ಪ್ರತಿಯೊಂದು ಚುನಾವಣೆಯಲ್ಲಿಯೂ ಹಲವು ಅನಿರೀಕ್ಷಿತಗಳು ಘಟಿಸುತ್ತವೆ. ಹಿಂದೆ ಸ್ವತಃಸಿದ್ಧಗಳೆನಿಸಿದ್ದ ಅಂದಾಜುಗಳು ಸದಾಕಾಲ ತಮ್ಮ ವಿಶ್ವಸನೀಯತೆಯನ್ನು ಉಳಿಸಿಕೊಂಡಿರುವುದಿಲ್ಲ. ಕೆಲವು ವಿಜ್ಞಾನಾಂಗಗಳ ಮೂಲ ಸಾಮಗ್ರಿಗಳೂ ಅಂತಃಪ್ರಕ್ರಿಯೆಗಳೂ ಒಂದಷ್ಟುಮಟ್ಟಿಗೆ ಸ್ಥಿರಸ್ವರೂಪದವಾಗಿರುತ್ತವಾದ್ದರಿಂದ ಸಾಧಾರಣೀಕರಣ ಶಕ್ಯವಾಗಬಹುದು. ಈ ಕಾರಣದಿಂದ ಇವನ್ನು ಖಚಿತ ಶಾಸ್ತ್ರಗಳೆಂದು ವರ್ಗೀಕರಿಸುವ ರೂಢಿ ಇದೆ. ಇನ್ನು ಕೆಲವು ಪರಾಮರ್ಶನ ಕ್ಷೇತ್ರಗಳ ಮೂಲಸಾಮಗ್ರಿಯೂ ಅಂತಃಪ್ರಕ್ರಿಯೆಗಳೂ ಅಸ್ಥಿರವೂ ಪರಿವರ್ತನಶೀಲವೂ ಆಗಿರುತ್ತವೆ. ಇಲ್ಲಿ ಸಾಧಾರಣೀಕರಣವು ಪೂರ್ಣ ವಿಶ್ವಸನೀಯವೆನಿಸಲಾರದು. ಈ ಪರಾಮರ್ಶನೆಗಳಲ್ಲಿ ಅಪೇಕ್ಷಿತಮಟ್ಟದಲ್ಲಿ ಖಚಿತತೆ ಸಿದ್ಧಿಸುವುದು ಸಂಭವನೀಯವಲ್ಲ. ಹೀಗಿದ್ದರೂ ಲಬ್ಧಮಾಹಿತಿಯ ಆಧಾರದ ಮೇಲೆ ರಾಜಕೀಯ ವಿಶ್ಲೇಷಕರು ತೇರೀಜುಬೇರೀಜುಗಳಲ್ಲಿ […]
ಈಗಿನದು ‘ನ್ಯೂ ಮ್ಯಾಥ್’
Month : July-2019 Episode : Author : ಎಸ್.ಆರ್. ರಾಮಸ್ವಾಮಿ