ಉತ್ಥಾನ - ಸದಭಿರುಚಿಯ ಮಾಸಪತ್ರಿಕೆ
ಪ್ರಕಟಣೆಯ
60ನೇ
ವರ್ಷ

ಉತ್ಥಾನ - ಸದಭಿರುಚಿಯ ಮಾಸಪತ್ರಿಕೆ

ಕ್ಯಾನ್ವಸ್

ಪ್ರತಾಪ್ ಬಹುರೂಪಿ

[email protected]

prathap bahuroopi newಪ್ರತಾಪ್ ಬಹುರೂಪಿ ಧಾರವಾಡದ ಪ್ರಸಿದ್ಧ ಕಲಾವಿದರು. ಬೆಳಗಾವಿಯ ‘ಉಮಾ ಸ್ಕೂಲ್ ಆಫ್ ಆರ್ಟ್’ನಿಂದ ಚಿತ್ರಕಲೆಯಲ್ಲಿ ಪದವಿ. ಹಂಪಿ ಕನ್ನಡ ವಿಶ್ವವಿದ್ಯಾನಿಲಯದಿಂದ ದೃಶ್ಯಕಲೆಯಲ್ಲಿ ಸ್ನಾತಕೋತ್ತರ ಪದವಿ. ಪ್ರಸ್ತುತ ಹುಬ್ಬಳ್ಳಿಯ ಶ್ರೀ ಮಹಾಂತೇಶ ಲಲಿತಕಲಾ ಮಹಾವಿದ್ಯಾಲಯದಲ್ಲಿ ಆಚಾರ್ಯರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಗುರು – ಪ್ರಸಿದ್ಧ ಕಲಾವಿದ ಎಸ್.ಬಿ. ಸುತಾರ.

ಪ್ರತಾಪ್ ಬಹುರೂಪಿಚಿತ್ರಕಲೆಯಲ್ಲಿ ಬಹುರೂಪಿಯವರ ಆಸಕ್ತಿಯ ಕ್ಷೇತ್ರ – ಪ್ರಕೃತಿ ದೃಶ್ಯಾವಳಿ ಹಾಗೂ ವ್ಯಕ್ತಿಚಿತ್ರ ರಚನೆ; ಅಲೆಮಾರಿ ಬುಡಕಟ್ಟಿನ ಬದುಕಿನ ಚಿತ್ರಣದ ಬಗ್ಗೆ ವಿಶೇಷ ಒಲವು. ಪ್ರತಾಪ್ ಬಹುರೂಪಿ ೨೦೦೫ರಿಂದ ೨೦೦೮ರವರೆಗೆ ಕರ್ನಾಟಕ ಲಲಿತಕಲಾ ಅಕಾಡಮಿ ಸದಸ್ಯರಾಗಿದ್ದರು. ರಾಜ್ಯ ಪಾಠ್ಯಪುಸ್ತಕಗಳಿಗೆ ಚಿತ್ರಕಾರರಾಗಿಯೂ ಸೇವೆ ಸಲ್ಲಿಸಿದ್ದಾರೆ. ಹತ್ತುಹಲವು ಪ್ರಶಸ್ತಿಪುರಸ್ಕೃತ ಬಹುರೂಪಿಯವರನ್ನು ರಾಜ್ಯಸರ್ಕಾರ ೨೦೦೯ರಲ್ಲಿ ‘ಅಲೆಮಾರಿ ಶ್ರೀ’ ಹಾಗೂ ೨೦೧೩ರಲ್ಲಿ ‘ಯುವ ಕುಂಚಕಲಾಶ್ರೀ’ ಪ್ರಶಸ್ತಿಗಳನ್ನು ನೀಡಿ ಗೌರವಿಸಿದೆ. ಪ್ರತಾಪ್ ಬಹುರೂಪಿ ಪ್ರಖ್ಯಾತ ಚಿತ್ರಕಲಾವಿದರಾದ ರವಿವರ್ಮ, ಬಿ.ಕೆ.ಎಸ್. ವರ್ಮ ಹಾಗೂ ಎಸ್.ಎನ್. ಪಂಡಿತ್ ಅವರ ಗಾಢ ಅಭಿಮಾನಿ.

