ಭಾರತದ ಮುಸ್ಲಿಂ ಮಾನಸಿಕತೆ’ ಎನ್ನುವ ಮಾತನ್ನು ನಾವು ಆಗಾಗ ಕೇಳುತ್ತೇವೆ. ಆದರೆ ಅದು ನಿಜವಾಗಿಯೂ ಏನು ಎಂಬುದು ನಮಗೆ ಸಾಮಾನ್ಯವಾಗಿ ಗೊತ್ತಿರುವುದಿಲ್ಲ. ಅದರ ಸುತ್ತ ಅಪಕಲ್ಪನೆಗಳೇ ಹಬ್ಬಿಕೊಂಡಿವೆ ಎಂದರೆ ಸುಳ್ಳಲ್ಲ. ಮುಸ್ಲಿಂ ಸಾಹಿತಿಯೊಬ್ಬರು ಮೂರು ದಶಕಗಳಿಗೂ ಹಿಂದೆ ನಾಡಿನ ವಾರಪತ್ರಿಕೆಯೊಂದಕ್ಕೆ ಆ ಕುರಿತು ಬರೆದ ಲೇಖನವನ್ನು ನಂಬಿ ಅಂದಿನಿಂದ ಇಂದಿನವರೆಗೂ ದೇಶದ ಮುಸ್ಲಿಮರ ಮಾನಸಿಕತೆ ಅದೇ ರೀತಿ ಇದೆಯೆಂದು ನಂಬುವ ಅನುಭವೀ ಪತ್ರಕರ್ತರೂ, ಮಾಧ್ಯಮ ಸಲಹೆಗಾರರೂ ಇದ್ದಾರೆ. ಆ ಲೇಖನವಾದರೋ ಸಾಮಾನ್ಯ ಮುಸ್ಲಿಮರು ಯಾವ ರಾಜಕೀಯದಲ್ಲೂ ಆಸಕ್ತರಲ್ಲ; ಅವರ ಬದುಕು ಜೀವನ ನಿರ್ವಹಣೆಯ ಗಳಿಕೆಯಲ್ಲಿ ಮುಗಿದುಹೋಗುತ್ತದೆ ಎನ್ನುವ ಸಾರಾಂಶದ ಸರಳತೆಯ ಸಾಕಾರ.
ಇನ್ನು ಅಪಘಾತ, ಆಸ್ಪತ್ರೆವಾಸ ಅಥವಾ ಕೋಮು ಹಿಂಸಾಚಾರದ ಸಂದರ್ಭದಲ್ಲಿ ಒಂದು ಮತದವರುಇನ್ನೊಂದು ಮತದವರಿಗೆ (ಹಿಂದೂ-ಮುಸ್ಲಿಂ) ಪ್ರಾಣವನ್ನೇ ಪಣಕ್ಕೊಡ್ಡಿ ನೆರವಾದರು ಎಂಬಂತಹ ಭಾವುಕ ಕಥನಗಳು. ಅದು ಬಿಟ್ಟರೆ ಯಾವುದೋ ಊರಿನ ದೇವಾಲಯಕ್ಕೆ ಹಿಂದೂ-ಮುಸ್ಲಿಂ ಇಬ್ಬರೂ ಭಕ್ತರಿದ್ದಾರೆ. ನಿರ್ದಿ? ದರ್ಗಾದ ಭಕ್ತರಲ್ಲಿ ಹಿಂದುಗಳೇ ಅಧಿಕ ಎನ್ನುವ ವರದಿ, ವ್ಯಾಖ್ಯಾನ. ತುಂಬಾ ಕಡೆ ನಾವು ಈ ವಿ?ಯದಲ್ಲಿ è politically correct (ರಾಜಕೀಯ ದೃಷ್ಟಿಯ) ಅಭಿಪ್ರಾಯಗಳನ್ನೇ ನೋಡುತ್ತೇವೆ. ನಿಜವಾದ ದಲಿತ ಸಾಹಿತ್ಯವು ದಲಿತರಿಂದಲೇ ಬಂತು ಎನ್ನುವ ಹಾಗೆಯೇ ಮುಸ್ಲಿಂ ಮಾನಸಿಕತೆಯನ್ನು ಸರಿಯಾಗಿ ವಿವರಿಸಬಲ್ಲವರು ಮುಸ್ಲಿಮರೇ ಎಂಬುದನ್ನು ನಾವು ಒಪ್ಪಿಕೊಳ್ಳಬೇಕು. ಋಣಾತ್ಮಕ ಅಂಶಗಳಿದ್ದಾಗ ಅವರಿಗೂ ಹೇಳಲು ಕ?ವೇ. ಅದಕ್ಕೆ ಗಟ್ಟಿಎದೆಯ ಒಬ್ಬ ಮುಸಲ್ಮಾನ ಬೇಕಾಗುತ್ತದೆ. ಅಂತಹ ಒಬ್ಬ ಮುಸಲ್ಮಾನನನ್ನು ನಾವು ಹಮೀದ್ ದಲವಾಯಿ (೧೯೩೨-೭೭) ಅವರಲ್ಲಿ ಕಾಣುತ್ತೇವೆ. ಆರೆಸ್ಸೆಸ್ ಪ್ರಚಾರಕರಾದ ಚಂದ್ರಶೇಖರ ಭಂಡಾರಿ ಅವರಿಂದ ಅನುವಾದಗೊಂಡ ’ಭಾರತದಲ್ಲಿ ಮುಸ್ಲಿಂ ರಾಜಕಾರಣ’ (ಪ್ರಕಾಶಕರು: ಸಾಹಿತ್ಯ ಸಿಂಧು ಪ್ರಕಾಶನ) ಎನ್ನುವ ಹೆಸರಿನಲ್ಲಿ ಪ್ರಕಟವಾದ (೨೦೧೭) ಪುಸ್ತಕ ಈ ನಿಟ್ಟಿನಲ್ಲಿ ಅಮೂಲ್ಯವಾದ ಬಹಳ? ಮಾಹಿತಿಗಳನ್ನು ಒದಗಿಸುತ್ತದೆ. ಪುಸ್ತಕಕ್ಕೆ ’ಮುಸ್ಲಿಂ ರಾಜಕಾರಣ’ ಎನ್ನುವ ಶೀರ್ಷಿಕೆಯನ್ನು ನೀಡಲಾಗಿದೆ. ಆದರೆ ಮುಸ್ಲಿಂ ರಾಜಕಾರಣಕ್ಕಿಂತ ದೇಶದ ಮುಸ್ಲಿಮರ ಮಾನಸಿಕತೆಯ ಬಗ್ಗೆ ವಿವರಿಸುವುದು ಮತ್ತುಪ್ರತ್ಯೇಕವಾಗಿ ನಿಲ್ಲಬಯಸುವ ಮುಸಲ್ಮಾನರನ್ನು ಯಾವ ರೀತಿಯಲ್ಲಿ ಬದಲಾಯಿಸಿ ದೇಶದ ಮುಖ್ಯವಾಹಿನಿಗೆ ಕರೆತರುವುದು ಎಂಬುದು ಇಲ್ಲಿನ ಲೇಖನಗಳ ಕಾಳಜಿಯಾಗಿದೆ. ಲೇಖನದ ಶೀರ್ಷಿಕೆ ಏನೇ ಇರಲಿ,ಹಮೀದ್ ದಲವಾಯಿ ಅವರು ಮತ್ತೆ ಮತ್ತೆ ಮುಸ್ಲಿಂಮಾನಸಿಕತೆಯತ್ತ ಬೆಳಕು ಚೆಲ್ಲಲು ಮುಂದಾಗುತ್ತಾರೆ; ಮತ್ತು ಈ ಸಮಸ್ಯೆಗೆ ಏನು ಪರಿಹಾರ ಎಂದು ಚಿಂತಿಸುತ್ತಾರೆ. ಪುಸ್ತಕದ ಮೊದಲ ಲೇಖನ ’ಐತಿಹಾಸಿಕ ಹಿನ್ನೆಲೆ’ಯಿಂದಲೇ ಇದು ಆರಂಭವಾಗುತ್ತದೆ.
