ಬೆಂಗಳೂರು, ಜನವರಿ 18, 2023: ಉತ್ಥಾನ ಮಾಸಪತ್ರಿಕೆಯು ಕಾಲೇಜು ವಿದ್ಯಾರ್ಥಿಗಳಿಗಾಗಿ ಆಯೋಜಿಸಿದ ರಾಜ್ಯ ಮಟ್ಟದ ಪ್ರಬಂಧ ಸ್ಪರ್ಧೆಯ ಫಲಿತಾಂಶ ಪ್ರಕಟವಾಗಿದ್ದು, ಮೈಸೂರಿನ ದರ್ಶನ್ ಎಸ್.ಎನ್. ಅವರು ಪ್ರಥಮ ಬಹುಮಾನ (ರೂ. 10,000) ಪಡೆದಿದ್ದಾರೆ.
ಉತ್ಥಾನ ಕಳೆದ 7 ವರ್ಷಗಳಿಂದ ಕಾಲೇಜು ವಿದ್ಯಾರ್ಥಿಗಳಿಗಾಗಿ ರಾಜ್ಯಮಟ್ಟದ ಪ್ರಬಂಧ ಸ್ಪರ್ಧೆ ಆಯೋಜಿಸಿತ್ತಾ ಬಂದಿದೆ. ಈ ವರ್ಷ 2022ರಲ್ಲಿ ’ಭವಿಷ್ಯದಲ್ಲಿ ನಾನೇನಾಗಬೇಕು?: ಉದ್ಯೋಗದಾತನಾಗಲೇ? ಉದ್ಯೋಗಿಯಾಗಲೇ?’ ಎಂಬ ವಿಷಯದ ಕುರಿತು ಪ್ರಬಂಧ ಸ್ಪರ್ಧೆಯನ್ನು ಆಯೋಜಿಸಲಾಗಿತ್ತು.
’ಉತ್ಥಾನ’ ಕಾಲೇಜು ವಿದ್ಯಾರ್ಥಿ ಪ್ರಬಂಧ ಸ್ಪರ್ಧೆ-2022ರಲ್ಲಿ ಮೈಸೂರಿನ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದ ವಿದ್ಯಾರ್ಥಿ ದರ್ಶನ್ ಎಸ್.ಎನ್. (20 ವರ್ಷ) ದರ್ಶನ್ ಎಸ್.ಎನ್. ಅವರು ಪ್ರಥಮ ಬಹುಮಾನವನ್ನು, ದ.ಕ. ಜಿಲ್ಲೆಯ ರಾಮಕುಂಜದ ಶ್ರೀ ರಾಮಕುಂಜೇಶ್ವರ ಕಾಲೇಜಿನ ಬಿ.ಕಾಂ. ವಿದ್ಯಾರ್ಥಿನಿ ಶ್ರದ್ಧಾ ಯು.ಎಸ್. ದ್ವಿತೀಯ ಬಹುಮಾನ (ರೂ. 7,000) ಪಡೆದಿದ್ದಾರೆ. ಹಾಗೂ ತೃತೀಯ ಬಹುಮಾನವನ್ನು (ರೂ. ೫,000) ಬೆಂಗಳೂರು ವೈದ್ಯಕೀಯ ಮಹಾವಿದ್ಯಾಲಯದ ಪ್ಲಾಸ್ಟಿಕ್ ಸರ್ಜರಿ ವಿಭಾಗದ ಸ್ನಾತಕೋತ್ತರ ವಿದ್ಯಾರ್ಥಿ ಡಾ. ಶಿಶಿರ ರಾನಡೆ ಅವರು ಪಡೆದಿದ್ದಾರೆ.
