
ಕಾಶಿಯನ್ನು ತಮ್ಮ ಲೋಕಸಭಾ ಸ್ಥಾನವಾಗಿ ಆರಿಸಿಕೊಂಡ ಪ್ರಧಾನಿ ನರೇಂದ್ರಮೋದಿ ಅವರು ಈ ಪವಿತ್ರಕ್ಷೇತ್ರಕ್ಕೆ ಸಂಬಂಧಿಸಿ ಅಭೂತಪೂರ್ವವಾದ ಕಾರ್ಯವನ್ನೇ ಮಾಡಿದ್ದಾರೆ. ಇದು ಅಕ್ಷರಶಃ ಐತಿಹಾಸಿಕವೇ ಸರಿ. ಈ ಪ್ರಾಚೀನ ನಗರ, ಅದರಲ್ಲೂ ವಿಶ್ವನಾಥ ದೇವಾಲಯದ ಪರಿಸರ ಅವ್ಯವಸ್ಥೆಯ ಗೂಡಾಗಿದ್ದು, ನೈರ್ಮಲ್ಯದ ಅಭಾವ, ಗಿಜಿಗುಟ್ಟುವ ಮುರುಕಲು ಕಟ್ಟಡಗಳು ಮುಂತಾದವು ಕ್ಷೇತ್ರಕ್ಕೆ ಭೇಟಿ ನೀಡುವ ಭಕ್ತರನ್ನು ಬಾಧಿಸುತ್ತಿದ್ದವು. ಏಕಕಾಲದಲ್ಲಿ ಹಲವು ಸಮಸ್ಯೆಗಳನ್ನು ಪರಿಹರಿಸುವ ಸಾಧನೆಯನ್ನು ಮೋದಿ ಮಾಡಿದ್ದಾರೆ. ಅಹಿಲ್ಯಾಬಾಯಿ ಹೋಳ್ಕರ್, ಮಹಾರಾಜಾ ರಣಜಿತ್ಸಿಂಗ್ ಮುಂತಾದವರು ಅಲ್ಲಿ ಮಾಡಿದ ಕಾರ್ಯದೊಂದಿಗೆ ಮೋದಿ ಅವರ […]