ಗುರಿ ಇನ್ನೂ ಇದೆ
ನನ್ನನ್ನು ವಿರೋಧಿಸುವವರಲ್ಲಿ ದೇಶದ ವಿಭಜನೆಯನ್ನು ವಿರೋಧಿಸುವ ಮುಸ್ಲಿಮರು ಕೂಡ ಇದ್ದಾರೆ. ಏಕೆಂದರೆ ಇಡೀ ದೇಶವನ್ನು ’ದಾರ್-ಉಲ್-ಇಸ್ಲಾಂ’ ಮಾಡುವುದು ಅವರಉದ್ದೇಶವಾಗಿತ್ತು, ಈಗ ಭಾರತದ ಉಳಿದ ಭಾಗವನ್ನು ಇಸ್ಲಾಮಿ ಪ್ರಭುತ್ವದಲ್ಲಿ ವಿಲೀನ ಮಾಡಲು ಅವರುಶ್ರಮಿಸುತ್ತಿದ್ದಾರೆ. ದೇಶದ ಮುಸ್ಲಿಮರ ಇನ್ನೊಂದು ವರ್ಗ ಆಧುನಿಕರಾಗುವ ಒಲವಿನವರು. ಅವರ ಸಂಖ್ಯೆ ಕಡಮೆ. ಉಗ್ರವಾದಿಗಳಾದ ಒಂದನೇ ವಿಭಾಗದವರೊಂದಿಗೆ ನಾನು ಸಂವಾದವನ್ನು ಕೂಡ ಮಾಡುವುದಿಲ್ಲ. ಉಗ್ರವಾದಿ ಮುಸಲ್ಮಾನರದ್ದು ಸಂಪೂರ್ಣ ಹಿಂದೂ ಸಮುದಾಯವನ್ನೇ ನಿರ್ನಾಮಗೊಳಿಸುವ ಅಕ್ರಮಕ ಯೋಜನೆಯಾಗಿದ್ದರೆ ಉಗ್ರವಾದಿ ಹಿಂದೂಗಳದ್ದು ಅದಕ್ಕೆ ಪ್ರತಿಕ್ರಿಯೆಯಾಗಿ ಸ್ವರಕ್ಷಣೆಯದು ಮಾತ್ರ. ನನ್ನ ಅನಿಸಿಕೆಯಂತೆ ಹಿಂದೂಗಳ ಕೋಮುವಾದವು ಮುಸಲ್ಮಾನರ ಕೋಮುವಾದಕ್ಕೆ ಪ್ರತಿಕ್ರಿಯೆ ಮಾತ್ರವಾಗಿ ಕೆರಳಿ ತಲೆಎತ್ತಿರುವಂತಹದು. ಮುಸಲ್ಮಾನರ ಉಗ್ರವಾದವನ್ನು ಕೊನೆಗೊಳಿಸುವವರೆಗೆ ಹಿಂದುಗಳ ಉಗ್ರವಾದವನ್ನೂ ತಡೆಯಲು ಸಾಧ್ಯವಾಗದು ಎಂದು ಲೇಖಕರು ಹೇಳುತ್ತಾರೆ.
ತಮ್ಮ ಎಲ್ಲ ಕ?ಗಳಿಗೆ ಹಿಂದೂಗಳೇ ಕಾರಣರೆಂದು ದೂರುವುದು ಭಾರತದ ಮುಸಲ್ಮಾನರಿಗೊಂದು ಹಳೆಯ ಚಾಳಿಯಾಗಿದೆ. ಆದರೆ ಮುಸ್ಲಿಂ ಬುದ್ಧಿಜೀವಿಗಳು ಎಂದೂ ತಮ್ಮನ್ನು ತಾವು ವಿಮರ್ಶೆಗೆ ಒಳಪಡಿಸಿಕೊಂಡಿಲ್ಲ. ತಮ್ಮ ಸಮಸ್ಯೆಗಳಿಗೆ ತಮ್ಮ ಮನೋಧರ್ಮವೇ ಕಾರಣ ಎಂಬುದನ್ನು ಗುರುತಿಸಿಕೊಂಡಿಲ್ಲ. ದೇಶದ ಮುಸಲ್ಮಾನರ ಹಿಂದುಳಿಯುವಿಕೆಗೆ ನಿಜವಾದ ಕಾರಣವೆಂದರೆ, ಭಾರತದಲ್ಲಿ ಬ್ರಿಟಿ? ಆಳ್ವಿಕೆ ಆರಂಭವಾದ ತರುಣದಲ್ಲಿನ ಶೈಕ್ಷಣಿಕ ಸುಧಾರಣೆಗಳನ್ನು ಅವರು ವಿರೋಧಿಸಿದ್ದು. ಅವರ ಈ ಮನೋಭಾವಕ್ಕೆ ಹಿನ್ನೆಲೆಯಾಗಿದ್ದುದು ವಿಚಿತ್ರವೆನಿಸುವ ಒಂದು ಅಸಮಾಧಾನ. ಬ್ರಿಟಿ ರು ಇಲ್ಲಿನ ತಮ್ಮ ಪೂರ್ವಜರ ಸಾಮ್ರಾಜ್ಯವನ್ನು ಕಿತ್ತುಕೊಂಡರು ಎಂಬುದು ಅವರ ಅಭಿಪ್ರಾಯವಾಗಿತ್ತು. ಮುಸಲ್ಮಾನರು ಆಧುನಿಕ ಪಾಶ್ಚಾತ್ಯ ಶಿಕ್ಷಣವನ್ನು ಪಡೆಯಲು ಮುಂದಾಗಬೇಕೆಂದು ಸರ್ ಸೈಯದ್ ಅಹಮದ್ ಖಾನ್ ಕರೆಕೊಟ್ಟಾಗ ದೇವ್ಬಂದ್ನ ಉಲೇಮಾ ಅವರನ್ನು ಓರ್ವ ಕಾಫಿರರೆಂದು ಫತ್ವಾ ಹೊರಡಿಸಿತ್ತು – ಮುಂತಾಗಿ ಹಮೀದ್ ದಲವಾಯಿ ಭಾರತದ ಮುಸ್ಲಿಮರ ಮಾನಸಿಕತೆಯ ಕಾರಣಗಳನ್ನು ಹುಡುಕುತ್ತಾರೆ.
ಅಹ್ಮದ್ ಖಾನ್ ಕ್ರಾಂತಿ
ಅಹಮದ್ ಅವರ ಕ್ರಮದಿಂದಾಗಿ ಮುಸ್ಲಿಮರಲ್ಲಿ ಕ್ರಾಂತಿ ಆರಂಭವಾಯಿತು. ಆದರೆ ಅವರಲ್ಲಿ ಆಧುನಿಕತೆ ಬಂದದ್ದು ತೀರಾ ಸೀಮಿತ ಪ್ರಮಾಣದಲ್ಲಿ. ನವೋದಯವನ್ನು ತರಬಹುದಾಗಿದ್ದ ಯಶಸ್ಸನ್ನು ಗುರುತಿಸುವ ದೃಷ್ಟಿ ಅವರಲ್ಲಿರಲಿಲ್ಲ. ಅದರಿಂದಾಗಿ ಹಿಂದೂ ಮತ್ತು ಮುಸ್ಲಿಂ ಉಭಯ ಸಮುದಾಯಗಳು ಪ್ರತ್ಯೇಕಗೊಂಡವು. ಖಾನ್ ಅವರಲ್ಲಿ ಮತಾಂಧತೆಯ ದೋ? ಇಲ್ಲದಿದ್ದರೂ ಮೊಘಲ ಪರಂಪರೆಯ ವಾರಸುದಾರರು ತಾವೆಂಬ ದುರಹಂಕಾರವಿತ್ತು. ’ಮುಸಲ್ಮಾನರು ಭಾರತವನ್ನು ಗೆದ್ದ ಜನಾಂಗ’ವೆಂಬ ತಪ್ಪು ಕಲ್ಪನೆಗೆ ಅವರು ಬಲಿಯಾದರು. ಭಾರತದ ರಾಷ್ಟ್ರೀಯತೆಯನ್ನು ಬೆಂಬಲಿಸುವ ಬದಲು ಪ್ರತ್ಯೇಕತಾವಾದಿ ಮುಸ್ಲಿಮ್ ರಾಷ್ಟ್ರೀಯತೆಯನ್ನು ಹುಟ್ಟುಹಾಕಿದವರೇ ಅವರು ಎಂದು ಲೇಖಕರು ಸಮಸ್ಯೆಯ ಮೂಲವನ್ನು ಪತ್ತೆ ಮಾಡುತ್ತಾರೆ.
