ಬೆಂಗಳೂರು: ಉತ್ಥಾನ ಮಾಸಪತ್ರಿಕೆ ಆಯೋಜಿಸಿದ ರಾಜ್ಯ ಮಟ್ಟದ ವಾರ್ಷಿಕ ಕಥಾಸ್ಪರ್ಧೆ 2022ರ ಫಲಿತಾಂಶ ಪ್ರಕಟಗೊಂಡಿದ್ದು, ಉತ್ತರ ಕನ್ನಡ ಜಿಲ್ಲೆಯ ಶಿರಸಿಯ ಕರುಣಾಕರ ಹಬ್ಬುಮನೆ, ಹೆಗಡೆಕಟ್ಟಾ ಅವರು ಪ್ರಥಮ ಬಹುಮಾನ ಪಡೆದಿದ್ದಾರೆ.
ಉತ್ಥಾನ ವಾರ್ಷಿಕ ಕಥಾಸ್ಪರ್ಧೆ 2022ರ ಮೊದಲನೆಯ ಎರಡನೆಯ, ಮೂರನೆಯ ಬಹುಮಾನ ಪಡೆದ ಕಥೆ ಮತ್ತು ಐದು ಮೆಚ್ಚುಗೆಯ ಕಥೆಗಳನ್ನು ಆಯ್ಕೆ ಮಾಡಲಾಗಿದೆ. ಪ್ರಥಮ ಬಹುಮಾನವನ್ನು (ರೂ. 15,000) ಶಿರಸಿಯ ಕರುಣಾಕರ ಹಬ್ಬುಮನೆ ಅವರ ಒಂದು ಸಂಸ್ಕಾರದ ಕಥೆ ಪಡೆದಿದ್ದು, ಎರಡನೇ ಬಹುಮಾನವನ್ನು (ರೂ. 12,000) ಯಾದಗಿರಿಯ ಶಿವವಿಷ್ಣು ವಲ್ಲಭ ಅವರ ಜಂಬುಕೇಶನ ಮತಾಂತರ ಪ್ರಹಸನ ಪಡೆದಿದೆ ಮತ್ತು ಮೂರನೇ ಬಹುಮಾನವನ್ನು (ರೂ. 10,000) ಕಾಸರಗೋಡಿನ ಸಂತೋಷ್ ಅನಂತಪುರ ಅವರ ಭೂತ ಪಾದ ಕಥೆ ಪಡೆದಿದೆ.
ಐದು ಮೆಚ್ಚುಗೆಯ ಕಥೆಗಳನ್ನು ಆಯ್ಕೆ ಮಾಡಲಾಗಿದ್ದು, ಉಡುಪಿಯ ಶ್ರೀಲೋಲ ಸೋಮಯಾಜಿ ಅವರು ಬರೆದ ಇರ್ಬುಸಾಬಿಯ ಅಷ್ಟಾವಧಾನ ಸೇವೆ, ಬೆಂಗಳೂರಿನ ಜಯರಾಮಚಾರಿ ಅವರು ಬರೆದ ಪೊಮ್ಯಾಟೋ, ಧಾರವಾಡದ ರಾಮಚಂದ್ರ ಎಸ್. ಕುಲಕರ್ಣಿ ಅವರು ಬರೆದ ’ಋಣ’ವೆಂಬ ಗೂಢ ಚಿತ್ರದುರ್ಗದ ಜಿ.ಎಂ. ಸಂಜಯ್ (ಪತ್ರಿಕೋದ್ಯಮ ವಿದ್ಯಾರ್ಥಿ) ಅವರು ಬರೆದ ಉದ್ಭವ ಸೇತುವೆ ಹಾಗೂ ಮೈಸೂರಿನ ಮಾಲತಿ ಹೆಗಡೆ ಅವರು ಬರೆದ ನೆಲೆ – ಕಥೆಗಳು ಮೆಚ್ಚುಗೆ ಬಹುಮಾನಕ್ಕೆ (ತಲಾ ರೂ. 2,000) ಆಯ್ಕೆಯಾಗಿವೆ.
