17ನೇ ಶತಮಾನದ ಆರಂಭಕಾಲದಿಂದ ಹಿಡಿದು 20ನೇ ಶತಮಾನದ ಮೊದಲ ಪಾದದ ವರೆಗೆ ಭಾರತದಲ್ಲಿ ಬ್ರಿಟಿಷ್ ಪ್ರಭುತ್ವವು ನಡೆಸಿದ ದಾಂಧಲೆಗಳನ್ನು ಕುರಿತು ಬ್ರಿಟಿಷ್ ಚರಿತ್ರಕಾರರೇ ರಚಿಸಿರುವ ಸಾವಿರಾರು ಪುಟಗಳ ಸಾಹಿತ್ಯ ಲಭ್ಯವಿದೆ. ಮೊದಲು ಈಸ್ಟ್ ಇಂಡಿಯ ಕಂಪೆನಿಯ ಮೂಲಕವೂ ಅನಂತರ ನೇರ ಬ್ರಿಟಿಷ್ ಆಳ್ವಿಕೆಯ ಮೂಲಕವೂ ನಡೆದ ಸಾಮ್ರಾಜ್ಯವಿಸ್ತರಣೋದ್ಯಮ ವಿಶೇಷವಾಗಿ ರಾಬರ್ಟ್ ಕ್ಲೈವನ ಪಾಳೆಗಾರಿಕೆಯ ಕಾಲದಿಂದಾಚೆಗೆ ಕ್ರಮಕ್ರಮವಾಗಿ (ಅಕ್ರಮ-ಅಕ್ರಮ ಸರಣಿಯಿಂದಾಗಿ ಎಂದೇ ಹೇಳುವುದು ಉಚಿತವಾದೀತು) ಭಾರತದ ಗಣನೀಯ ಭಾಗದ ಮೇಲೆ ರಾಜ್ಯಾಧಿಕಾರವನ್ನು ಸ್ಥಾಪಿಸಿದುದು, ಕೊಳ್ಳೆ-ಲೂಟಿಗಳಿಂದ ಭಾರತದ ಸಂಪತ್ತನ್ನು ದೋಚಿ […]
ಇತಿಹಾಸ ಬ್ರಿಟಿಷ್ ಆಳ್ವಿಕೆಯ ಒಳಸುಳಿಗಳು
Month : February-2020 Episode : Author : ಎಸ್.ಆರ್. ರಾಮಸ್ವಾಮಿ