One Response to “ಕ್ಯಾನ್ವಸ್”

  1. ಪ್ರತಾಪ ಬಹುರೂಪಿ

    ಸರ್ ನನ್ನಂತಹ ಕಟ್ಟ ಕಡೆಯ ನಿರ್ಲಕ್ಷ್ಯ ಕಲಾವಿದನ ಕುರಿತು ಕಿರುಪರಿಚಯಾತ್ಮಕ ಲೇಖನದೊಂದಿಗೆ ನಾನು ರಚಿಸಿದ ಅಲೆಮಾರಿ ಬುಡ್ಗಜಂಗಮ್ ಸಮುದಾಯದ ಪ್ರಸಿದ್ಧ ಬುರ್ ಕಥಾ ಕಲಾವಿದೆ ನಡೋಜ ದರೊಜಿ ಈರಮ್ಮ ಅವರ ಭಾವಚಿತ್ರವನ್ನು ಪ್ರಕಟಿಸಿದ್ದಕ್ಕೆ ತಮಗೂ ತಮ್ಮ ಪತ್ರಿಕೆಗೆ ಅನಂತ ದನ್ಯವಾದಗಳು. ಮತ್ತು ಇದರಲ್ಲಿ ನನ್ನ ಸೇವೆಯನ್ನು ಆಚಾರ್ಯರು ಎಂದು ಪ್ರಿಂಟ್ ಆಗಿದ್ದು ಇದನ್ನು ಉಪನ್ಯಾಸಕ ಎಂದು ಓದಿಕೊಳ್ಳಲು ಕೋರುತ್ತೇನೆ.

    Reply

Leave a Reply to ಪ್ರತಾಪ ಬಹುರೂಪಿ

Click here to cancel reply.

ಉತ್ಥಾನ - ಸದಭಿರುಚಿಯ ಮಾಸಪತ್ರಿಕೆ

`ಉತ್ಥಾನ’ : ೧೯೬೫ರಿಂದ ಪ್ರಕಟವಾಗುತ್ತಿರುವ ಕನ್ನಡದ ಹೆಮ್ಮೆಯ ಸದಭಿರುಚಿಯ ಮಾಸಪತ್ರಿಕೆ. ರಾಜ್ಯದಾದ್ಯಂತ ಪ್ರಸರಣ ಇರುವ ಸಂಚಿಕೆಯು ಈಗ ಕ್ರೌನ್‌ ಚತುರ್ದಳ ಆಕಾರದಲ್ಲಿ ೧೧೨ ವರ್ಣಪುಟಗಳಲ್ಲಿ ವೈವಿಧ್ಯಮಯ ಲೇಖನ, ನುಡಿಚಿತ್ರ, ಸಾಹಿತ್ಯದ ಬರಹಗಳನ್ನು ಪ್ರಕಟಿಸುತ್ತಿದೆ.  ಸಂಚಿಕೆಯ ಬೆ ಲೆ ೨೦ ರೂ.

Utthana
Kannada Monthly Magazine ​
Utthana Trust
Keshavashilpa, Kempegowda Nagara
Bengaluru - 560019
Karnataka State , INDIA

Phone : 080-26612732
Email : [email protected]

ಉತ್ಥಾನದ ಹೊಸ ಪ್ರಕಟಣೆಗಳ ಬಗ್ಗೆ ನಿಮ್ಮ ಈಮೈಲ್‌ ಅಂಚೆಪೆಟ್ಟಿಗೆಯಲ್ಲೇ ಮಾಹಿತಿ ಪಡೆಯಿರಿ. ಇದಕ್ಕಾಗಿ ನಮ್ಮ ವಾರ್ತಾಪತ್ರಕ್ಕೆ ಉಚಿತವಾಗಿ ಚಂದಾದಾರರಾಗಿ