ಉತ್ಥಾನ ಮಾಸಪತ್ರಿಕೆಯು ಕಳೆದ 36 ವರ್ಷಗಳಿಂದ ವಾರ್ಷಿಕ ಕಥಾಸ್ಪರ್ಧೆಯನ್ನು ಆಯೋಜಿಸುತ್ತಿದ್ದು, ಈ ವರ್ಷದ 2022ರ ವಾರ್ಷಿಕ ಕಥಾ ಸ್ಪರ್ಧೆಯಲ್ಲಿ ಕನ್ನಡದ ಖ್ಯಾತ ಕಥೆಗಾರರೂ ಸೇರಿದಂತೆ ಒಟ್ಟು 398 ಕಥೆಗಳು ಭಾಗವಹಿಸಿದ್ದವು. ಖ್ಯಾತ ಲೇಖಕರು, ಅಂಕಣಕಾರರು, ಕತೆಗಾರರಾದ ಪ್ರೇಮಶೇಖರ ಅವರು ತೀರ್ಪುಗಾರರಾಗಿ ಬಹುಮಾನಿತ ಕಥೆಗಳನ್ನು ಆಯ್ಕೆ ಮಾಡಿದರು.
ವಿಜೇತರ ವಿವರ ಹೀಗಿದೆ:
ಕಥೆಯ ಹೆಸರು | ಕಥೆಗಾರರ ಹೆಸರು | ||
1 | ಪ್ರಥಮ ಬಹುಮಾನ (ರೂ. 15,000) | ಒಂದು ಸಂಸ್ಕಾರದ ಕಥೆ | ಕರುಣಾಕರ್ ಹಬ್ಬುಮನೆ, ಶಿರಸಿ (ಉ.ಕ.) |
2 | ಎರಡನೆಯ ಬಹುಮಾನ (ರೂ. 12,000) | ಜಂಬುಕೇಶನ ಮತಾಂತರ ಪ್ರಹಸನ | ಶಿವವಿಷ್ಣು ವಲ್ಲಭ, ಯಾದಗಿರಿ |
3 | ಮೂರನೆಯ ಬಹುಮಾನ (ರೂ. 10,000) | ಭೂತ ಪಾದ | ಸಂತೋಷ್ ಅನಂತಪುರ, ಕಾಸರಗೋಡು |
ಮೆಚ್ಚುಗೆ ಬಹುಮಾನ (ತಲಾ ರೂ. 2,000)
ಕಥೆಯ ಹೆಸರು | ಕಥೆಗಾರರ ಹೆಸರು | |
1 | ಇರ್ಬುಸಾಬಿಯ ಅಷ್ಟಾವಧಾನ ಸೇವೆ | ಶ್ರೀಲೋಲ ಸೋಮಯಾಜಿ, ಉಡುಪಿ |
2 | ಪೊಮ್ಯಾಟೋ | ಜಯರಾಮಚಾರಿ, ಬೆಂಗಳೂರು |
3 | ’ಋಣ’ವೆಂಬ ಗೂಢ | ರಾಮಚಂದ್ರ ಎಸ್. ಕುಲಕರ್ಣಿ, ಧಾರವಾಡ |
4 | ಉದ್ಭವ ಸೇತುವೆ | ಜಿ.ಎಂ. ಸಂಜಯ್, ಚಿತ್ರದುರ್ಗ |
5 | ನೆಲೆ | ಮಾಲತಿ ಹೆಗಡೆ, ಮೈಸೂರು |
ಉತ್ಥಾನ ಕಥಾ ಸ್ಪರ್ಧೆಯಲ್ಲಿ ಭಾಗವಹಿಸಿದ ಎಲ್ಲ ಕಥೆಗಾರ-ಕಥೆಗಾರ್ತಿಯರಿಗೆ ಹಾಗೂ ಬಹುಮಾನ ಪಡೆದವರಿಗೆ ಅಭಿನಂದನೆಗಳು.
ಈ ಸುದ್ದಿಯನ್ನು ತಮ್ಮ ಪತ್ರಿಕೆಯಲ್ಲಿ ಪ್ರಕಟಿಸಬೇಕಾಗಿ ಈ ಮೂಲಕ ತಮ್ಮಲ್ಲಿ ವಿನಂತಿಸುತ್ತಿದ್ದೇವೆ.
ಎಸ್.ಆರ್. ರಾಮಸ್ವಾಮಿ
ಪ್ರಧಾನ ಸಂಪಾದಕರು, ಉತ್ಥಾನ