ಮಹಮದ್ ಅಲಿ ಜಿನ್ನಾ ಇನ್ನೂ ಹೆಚ್ಚು ಮತನಿ?ಯ ವಿಸ್ತೃತ ಆವೃತ್ತಿ ಆಗಿದ್ದವರು. ಅವರಿಂದಾಗಿ ಹಿಂದೂ ಮತ್ತು ಮುಸ್ಲಿಂ ಸಮುದಾಯಗಳು ಸ್ವಾಯತ್ತ ಮತ್ತು ಸಮಾನಾಂತರ ಸಾಮಾಜಿಕ ರಚನೆಗಳೆಂಬ ಭ್ರಾಮಕ ಕಲ್ಪನೆಯು ಅಸ್ತಿತ್ವಕ್ಕೆ ಬಂತು. ಹೀಗೆ ಭಾರತದ ಮುಸ್ಲಿಮರು ಎರಡು ಅವಕಾಶಗಳನ್ನು ಕಳೆದುಕೊಂಡರು. ಆಂಗ್ಲ ಶಿಕ್ಷಣವನ್ನು ಬಿಟ್ಟು ಆಧುನಿಕರಾಗದೆ ಉಳಿದದ್ದು ಒಂದಾದರೆ ಹಿಂದು-ಮುಸಲ್ಮಾನರು ಸ್ವಾಯತ್ತ ಸಮಾನಾಂತರ ಸಮಾಜ ರಚನೆಗಳೆಂಬ ಭ್ರಾಮಕ ಕಲ್ಪನೆಗೆ ಗುರಿಯಾದದ್ದು ಎರಡನೆಯದು. ಆತ್ಮ ನಿರೀಕ್ಷಣೆ ಅಥವಾ ಸ್ವವಿಮರ್ಶೆ ಮಾಡಿಕೊಳ್ಳುವ ತರುಣ ಪೀಳಿಗೆಯ ಮುಸಲ್ಮಾನ ವರ್ಗ ಭಾರತದಲ್ಲಿಲ್ಲ. ಹೀಗೆ ನಿಜಕ್ಕೂ ಸಮಸ್ಯೆಯ ಮೂಲದಲ್ಲಿರುವುದು ತಮ್ಮದು ಸಮಾನಾಂತರ ಸಮಾಜವೆಂಬ ಸೂತ್ರಕ್ಕೆ ಮುಸ್ಲಿಂ ಬುದ್ಧಿಜೀವಿಗಳು ಈಗಲೂ ಅಂಟಿಕೊಂಡಿರುವುದಾಗಿದೆ. ಒಂದೆಡೆ ಭಾರತವನ್ನು ಇಸ್ಲಾಮೀಕರಿಸುವ ಕನಸು ಕಾಣುವವರು; ಇನ್ನೊಂದೆಡೆ ಪ್ರತ್ಯೇಕ ಮುಸ್ಲಿಮ್ ರಾಷ್ಟ್ರೀಯತೆಯ ಪರ ಇರುವವರು – ಇವರಿಬ್ಬರ ನಡುವೆ ಒಮ್ಮತವಿದೆ ಎಂದು ಹಮೀದ್ ವಿಶ್ಲೇಷಿಸುತ್ತಾರೆ. ಇವು ಇಂದು ಭಾರತದ ಮುಸ್ಲಿಮರಲ್ಲಿ ಕಾಣುವ ಎರಡು ಮನೋಧರ್ಮಗಳು. ಇಂದು ಅಗತ್ಯವಿರುವುದು ಇಬ್ಬರಿಂದಲೂ ದೂರ ಸರಿಯುವುದು ಎಂದವರು ಸೂಚಿಸುತ್ತಾರೆ.
ಉದಾರವಾದಿ ಪರಂಪರೆ
ಹಿಂದೂಗಳಲ್ಲಿ ಅಂತಹ ಮನೋಧರ್ಮ ಇದ್ದರೂ ಅವರಲ್ಲಿ ಉದಾರವಾದಿ ಮತ್ತು ಮಾನವತಾವಾದಿ ಪರಂಪರೆ ಕೂಡ ಇದೆ. ಗಾಂಧಿಯವರು ಅದರ ಸಂಕೇತವಾಗಿದ್ದರು. ಭಾರತದ ಮುಸ್ಲಿಂ ಸಮುದಾಯ ತನ್ನ ಓರ್ವ ಗಾಂಧಿಯನ್ನು ಸೃಷ್ಟಿಸಲಿಲ್ಲವೆಂಬುದು ಅವರ ವೈಫಲ್ಯವನ್ನು ತೋರಿಸುತ್ತದೆ. ಇಂದಿನ ತರುಣ ಮುಸ್ಲಿಮರು ಈ ಸವಾಲನ್ನು ಸ್ವೀಕರಿಸುವರೆ? ಇದು ಅವರಿಗೆ ದೊರೆತ ಮೂರನೇ ಮತ್ತು ಕೊನೆಯ ಅವಕಾಶವಾಗಿದೆ ಎಂದು ಹಮೀದ್ ದಳವಾಯಿ ನಾಲ್ಕು ದಶಕಗಳಿಗೂ ಹಿಂದೆ ಹೇಳಿದ್ದರು. ಈಗ ಸಮಸ್ಯೆ ಬೇರೆ ಯಾವುದೋ ದಿಕ್ಕಿನಲ್ಲಿ ಹೊರಟಿದೆ ಎಂಬುದು ಬೇರೆ ಮಾತು. ಈಗ ಉನ್ನತ ವಿದ್ಯಾಭ್ಯಾಸ ಪಡೆದ ಕೆಲವು ಮುಸ್ಲಿಂ ತರುಣರು ಆಧುನಿಕ ಮನೋಭಾವದಉದಾರವಾದಿ, ಸೆಕ್ಯುಲರ್, ಪ್ರಜಾಸತ್ತಾತ್ಮಕ ಧೋರಣೆಯವರಾಗುವ ಬದಲು ಮತ್ತ ಉಗ್ರವಾದಿಗಳಾಗುವುದನ್ನು ಕಾಣುತ್ತೇವೆ; ಕಂಪ್ಯೂಟರ್ ಶಿಕ್ಷಣ ಪಡೆದು ಇಂಜಿನಿಯರ್ ಆದವರು ಅತ್ಯಂತ ಅಪಾಯಕಾರಿ ಉಗ್ರರಾದವರಿದ್ದಾರೆ. ಕೊಲ್ಲಿ ರಾ?ಗಳ ಪೆಟ್ರೋ ಡಾಲರ್ ಭಾರತಕ್ಕೆ ಹರಿದು ಬಂದು ಏನೇನೋ ಉತ್ಪಾತಗಳನ್ನು ಸೃಷ್ಟಿಸುತ್ತಿದೆ. ಇದು ಹಮೀದ್ ದಲವಾಯಿ ಅವರು ಕಂಡುದರ ಮುಂದುವರಿದ ಭಾಗ.
