ಮುಹೂರ್ತಮಪಿ ಜೀವೇತ ನರಃ ಶುಕ್ಲೇನ ಕರ್ಮಣಾ | ನ ಕಲ್ಪಮಪಿ ಕೃಷ್ಣೇನ ಲೋಕದ್ವಯವಿರೋಧಿನಾ || – ಸುಭಾಷಿತರತ್ನ–ಭಾಂಡಾಗಾರ “ಒಂದೇ ಘಳಿಗೆ ಬದುಕಿದ್ದರೂ ಅಷ್ಟು ಸಮಯವನ್ನು ಪರಿಶುದ್ಧ ಕರ್ಮಾಚರಣೆಯಲ್ಲಿ ತೊಡಗಿಸಬೇಕು. ಇಹಕ್ಕೆ, ಪರಕ್ಕೆ – ಯಾವುದಕ್ಕೂ ಪ್ರಯೋಜನಕರವಲ್ಲದ ವ್ಯವಹಾರಗಳಲ್ಲಿಯೆ ತೊಡಗಿರುತ್ತ ಒಂದು ಕಲ್ಪಕಾಲ ಬದುಕಿದ್ದರೂ ಅದು ನಿರರ್ಥಕವೇ.” ಈಶ್ವರನು ನಮಗೆ ಜಗಜ್ಜೀವನವನ್ನು ಅನುಗ್ರಹಿಸಿರುವುದು ಸಾರ್ಥಕವಾದ ಕಾರ್ಯಗಳನ್ನು ಮಾಡಲೆಂದು. ಧನ್ಯತೆಯುಂಟಾಗುವುದು ವಿಹಿತ ಕರ್ಮಾಚರಣೆಯಿಂದ ಮಾತ್ರವೇ ಹೊರತು ಯಾದೃಚ್ಛಿಕ ಕಾಲಯಾಪನೆಯಿಂದಲೊ ದುಷ್ಕರ್ಮಾಚರಣೆಯಿಂದಲೊ ಅಲ್ಲ. ಬದುಕಿಗೂ ದೇಹಕ್ಕೂ ಪಾವಿತ್ರ್ಯವನ್ನು ತಂದುಕೊಡಬಲ್ಲದ್ದು ಪುಣ್ಯಪ್ರದವೂ ಲೋಕೋಪಕಾರಕವೂ […]
ದೀಪ್ತಿ
Month : February-2020 Episode : Author :