ಜೊತೆಗೆ ಹತ್ತು ಮಂದಿ ವಿದ್ಯಾರ್ಥಿಗಳು ಸಮಾಧಾನಕರ ಬಹುಮಾನ (ತಲಾ ರೂ. 2,000)ವನ್ನು ಪಡೆದಿದ್ದಾರೆ. ದಾವಣಗೆರೆಯ ಹರಿಹರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಬಿ.ಎಸ್ಸಿ ವಿದ್ಯಾರ್ಥಿನಿ ಲಕ್ಷ್ಮಿ ಎಂ.ಪಿ. , ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಯಾದಗಿರಿಯ ಬಿ.ಕಾಂ. ವಿದ್ಯಾರ್ಥಿನಿ ಸುವರ್ಣ ಎಸ್., ಬೆಂಗಳೂರು ವಿಶ್ವವಿದ್ಯಾನಿಲಯದ (ಜ್ಞಾನಭಾರತಿ ಕ್ಯಾಂಪಸ್) ಎಂ.ಎಸ್ಸಿ. ವಿದ್ಯಾರ್ಥಿನಿ ಮಂಜುಳಾ ಎಚ್., ಕುಂದಾಪುರದ ಡಾ. ಬಿ.ಬಿ. ಹೆಗಡೆ ಪ್ರಥಮದರ್ಜೆ ಕಾಲೇಜಿನ ಬಿ.ಕಾಂ. ವಿದ್ಯಾರ್ಥಿನಿ ಶ್ರೇಯಾ ಪೂಜಾರಿ, ಸರ್ಕಾರಿ ಪ್ರಥಮದರ್ಜೆ ಕಾಲೇಜು, ಹೊನ್ನಾಳಿಯ ಬಿ.ಎ. ವಿದ್ಯಾರ್ಥಿ ಆಂಜನೇಯ ಎಚ್.ಎಸ್., ತುಮಕೂರಿನ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಬಿ.ಕಾಂ. ವಿದ್ಯಾರ್ಥಿನಿ ಮಮತಾ ಎಚ್.ಜಿ., ಉಜಿರೆಯ ಎಸ್‌ಡಿಎಂ ಕಾಲೇಜಿನ ಬಿ.ಎ. ವಿದ್ಯಾರ್ತಿ ತುಷಾರ್ ಹೆಗಡೆ, ಭಟ್ಕಳದ ಶ್ರೀ ಗುರುಸುಧೀಂದ್ರ ಕಾಲೇಜಿನ ಬಿ.ಕಾಂ. ವಿದ್ಯಾರ್ಥಿನಿ ಮೇಧಾ ಬಾಲಕೃಷ್ಣ ಶೆಟ್ಟಿ , ಪುತ್ತೂರು ಸರ್ಕಾರಿ ಪ್ರಥಮದರ್ಜೆ ಮಹಿಳಾ ಕಾಲೇಜಿನ ಖದೀಜತ್ ದಿಲ್ಶಾನ ಹಾಗೂ ಬೆಂಗಳೂರಿನ ಬಿಎಂಎಸ್ ಮಹಿಳಾ ಕಾಲೇಜಿನ ಬಿ.ಕಾಂ. ವಿದ್ಯಾರ್ಥಿನಿ ನಯನ ಎಸ್. ಅವರು – ಸಮಾಧಾನಕರ ಬಹುಮಾನ ಪಡೆದ ಹತ್ತು ಮಂದಿ ಕಾಲೇಜು ವಿದ್ಯಾರ್ಥಿಗಳು.
ತೀರ್ಪುಗಾರರು:
ಗುರುರಾಜ ಗಂಟಿಹೊಳೆ, ಕೃಷಿಕರು ಹಾಗೂ ಅಖಿಲ ಭಾರತೀಯ ಸಾಹಿತ್ಯ ಪರಿಷತ್ತಿನ ರಾಷ್ಟ್ರೀಯ ಕಾರ್ಯಕಾರಿಣಿ ಸದಸ್ಯರು
ಡಾ. ಸೋಮಕ್ಕ. ಎಂ, ಉಪನ್ಯಾಸಕರು, ಎಸ್‌ಎಂಎನ್‌ಎಂ ಬಾಲಕಿಯರ ಸ.ಪ.ಪೂ ಕಾಲೇಜ್, ಗಂಗಾವತಿ, ಕೊಪ್ಪಳ
ಡಾ. ಸುಧೀಂದ್ರ ಪಿ.ಆರ್. , ಖ್ಯಾತ ಕೀಲು ಮತ್ತು ಮೂಳೆ ತಜ್ಞರು, ಶಿವಮೊಗ್ಗ
ಎಸ್.ಆರ್. ರಾಮಸ್ವಾಮಿ, ಪ್ರಧಾನ ಸಂಪಾದಕರು, ಉತ್ಥಾನ