ನಮ್ಮ ರಾ?ಜೀವನದಲ್ಲಿ ಅಲ್ಪಸಂಖ್ಯಾತರಿಗೆ ಮಿಕ್ಕೆಲ್ಲರ ಜೊತೆ ಸಮಾನ ಹಕ್ಕುಗಳು ಮತ್ತು ಸಮಾನ ಅವಕಾಶಗಳಿವೆ. ಆದರೆ ವಿಶೇ? ಸ್ಥಾನಮಾನ ಹಾಗೂ ಸವಲತ್ತುಗಳಿಗೆ ಅವರಿಗೆ ಅಧಿಕಾರ ಇಲ್ಲ ಎಂದು ಲೇಖಕರು ನೇರವಾಗಿಯೇ ಹೇಳಿದ್ದಾರೆ. ಮುಸ್ಲಿಂ ಕೋಮುವಾದವನ್ನು ವಿಫಲಗೊಳಿಸಲು ಸಾಧ್ಯವಾಗುವುದು ಹಿಂದುಗಳು ಅವರಿಗಿಂತ ತಮ್ಮನ್ನು ಹೆಚ್ಚು ಆಧುನಿಕಗೊಳಿಸಿಕೊಂಡು ಸಾಮಾಜಿಕ ಪ್ರಗತಿಯಲ್ಲಿ ಮುಂದುವರಿದಾಗ. ಹಿಂದೂಗಳನ್ನು ಇನ್ನೂ ಹೆಚ್ಚು ಸಂಪ್ರದಾಯನಿ?ರನ್ನಾಗಿ ಗೊಡ್ಡು ಮಡಿವಂತರನ್ನಾಗಿ ಮಾಡುವುದರ ಮೂಲಕ ಮುಸ್ಲಿಂ ಕೋಮುವಾದವನ್ನು ಕೊನೆಗೊಳಿಸಲು ಸಾಧ್ಯವಿಲ್ಲ ಎಂಬುದು ಲೇಖಕರ ನಿಲವು.
ವಿಚಿತ್ರ ವಾದಗಳ
ಪುಸ್ತಕದಲ್ಲಿ ಲೇಖಕರು ಮುಸ್ಲಿಂ ನಾಯಕರ ವಿಚಿತ್ರ ವಾದಗಳನ್ನು ಉಲ್ಲೇಖಿಸಿದ್ದಾರೆ. ಅದರಲ್ಲೊಂದು ದೇಶ ವಿಭಜನೆಗೆ ಮುಸ್ಲಿಮರು ಕಾರಣರಲ್ಲ. ಹಿಂದುಗಳೇ ಕಾರಣ ಎಂಬುದು. ಭಾರತದ ಮುಸ್ಲಿಮರು ಬ್ರಿಟಿ?ರ ಸಹಾಯದಿಂದ ಹಿಂದುಗಳ ಮೇಲೆ ಸದಾ ತಮ್ಮ ಹಕ್ಕೊತ್ತಾಯವನ್ನು ಹೇರುತ್ತಿದ್ದರು. ಇದರಲ್ಲಿ ನ್ಯಾಯಾಧೀಶರಂತೆ ಥರ್ಡ್ ಪಾರ್ಟಿ ಆಗಿದ್ದವರು ಬ್ರಿಟಿ?ರು. ಮುಸ್ಲಿಮರ ಆವಶ್ಯಕತೆಗಳನ್ನು ಪೂರೈಸಲು ಹಿಂದುಗಳಿಗೆ ಸ್ವಾತಂತ್ರ್ಯ ನೀಡಲಾಗದು ಎಂದು ಸದಾ ಮೊಂಡುತನ ತೋರುತ್ತಿದ್ದವರು ಮುಸಲ್ಮಾನ ನಾಯಕರೇ ಎನ್ನುವ ಲೇಖಕರು ಮುಂದುವರಿದು, ಬಹುಸಂಖ್ಯಾತ ಹಿಂದುಗಳ ಜೊತೆ ಸೇರಿ ವಸ್ತುನಿ?ವಾಗಿ ನಿರ್ಣಯ ತೆಗೆದುಕೊಳ್ಳಬೇಕಾದವರು ತಾವು (ಮುಸಲ್ಮಾನರು) ಎಂದವರು ಕ್ಷಣಕಾಲವೂ ಯೋಚಿಸಲಿಲ್ಲ. ತಮ್ಮ ನಡುವಣ ವಿವಾದವನ್ನು ಒಂದು ಕಾನೂನು ಹೋರಾಟದಂತೆ ನೋಡಿದರೇ ವಿನಾ ಪರಸ್ಪರ ಸಹಮತದ ಸಾಧ್ಯತೆಯ ಬಗೆಗೆ ಅವರು ಒಲವು ತೋರಲೇ ಇಲ್ಲ. ಭಾರತದ ಸ್ವಾತಂತ್ರ್ಯ ಹೋರಾಟಕ್ಕೆ ತೊಡರುಗಾಲು ಹಾಕುವಂತಹ ಘೋರ ಪಾಪ ಎಸಗಿದವರು ಭಾರತದ ಈ ಮುಸಲ್ಮಾನರು. ಆಗ ಅವರು ತೃತೀಯ ಪಕ್ಷವೊಂದನ್ನು ಬಳಸಿಕೊಂಡರು. ಅದಲ್ಲದೆ ಇನ್ನೂ ಹೀನಾಯವಾದ ಪಾಪವೊಂದನ್ನು ಎಸಗಿದರು. ಅದೆಂದರೆ ಮುಸ್ಲಿಮರು ಬಹುಸಂಖ್ಯಾತರಾಗಿರುವ ಎಲ್ಲ ಪ್ರಾಂತಗಳನ್ನು ಒಳಗೊಂಡ ಪ್ರತ್ಯೇಕ ರಾ?ವನ್ನು ಸೃಷ್ಟಿಸುವ ಕೃತ್ಯದಲ್ಲಿ ಭಾಗಿಯಾದರು ಎಂದು ವಿವರಿಸುತ್ತಾರೆ.
