
–ಮಹಾದೇವಯ್ಯ ಕರದಳ್ಳಿ ಡಿಸೆಂಬರ್ 12, 1930ರಂದು ಬೆಳಗ್ಗೆ 11 ಗಂಟೆಗೆ ಮುಂಬಯಿಯ ಹನುಮಾನ ರಸ್ತೆಯಲ್ಲಿ ವಿದೇಶೀ ವಸ್ತ್ರಗಳನ್ನು ತುಂಬಿಕೊಂಡ ಲಾರಿಯು ಮುಂದುವರಿಯುವುದನ್ನು ತಡೆಗಟ್ಟಲು ರಸ್ತೆಗೆ ಅಡ್ಡಲಾಗಿ ಸತ್ಯಾಗ್ರಹಿಯೊಬ್ಬ ಮಲಗಿದ. ಆಂಗ್ಲ ಸಾರ್ಜಂಟ್ ಅವನ ತಲೆಯ ಮೇಲೆ ಲಾರಿ ಓಡಿಸಿದಾಗ ವಿಪರೀತ ಪೆಟ್ಟಾಗಿ ನಿರಂತರ ರಕ್ತಸ್ರಾವವಾಗುತ್ತಿದ್ದ ಅವನನ್ನು ಗೋಕುಲ್ದಾಸ್ ತೇಜಪಾಲ್ ಆಸ್ಪತ್ರೆಗೆ ಸೇರಿಸಿದರು. ಚಿಕಿತ್ಸೆ ಫಲಕಾರಿಯಾಗದೆ ಸಂಜೆ 4.50ಕ್ಕೆ ತನ್ನ ಅಂತಿಮಶ್ವಾಸದೊಂದಿಗೆ ಆತನು ಹುತಾತ್ಮನಾದ. ಸಾಮಾನ್ಯರಲ್ಲಿ ಸಾಮಾನ್ಯನಾದ ಕೂಲಿಕಾರನೊಬ್ಬ ಹೀಗೆ ಸ್ವದೇಶೀ-ಸ್ವಾತಂತ್ರ್ಯಕ್ಕಾಗಿ ಪ್ರಾಣವನ್ನೇ ಅರ್ಪಿಸಿದ ಈ ಸುದ್ದಿ ನಗರದಲ್ಲೆಲ್ಲ […]