪರಾಮರ್ಶನೆಯೂ ಸೇರಿತ್ತು. ಭಾರತಕ್ಕೆ ತನ್ನ ಉದ್ಧಾರವನ್ನು ತಾನೇ ಮಾಡಿಕೊಳ್ಳುವಂತಹ ತೇಜಸ್ಸನ್ನು ತುಂಬಬಲ್ಲವರು ತಾನು ಗುರುತಿಸಿದಂತೆ ಸ್ವಾಮಿಜೀ ಮಾತ್ರ – ಎಂಬ ನಿಶ್ಚಯ ನಿವೇದಿತಾರವರ ಆ ದಿನಗಳ ಪತ್ರಗಳಲ್ಲಿ ಧ್ವನಿತವಾಗಿದೆ. ಉದ್ಬೋಧನೆ ಸ್ವಾಮಿಜೀಯವರಿಗಾದರೋ ಉದ್ಬೋಧನವೆಂಬುದು […]