ವಿಭಜನೆಯ ಬಳಿಕ ಭಾರತದಲ್ಲಿ ಮುಸ್ಲಿಮರು ಒತ್ತೆಯಾಳಾಗುವಂತಿದ್ದರೆ ಪಾಕಿಸ್ತಾನದಲ್ಲಿ ಹಿಂದುಗಳು ಅದೇ ರೀತಿ ಇರುತ್ತಾರೆ; ಆದ್ದರಿಂದ ಅತಿರೇಕಗಳಾಗದೆ ಸಮತೋಲನ ಇರುತ್ತದೆ ಎನ್ನುವ ಒಂದು ವಾದವನ್ನು ಆಗ ಮುಸ್ಲಿಂ ನಾಯಕರು ಮುಂದೊಡ್ಡಿದರು. ಆದರೆ ಈಗ ಈ ಸಿದ್ಧಾಂತವು ತನಗೆ ಅನ್ವಯ ಆಗಬಾರದೆಂದು ಮುಸ್ಲಿಮರು ಬಯಸುತ್ತಾರೆ. ಭಾರತದಲ್ಲಿ ಮುಸ್ಲಿಂ ವಿರೋಧಿ ಗಲಭೆಗಳು ಆಗಬಾರದೆಂದು ಅವರು ಒತ್ತಾಯಿಸುತ್ತಾರೆ. ಪಾಕಿಸ್ತಾನದಲ್ಲಿರುವ ಹಿಂದುಗಳ ಗತಿಯೇನೆಂದು ಯಾರಾದರೂ ಕೇಳಿದರೆ ಅವರದಕ್ಕೆ ತಲೆಕೆಡಿಸಿಕೊಳ್ಳುವುದಿಲ್ಲ. ಪಾಕಿಸ್ತಾನದಲ್ಲಿ ಹಿಂದುಗಳೊಂದಿಗೆ ಅನ್ಯಾಯದಿಂದ ವ್ಯವಹರಿಸಲಾಗುವುದಿಲ್ಲ ಎಂದು ವಾದಿಸುವಲ್ಲಿಗೆ ತಮ್ಮ ಕೆಲಸ ಮುಗಿಯಿತೆಂದು ಭಾರತದ ಮುಸ್ಲಿಂ ನಾಯಕರು ತಿಳಿಯುತ್ತಾರೆ. ಅಲ್ಲಿ ಹಿಂದುಗಳಿಗೆ ಅನ್ಯಾಯ ಮಾಡುತ್ತಿರುವ ಪ್ರಸಂಗಗಳನ್ನು ತೋರಿಸಿಕೊಟ್ಟರೆ ಅವರ ಬಳಿ ಉತ್ತರ ಸಿದ್ಧವಿದೆ; ಆ ಸಮಸ್ಯೆ ಪಾಕಿಸ್ತಾನಕ್ಕೆ ಸೇರಿದ್ದು; ಅದನ್ನು ಅಲ್ಲಿ ಕೇಳಬೇಕು ಎನ್ನುತ್ತಾರೆ; ಅಥವಾ ಅಲ್ಲಿ ಯಾವುದೇ ಅನ್ಯಾಯ ನಡೆದೇ ಇಲ್ಲ; ಹಿಂದೂ ಯುವತಿಯರನ್ನು ಬಲಾತ್ಕಾರವಾಗಿ ಮತಾಂತರ ಮಾಡಲಾಗುತ್ತಿದೆ ಎಂಬುದೆಲ್ಲ ಸುಳ್ಳು ಎಂದು ಸಮರ್ಥಿಸಿಕೊಳ್ಳುತ್ತಾರೆ. ಸ್ಪ?ವಾದ ನಿದರ್ಶನವನ್ನು ತೋರಿಸಿದರೆ ಇಸ್ಲಾಂನಲ್ಲಿ ಅಪ್ಪಟ ನ್ಯಾಯದ ಬಗ್ಗೆ ಸ್ಪ?ವಾದ ಮಾರ್ಗದರ್ಶನವಿದೆ. ಇಸ್ಲಾಮೀ ಪ್ರಭುತ್ವದಲ್ಲಿ ಅಂತಹ ಸಂಗತಿ ಅಕಲ್ಪನೀಯ ಎಂದು ಹೇಳುವುದಿದೆ ಎನ್ನುವ ಲೇಖಕರು ಮುಂದುವರಿದು, ಹಾಗೆ ಅಲ್ಲಗಳೆಯುವುದೇ ಇಸ್ಲಾಮೀ ನ್ಯಾಯ. ತಾವೇ ಅನ್ಯಾಯ ಎಸಗಿದಾಗ ಅವರು ಬಳಸುವ ಒರೆಗಲ್ಲು ಇಸ್ಲಾಮೀ ನ್ಯಾಯದ್ದು. ಆದರೆ ತಮಗೆ ಅನ್ಯಾಯವಾಗಿದೆ ಅನ್ನಿಸಿದಾಗ ಅವರಿಗೆ ಬೇಕಾಗುವುದು ಸಾಮಾನ್ಯ ರೂಢಿಯಲ್ಲಿರುವ ನ್ಯಾಯ ವಿಧಾನ ಮತ್ತು ಅದರಂತೆ ತಮಗೆ ನ್ಯಾಯ ಸಿಗಲೇಬೇಕೆಂಬ ಹಕ್ಕೊತ್ತಾಯ. ಮುಸ್ಲಿಂ ನಾಯಕರು ಮಂಡಿಸುವ ವಾದವೆಂದರೆ, ಪ್ರಭುತ್ವವು ಎಲ್ಲರಿಗೂ ಸಮಾನವಾಗಿ ಅನ್ವಯವಾಗುವ ಕುರಾನಿನಲ್ಲಿ ಹೇಳಲಾದ ನ್ಯಾಯವಾಗಿರುವುದರಿಂದ ಇಸ್ಲಾಮೀ ಪ್ರಭುತ್ವವು ಸದಾ ನ್ಯಾಯದ ಪರವಾಗಿಯೇ ಇರುವಂತಹದು ಎಂದು. ಹೀಗಾಗಿ ಅಲ್ಲಿ ತಪ್ಪೆಸಗುವವರೇನಿದ್ದರೂ ಬೇರೆಯವರೆ ಎಂದು ಈ ದ್ವಂದ್ವವನ್ನು ಬಯಲಿಗೆಳೆಯುತ್ತಾರೆ.
ಪಾಕಿಸ್ತಾನಕ್ಕೆ ಬೆಂಬಲ
ಅದೇ ವೇಳೆ ಈ ಮುಸ್ಲಿಂ ನಾಯಕರು ಕಾಶ್ಮೀರದ ವಿ?ಯದಲ್ಲಿ ಪಾಕಿಸ್ತಾನದ ನಿಲವನ್ನು
ಬೆಂಬಲಿಸುವವರು. ಅಸ್ಸಾಮಿನ ಎಲ್ಲ ಅಕ್ರಮ ವಲಸಿಗರು (ಅಂದಿನ ಪೂರ್ವ ಪಾಕಿಸ್ತಾನದಿಂದ ಬಂದವರು) ಭಾರತೀಯ ಮುಸ್ಲಿಮರೇ ಎನ್ನುವವರು. ಕಾಶ್ಮೀರಕ್ಕೆ ಸಂಬಂಧಿಸಿ ಪಾಕಿಸ್ತಾನ ಭಾರತದೊಂದಿಗೆ ಜಗಳ ಹೂಡುತ್ತಿದೆ. ಆದ್ದರಿಂದ ಕಾಶ್ಮೀರವನ್ನು ಪಾಕಿಸ್ತಾನಕ್ಕೆ ಒಪ್ಪಿಸಿ. ಅಲ್ಲಿಗೆ ಎಲ್ಲ ಜಗಳ ಖತಂ ಎಂದವರು ವಾದಿಸುತ್ತಾರೆ; ಇದು ಮುಸ್ಲಿಂ ಮಾನಸಿಕತೆ. ಕಾಶ್ಮೀರದ ಬಗೆಗೆ ಈ ನಿಲವು ಸುಮಾರು ಐದು ದಶಕಗಳ ಹಿಂದೆಯೇ ಕಾಣಿಸಿತೆಂಬುದು ಗಮನಾರ್ಹ.
ಭಾರತದಲ್ಲಿ ಇಸ್ಲಾಮೀ ಪ್ರಭುತ್ವದ ಸ್ಥಾಪನೆಯು ಜಮಾತೆ ಇಸ್ಲಾಮಿ ಸಂಸ್ಥೆಯ ಗುರಿ. ಅದರ ಮರಾಠಿ ಪತ್ರಿಕೆ ‘ಮಾರ್ಗದೀಪ’ ಒಮ್ಮೆ ಹೀಗೆ ಬರೆದಿತ್ತು: ಎಲ್ಲ ಭಾರತೀಯರು ಒಂದೇ ಮತದ ಅನುಯಾಯಿಗಳಾದಾಗ ಮಾತ್ರ ಇಲ್ಲಿನ ಮತೀಯ ಗಲಭೆ ಕೊನೆಗೊಳ್ಳುತ್ತದೆ. ಅದಕ್ಕಾಗಿ ಮುಸಲ್ಮಾನರು ಜಿಹಾದ್ನಂತಹ ಕ್ರಮಕ್ಕೆ ಸಿದ್ಧರಿರಬೇಕೆಂಬುದು ಸೂಚನೆ. ಈಗ ಆ ಪಟ್ಟಿಗೆ ’ಲವ್ ಜಿಹಾದ್’ ಕೂಡ ಸೇರಿದೆ. ಜಿನ್ನಾ ಅವರು ಮುಸ್ಲಿಂ ಮಾನಸಿಕತೆಗೆ ಬಲಿಯಾದರೆನ್ನುವ ಲೇಖಕರು, ಆತ ಮೊದಲು ಕೋಮುವಾದಿ ಆಗಿರಲಿಲ್ಲ, ಸೆಕ್ಯುಲರ್ ಆಗಿದ್ದರು ಎನ್ನುತ್ತಾರೆ. ದ್ವಿರಾ? ಸಿದ್ಧಾಂತವನ್ನು ಮಂಡಿಸುವ ತನಕ ಭಾರತದ ಮುಸಲ್ಮಾನರು ಜಿನ್ನಾರನ್ನು ನಾಯಕನಾಗಿ ಸ್ವೀಕರಿಸಲಿಲ್ಲ. ಇದರ ಕಾರಣ ಸ್ಪ?; ಮುಸ್ಲಿಮರು ಅತಿಯಾಗಿ ಹಿಂದು ವಿರೋಧಿಗಳು. ಈ ಭಾವೋದ್ರೇಕ ಅವರನ್ನು ಎ? ಆವರಿಸಿತ್ತೆಂದರೆ, ಮುಂದೆ ಭಾರತದಲ್ಲಿ ತಾವು ಅಲ್ಪಸಂಖ್ಯಾತರಾಗುತ್ತೇವೆ ಎಂಬ ಸಾಧಾರಣ ಸಂಗತಿಗೂ ಅವರು ಕುರುಡಾದರು.
ಎರಡು ಪ್ರಭುತ್ವ
ಹೈದರಾಬಾದ್, ಜುನಾಗಢ, ಭೂಪಾಲ, ಕಾಶ್ಮೀರಗಳೆಲ್ಲ ತಮಗೆ ಸೇರುತ್ತವೆ; ಭಾರತ ಚಿಂದಿಯಾಗುತ್ತದೆ. ಅದರ ಲಾಭ ತಮಗಾಗುತ್ತದೆ ಎಂದು ಜಿನ್ನಾ ನಂಬಿದ್ದರು. ಅದನ್ನು ವಿಫಲಗೊಳಿಸಿ ಎಲ್ಲ ಸಂಸ್ಥಾನಗಳನ್ನು ಭಾರತದಲ್ಲಿ ವಿಲೀನಗೊಳಿಸಿದವರು ಸರ್ದಾರ್ ಪಟೇಲ್. ಅದಕ್ಕಾಗಿ ಮುಸ್ಲಿಮರು ಪಟೇಲರನ್ನು ದ್ವೇಷಿಸುತ್ತಿದ್ದರು ಎನ್ನುವ ಅಂಶವನ್ನು ಪುಸ್ತಕ ಉಲ್ಲೇಖಿಸುತ್ತದೆ. ವಿಭಜನೆಯ ಬಳಿಕ ಪಶ್ಚಿಮ ಬಂಗಾಳದ ನಾಯಕ ಸುಹ್ರವರ್ದಿ ನೀಡಿದ ಒಂದು ಹೇಳಿಕೆ ಹೇಗಿತ್ತು: ಪಾಕಿಸ್ತಾನದ ಮುಸ್ಲಿಮರಿಗೇನೋ ಪರಿಹಾರ ಸಿಕ್ಕಿತು. ಭಾರತದ ಮುಸಲ್ಮಾನರ ಸಮಸ್ಯೆಗಳಿಗೂ ಪರಿಹಾರ ಸಿಗಬೇಕಾದ ಅಗತ್ಯವಿದೆ. ಪಾಕಿಸ್ತಾನ ನಮ್ಮ ಕಟ್ಟಕಡೆಯ ಹಕ್ಕೊತ್ತಾಯ ಅಲ್ಲ; ತೀರಾ ಇತ್ತೀಚಿನ ಹಕ್ಕೊತ್ತಾಯ ಅ?. ಅಂದರೆ ಭಾರತದ ಮುಸ್ಲಿಂ ನಾಯಕರ ಪ್ರಕಾರ ಇಲ್ಲಿ ಇಸ್ಲಾಮಿ ಪ್ರಭುತ್ವ ಸಾಧನೆಯೇ ಪರಿಹಾರ. ಅದು ಸಾಧ್ಯವಾಗದಿದ್ದರೆ ಪ್ರಭುತ್ವದೊಳಗೆ ಇನ್ನೊಂದು ಪ್ರಭುತ್ವ. ಸಮಾಜದೊಳಗೆ ಇನ್ನೊಂದು ಸಮಾಜ. ಇವೆಲ್ಲಾ ಒಂಟಿಯಾದ ಮಾತುಗಳಲ್ಲ. ಮಜ್ಲಿಸ್- ಎ-ಮುಶಾವರತ್ ಎಂಬ ಸಂಸ್ಥೆ ಪ್ರಕಟಿಸಿದ ಒಂಬತ್ತು ಅಂಶಗಳ ಕಾರ್ಯಕ್ರಮದಲ್ಲಿ, ಭಾರತೀಯ ಮುಸ್ಲಿಮರಿಗೆ ಸಂಬಂಧಿಸಿ ಯಾವುದೇ ಕಾನೂನು ರಚಿಸಲು ಭಾರತದ ಸಂಸತ್ತಿಗೆ ಅಧಿಕಾರವಿಲ್ಲ ಎಂದು ಹೇಳಿದ್ದಿದೆ. ಆಂಧ್ರಪ್ರದೇಶದ ಅಂದಿನ ಶಾಸಕ
ಸಲಾವುದ್ದಿನ್ ಓವೈಸಿ (ಅಕ್ಬರುದ್ದಿನ್ ಓವೈಸಿ ತಂದೆ) ಭಾರತದ ಪ್ರತಿಯೊಂದು ರಾಜ್ಯದಲ್ಲಿ ಪ್ರತ್ಯೇಕ ಮುಸಲ್ಮಾನ ಪ್ರಭುತ್ವ ವಿರಬೇಕು ಎಂದು ಸಲಹೆ ನೀಡಿದ್ದರು. ಪಾಕಿಸ್ತಾನ ಮತ್ತು ಬಂಗ್ಲಾದೇಶದ ನುಸುಳುಕೋರರನ್ನು ನುಸುಳುಕೋರರೇ ಅಲ್ಲವೆಂದು ಹೇಳುವುದು, ಅವರಿಗೆ ಭಾರತೀಯ ನಾಗರಿಕತೆಯನ್ನು ಒದಗಿಸಿಕೊಡುವುದು (ಮುಖ್ಯವಾಗಿ ಪಶ್ಚಿಮ ಬಂಗಾಳ, ಬಿಹಾರಗಳಲ್ಲಿ) ಕುಟುಂಬ ಯೋಜನೆಗೆ ವಿರೋಧ – ಇಂತಹ ಕಾರ್ಯತಂತ್ರಗಳು ಆಗಲೂ ನಡೆದಿವೆ. ಹಿಂದುಗಳು ನಮ್ಮನ್ನು ಶಾಶ್ವತವಾಗಿ ಅಲ್ಪಸಂಖ್ಯಾತರಾಗಿಯೇ ಉಳಿಸಲು ಬಿಡುವುದಿಲ್ಲ ಎಂದು ಅಲಿಗಢ ವಿಶ್ವವಿದ್ಯಾಲಯದ ಓರ್ವ ಪ್ರಾಧ್ಯಾಪಕರು ಹೇಳಿದ್ದರೆಂಬುದನ್ನು ನಾವು ನಂಬಲೇಬೇಕು. ಕೆನಡಾದಲ್ಲಿ ಇಂಗ್ಲಿ? ಮೂಲದ ಪ್ರೊಟೆಸ್ಟೆಂಟರನ್ನು ಹಿಂದಿಕ್ಕಿ ಫ್ರಾನ್ಸ್ ಮೂಲದ ಕ್ಯಾಥೋಲಿಕರು (ಜನಸಂಖ್ಯೆಯಲ್ಲಿ) ಪ್ರಬಲರಾದುದನ್ನು ಉದಾಹರಿಸಿದ ಆತ, ಐವತ್ತು ಅಥವಾ ನೂರು ವ?ಗಳಲ್ಲಿ ಭಾರತ ಇಸ್ಲಾಮಿ ಉಬ್ಬರದಲ್ಲಿ ಕೊಚ್ಚಿ ಹೋಗುತ್ತದೆ ಎಂದು ಘೋಷಿಸಿದ್ದರು. ೧೯೭೧ರ ಜನಗಣತಿ ವರದಿಯನ್ನು ಉಲ್ಲೇಖಿಸಿದ ಉರ್ದು ಪತ್ರಿಕೆ ’ರೇಡಿಯನ್ಸ್’ ಕಳೆದ ಹತ್ತು ವ?ಗಳಲ್ಲಿ ಭಾರತದಲ್ಲಿ ಮುಸ್ಲಿಮರ ಸಂಖ್ಯೆ ಹಿಂದುಗಳಿಗೆ ಹೋಲಿಸಿದರೆ ಶೇ. ೪ರ? ಹೆಚ್ಚಾಗಿದೆ. ಹೀಗಾಗಿ ತಮ್ಮ ಭವಿ?ದ ಬಗ್ಗೆ ಮುಸ್ಲಿಮರು ನಿರಾಶರಾಗಬೇಕಿಲ್ಲ ಎನ್ನುವ ಅಭಿಪ್ರಾಯವನ್ನು ಪ್ರಕಟಿಸಿತ್ತು. ಇವು ಯಾರೋ ಕೆಲವರ ವೈಯಕ್ತಿಕ ಅಭಿಪ್ರಾಯವೆಂದು ಅಲಕ್ಷಿಸಲಾಗದು. ನಾನು ದೇಶಾದ್ಯಂತ ಓಡಾಡಿ ಗಮನಿಸಿದ್ದೇನೆ. ಇದು ಶೇ. ೯೦ರ? ಮುಸಲ್ಮಾನರ ಅಭಿಪ್ರಾಯವೆಂದು ಹಮೀದ್ ದಳವಾಯಿ ಗಮನ ಸೆಳೆಯುತ್ತಾರೆ.
ಪಕ್ಷಗಳ ತುಷ್ಟೀಕರಣ
ವಿಭಜನೆಗೆ ಮುನ್ನ ಸಂಘ? ಇದ್ದುದು ಗಾಂಧಿ, ನೆಹರು ಮುಂತಾದವರ ಸೆಕ್ಯುಲರ್ ರಾಷ್ಟ್ರೀಯತೆ ಮತ್ತು ಮುಸ್ಲಿಮರ ಮತೀಯ ರಾಷ್ಟ್ರೀಯತೆಗಳ ನಡುವೆ ಎನ್ನುವ ಲೇಖಕ ಹಮೀದ್ ದಳವಾಯಿ, ಅದಕ್ಕೆ ಇಸ್ಲಾಮಿನ ಸ್ವರೂಪವೇ ಕಾರಣ ಎಂದು ಅಭಿಪ್ರಾಯಪಡುತ್ತಾರೆ. ಮುಸ್ಲಿಮರ ಪ್ರಕಾರ ಮಹಮ್ಮದ್ ಅವರು ಕೊನೆಯ ಪ್ರವಾದಿ. ಆದ್ದರಿಂದ ಅವರ ಮತ ಸಂಪೂರ್ಣ (ಪರಿಪೂರ್ಣ) ಮತ್ತು ಅಪರಿವರ್ತನೀಯ. ಮುಸ್ಲಿಂ ಮಾನಸಿಕತೆ ಇಂದಿಗೂ ಮಧ್ಯಕಾಲೀನ ನಂಬಿಕೆಯಿಂದಲೇ ನಡೆಯುತ್ತಿದೆ.
ಹಿಂದುಗಳು ಮತ್ತು ಕ್ರೈಸ್ತರು ತಮ್ಮ ಮೇಲೆ ಆಕ್ರಮಣಗಳು ನಡೆದಾಗ ಪರಿವರ್ತನೆಗಳನ್ನು ಸ್ವೀಕರಿಸಿದ್ದಾರೆ; ಆದರೆ ಇಸ್ಲಾಂ ಉದ್ದೇಶಪೂರ್ವಕವಾಗಿ ಬದಲಾಗಿಲ್ಲ ಎನ್ನುವ ಲೇಖಕರು ಮುಂದುವರಿದು, ಭಾರತದ ಸೆಕ್ಯುಲರ್ ಎಲ್ಲ ರಾಜಕೀಯ ಪಕ್ಷಗಳು ದೇಶದ ಮುಸ್ಲಿಮರನ್ನು ಮಧ್ಯಯುಗೀನ ಸ್ಥಿತಿಯಲ್ಲೇ ಉಳಿಸುವುದರಲ್ಲಿ ಒಮ್ಮತ ಹೊಂದಿರುವಂತೆ ತೋರುತ್ತದೆ. ಕಾಂಗ್ರೆಸ್ ಪಕ್ಷವಂತೂ ಭಾರತೀಯ ಮುಸ್ಲಿಮರ ಆಧುನೀಕರಣಕ್ಕೆ ವಿರೋಧವನ್ನು ಮಾಡುತ್ತಿದೆ. ಅದಕ್ಕೆ ಕಾರಣ ಕಾಂಗ್ರೆಸ್ ಮುಸ್ಲಿಂ ನಾಯಕರ ಮೇಲಿರುವ ಉಲೇಮಾದ ಪ್ರಭಾವ. ಪರಿಣಾಮವಾಗಿ ಭಾರತದ ಇಸ್ಲಾಂ ನಾಜೂಕಿಲ್ಲದ ಓಬಿರಾಯನ ಕಾಲದ ಇಸ್ಲಾಮೇ ಆಗಿದೆ. ಯಾವುದೋ ಒಂದು ದೇಶದಲ್ಲಿ ಪ್ರವಾದಿಯವರ ಬಗ್ಗೆ ಯಾರಾದರೂ ಏನಾದರೂ ಹೇಳಿದರೆ ಬೇರೆಲ್ಲೂ ಆಗದಂತಹ ಗಲಭೆಯನ್ನು ಭಾರತದ ಮುಸ್ಲಿಮರು ಪ್ರಾರಂಭಿಸುತ್ತಾರೆ; ಇತರ ದೇಶಗಳಲ್ಲಿ ಹೆಚ್ಚಾಗಿ ಇಂತಹ ಗಲಭೆ, ಮತ ಪ್ರದರ್ಶನಗಳು ಕಾಣುವುದಿಲ್ಲ ಎಂದವರು ದಾಖಲಿಸುತ್ತಾರೆ.
ಭಾರತದ ಸೆಕ್ಯುಲರ್ ಪಕ್ಷಗಳು ಹಿಂದು-ಮುಸ್ಲಿಂ ಬಾಂಧವ್ಯದ ಸಮಸ್ಯೆಯನ್ನು ಯಾವಾಗಲೂ ನೋಡುವುದು ಇತಿಹಾಸ, ವಾಸ್ತವಗಳನ್ನು ತಿಳಿಯದ ಭೋಳೆತನ ಮತ್ತು ಅತೀ ಭಾವುಕತೆಯ ಆದರ್ಶವಾದದ ದೃಷ್ಟಿಯಲ್ಲಿ. ಇಲ್ಲಿನ ವಾಸ್ತವಗಳನ್ನು ಎದುರಿಸಲು, ಅರ್ಥಮಾಡಿಕೊಳ್ಳಲು ಅವು ಸೋತಿವೆ. ಕೋಮುಗಲಭೆ ಆದಾಗ ಶಾಂತಿಗಾಗಿ ಸಾರ್ವಜನಿಕರನ್ನು ವಿನಂತಿಸುವುದು ಮತ್ತು ಗಲಭೆಗೆ ಹಿಂದು ಕೋಮುವಾದಿ ಶಕ್ತಿಗಳು ಕಾರಣ ಎಂದು ಆಪಾದಿಸುವುದನ್ನು ಬಿಟ್ಟರೆ ಬೇರೇನಾದರೂ ಮಾಡುವುದು ಅಗತ್ಯವೇ ಎಂದು ಯೋಚಿಸುವುದೂ ಇಲ್ಲ ಎಂದು ತರಾಟೆಗೆ ತೆಗೆದುಕೊಳ್ಳುವ ಹಮೀದ ದಳವಾಯಿ ತಾವು ಸೇರಿದ್ದ ಸಂಯುಕ್ತ ಸೋ?ಲಿಸ್ಟ್ ಪಾರ್ಟಿಯನ್ನೂ (ಎಸ್ಎಸ್ಪಿ) ಆಕ್ಷೇಪಿಸದೆ ಬಿಡುವುದಿಲ್ಲ.
ಬೆಳೆದ ಪ್ರತ್ಯೇಕತಾವಾದ
ಹಿಂದುಗಳಲ್ಲಿ ಉದಾರಪ್ರವೃತ್ತಿ ಇಂದು ಕ್ಷೀಣಿಸುವಂತೆ ಕಾಣುತ್ತಿದ್ದಲ್ಲಿ ಅದಕ್ಕೆ ಪ್ರಮುಖ ಕಾರಣದೇಶ ವಿಭಜನೆಯಾಗಿ ಇ? ವ? ಕಳೆದರೂ ಸತತವಾಗಿ ಪ್ರಬಲ ಆಗುತ್ತಲೇ ಇರುವ ಭಾರತೀಯ ಮುಸ್ಲಿಮರ ಪ್ರತ್ಯೇಕತಾವಾದ ಮತ್ತು ಕೋಮುವಾದಿ ಪ್ರವೃತ್ತಿ. ಮತೀಯ ಸಮುದಾಯಗಳ ಮನಸ್ಸಿನಲ್ಲಿ ಆಳವಾಗಿ ಬೇರೂರಿರುವ ಪ್ರತ್ಯೇಕ ರಾಷ್ಟ್ರೀಯತೆಯ ಆದರ್ಶವೇ ಈ ವಿಭಜನಕಾರಿ ಶಕ್ತಿಗಳಿಗೆ ಪ್ರೇರಣೆಯಾಗಿದೆ. ಏಕೆಂದರೆ ಮುಸ್ಲಿಂ ಮಾನಸಿಕತೆಯು ರಾಷ್ಟ್ರೀಯತೆಯನ್ನು ಮತ ಆಧಾರಿತವಾಗಿ ನೋಡುವಂಥದ್ದು. ಮುಸ್ಲಿಮರನ್ನು ಬಿಟ್ಟು ಇನ್ನಾರನ್ನೂ ಸೇರಿಸಿಕೊಳ್ಳದ (exಛಿಟusive) ಇಸ್ಲಾಮಿನ ಮತ ಸಿದ್ಧಾಂತವೇ ಇದೆಲ್ಲಕ್ಕೂ ಮೂಲಕಾರಣ ಎನ್ನುವ ಲೇಖಕರು, ಎರಡು ರಾ?ಗಳ ರಚನೆಯ ಅನಂತರ ಎರಡೂ ಕಡೆಯ ಅಲ್ಪಸಂಖ್ಯಾತರ ಸಮಸ್ಯೆ ಕ್ರಮೇಣ ಇಲ್ಲವಾಗುತ್ತದೆ ಎನ್ನುವ ಜಿನ್ನಾ ವಾದವನ್ನು ಉಲ್ಲೇಖಿಸುತ್ತಾರೆ. ಪಾಕಿಸ್ತಾನದಲ್ಲಿ ಒಂದು ರೀತಿಯಲ್ಲಿ ಆ ಸಮಸ್ಯೆ ಇಲ್ಲವಾಗಿದೆ; ಅಲ್ಪಸಂಖ್ಯಾತ ಹಿಂದೂಗಳನ್ನು ನಿರ್ದಾಕ್ಷಿಣ್ಯವಾಗಿ ಇಲ್ಲವಾಗುವಂತೆ ಮಾಡಲಾಗಿದೆ ಎಂಬುದು ಇಲ್ಲಿನ ಕಠೋರ ಸತ್ಯ.
ಮಾಡಬೇಕಾದದ್ದೇನು?
ಹಾಗಾದರೆ ನಾವೀಗ ಏನು ಮಾಡಬೇಕು? ಹಮೀದ್ ದಳವಾಯಿ ಅವರು ಕೇವಲ ಭಾ?ಣಶೂರನಲ್ಲ. ಜನರ ನಡುವೆ ಇದ್ದು ಎಲ್ಲ ಬಗೆಯ ವಿರೋಧಗಳನ್ನು ಕಟ್ಟಿಕೊಂಡು ತಾನು ನಂಬಿದ್ದರ ಕಾರ್ಯಸಾಧನೆಗಾಗಿ ಶ್ರಮಿಸಿದವರು. ಮಹಾರಾ?ದಲ್ಲಿ ಮುಸ್ಲಿಂ ಸತ್ಯಶೋಧಕ ಮಂಡಲ ಎಂಬ ಸಂಸ್ಥೆಯ ನೇತೃತ್ವವಹಿಸಿ ನಡೆಸುತ್ತಿದ್ದರು. ಮುಸ್ಲಿಮರಲ್ಲಿ ಸರಿಯಾದ ಮಾರ್ಗದರ್ಶನವಿಲ್ಲದೆ ಗೊಂದಲದಲ್ಲಿರುವ ಒಂದು ವರ್ಗವಿದೆ. ಅವರೊಂದಿಗೆ ಸಂವಾದ ನಡೆಸಿ ಪ್ರಸ್ತುತ ಸಮಸ್ಯೆಗೆ ಪರ್ಯಾಯ ನಿಲವನ್ನು ಅವರಿಗೆ ತಿಳಿಹೇಳುವುದು ಖಂಡಿತಕ್ಕೂ ಉಪಯುಕ್ತವಾದೀತು ಎಂದವರು ನಂಬಿದ್ದರು. ತಾನು ಭೇಟಿಯಾಗುವ ತರುಣ ಮುಸಲ್ಮಾನರು ನನ್ನ ವಿಚಾರಗಳನ್ನು ಹಳೆಯ ತಲೆಮಾರಿನವರಂತೆ ಪ್ರತಿಕೂಲವಾಗಿ ನೋಡುವುದಿಲ್ಲ. ಈ ತರುಣರು ತಮ್ಮ ಮತದ ಬಿಗಿಯಾದ ಮತನಿ? ಚಿಂತನೆಯಿಂದ ಬಿಡುಗಡೆ ಹೊಂದಲು ಕ?ಪಡುತ್ತಿದ್ದಾರೆ ಎಂದು ಕಂಡುಕೊಂಡು ಆ ದಿಕ್ಕಿನಲ್ಲಿ ಕಾರ್ಯಪ್ರವೃತ್ತರಾಗಿದ್ದರು.
ಪುಸ್ತಕದ ಕುರಿತು ಹೇಳುವುದಾದರೆ, ವಾಯ್ಸ್ ಆಫ್ ಇಂಡಿಯಾ ಸರಣಿಯ ಗೌರವ ಸಂಪಾದಕ ಮಂಜುನಾಥ ಅಜ್ಜಂಪುರ ಅವರು ಹಮೀದ್ ದಳವಾಯಿ ಅವರನ್ನು ಪರಿಚಯಿಸುವ ಲೇಖನವನ್ನು ಇಲ್ಲಿ ಬರೆದಿದ್ದಾರೆ. ಚಂದ್ರಶೇಖರ ಭಂಡಾರಿ ಅವರ ಅನುವಾದ ಶಕ್ತಿಶಾಲಿಯಾಗಿದೆ. ದೇಶದ ಪ್ರಸಕ್ತ ಸಂದರ್ಭಕ್ಕೆ ಅಗತ್ಯ ಮತ್ತು ಉಪಯುಕ್ತವಾದ ಬಹಳ? ಮಾಹಿತಿ, ಚಿಂತನೆಗಳು ಪುಸ್ತಕದಲ್ಲಿವೆ.