ಉತ್ಥಾನ ಮಾಸಪತ್ರಿಕೆ ಕಾಲೇಜು ವಿದ್ಯಾರ್ಥಿಗಳಿಗಾಗಿ ಸ್ವಾತಂತ್ರ್ಯದ ನಾಳೆಗಳು : ಕ್ಯಾಂಪಸ್ ನ ಒಳಗೆ-ಹೊರಗೆ ಎಂಬ ವಿಷಯದ ಪ್ರಬಂಧ ಸ್ಪರ್ಧೆಯನ್ನು ನಡೆಸಿದೆ. ಇದರ ಫಲಿತಾಂಶ ಇದೀಗ ಹೊರಬಂದಿದ್ದು ಕುಮುಟಾದ ಡಾ|| ಎ.ವಿ. ಬಾಳಿಗಾ ಕಾಲೇಜ್ ಆಫ್ ಆಟ್ಸ್ ಆಂಡ್ ಸೈನ್ಸ್ ಕಾಲೇಜಿನ ಸಂಗೀತಾ ಶೆಟ್ಟಿ ಅವರು ಮೊದಲ ಬಹುಮಾನ ಗಳಿಸಿದ್ದಾರೆ.
ಪುತ್ತೂರಿನ ವಿವೇಕಾನಂದ ಕಾಲೇಜಿನ ಸಾಯಿಶ್ರೀಪದ್ಮ ಡಿ.ಎಸ್. ಅವರು ಎರಡನೇ ಬಹುಮಾನವನ್ನು ಗಳಿಸಿದ್ದಾರೆ.
ತೃತೀಯ ಬಹುಮಾನವನ್ನು ಬೆಂಗಳೂರಿನ ವಿಕೆಐಟಿಯ ಪವನ ಎಮ್. ಹಾಗೂ ಪುತ್ತೂರಿನ ವಿವೇಕಾನಂದ ಕಾಲೇಜಿನ ಶ್ರೀರಾಮನಂದನ ಪಿ. ಅವರು ಪಡೆದಿದ್ದಾರೆ.
ಬೆಂಗಳೂರಿನ ಪೆಸೆಟ್ ಕಾಲೇಜಿನ ಮಾನಸಾ ಎಮ್ ಹೆಗ್ಡೆ ಅವರು ಮೆಚ್ಚುಗೆಯ ಬಹುಮಾನವನ್ನು ಪಡೆದರು.
ರಾಜ್ಯದ 36 ಪ್ರತಿಷ್ಠಿತ ಕಾಲೇಜುಗಳಿಂದ ಪ್ರಬಂಧಗಳು ಆಗಮಿಸಿದ್ದವು. ಮೊದಲನೇ ಹಂತವಾಗಿ ಚಿತ್ರದುರ್ಗದ ಎಂ.ಎಂ.ಎಫ್.ಜಿ. ಕಾಲೇಜಿನ ತತ್ತ್ವಶಾಸ್ತ್ರ ವಿಭಾಗದ ಮುಖ್ಯಸ್ಥರಾದ ಡಾ. ಕೆ. ರಾಜೀವಲೋಚನ ಹಾಗೂ ಖ್ಯಾತ ಬರಹಗಾರ್ತಿ ಛಾಯಾ ಭಗವತಿ ಅವರು ಪ್ರಬಂಧಗಳ ಮೌಲ್ಯಮಾಪನ ಮಾಡಿದರು. ಈ ತೀರ್ಪುಗಾರರು 15 ಪ್ರಬಂಧಗಳನ್ನು ಆರಿಸಿ ಮುಂದಿನ ಹಂತಕ್ಕೆ ನೀಡಿದರು.
ಎರಡನೇ ಹಂತದ ಮೌಲ್ಯಮಾಪನ ಜನವರಿ 6ರಂದು ಬೆಂಗಳೂರಿನ ಕೆಂಪೇಗೌಡನಗರದಲ್ಲಿರುವ ಉತ್ಥಾನ ಮಾಸಪತ್ರಿಕೆಯ ಕಛೇರಿಯಲ್ಲಿ ನಡೆಯಿತು.
ಪ್ರಾರಂಭದ ಸೂಚನೆಯಂತೆ ಮೊದಲ ಹಂತದಲ್ಲಿ ಆಯ್ಕೆಯಾದ ವಿದ್ಯಾರ್ಥಿಗಳು ಬೆಂಗಳೂರಿಗೆ ಆಗಮಿಸಿ ಪಿಪಿಟಿ ಮೂಲಕ ತಮ್ಮ ಪ್ರಬಂಧವನ್ನು ತೀರ್ಪುಗಾರರ ಸಮ್ಮುಖದಲ್ಲಿ ಮಂಡಿಸಬೇಕಾಗಿತ್ತು. ಅದರಂತೆ ಜನವರಿ 6ರಂದು ನಡೆದ ಕಾರ್ಯಕ್ರಮದಲ್ಲಿ ಪ್ರಜಾವಾಣಿ ಪತ್ರಿಕೆಯ ಮೆಟ್ರೋ ವಿಭಾಗದ ಪ್ರಮುಖರಾದ ಡಿ.ಎಂ. ಘನಶ್ಯಾಮ್ ಹಾಗೂ ಸಾಪ್ಟ್ ವೇರ್ ತಂತ್ರಜ್ಞರೂ ಖ್ಯಾತ ಸಾಮಾಜಿಕ ಜಾಲತಾಣಿಗರೂ ಆದ ಕಿರಣ್ ಕೆ.ಎಸ್. ಅವರು ತೀರ್ಪಗಾರರಾಗಿ ಆಗಮಿಸಿದರು.
ನಂತರ ನಡೆದ ಬಹುಮಾನ ವಿತರಣಾ ಕಾರ್ಯಕ್ರಮದಲ್ಲಿ ಜ್ಞಾನ ಆಯೋಗದ ಸದಸ್ಯರಾಗಿದ್ದ ಪ್ರೊ. ಎಂ.ಕೆ. ಶ್ರೀಧರ್ ಅವರು ಆಗಮಿಸಿ ವಿಜೇತರಿಗೆ ಬಹುಮಾನ ವಿತರಿಸಿದರು. ರಾಷ್ಟ್ರೋತ್ಥಾನ ಪರಿಷತ್ತಿನ ಅಧ್ಯಕ್ಷರಾದ ನಾಡೋಜ ಎಸ್.ಆರ್. ರಾಮಸ್ವಾಮಿ ಹಾಗೂ ಪ್ರಧಾನ ಕಾರ್ಯದರ್ಶಿ ನಾ. ದಿನೇಶ್ ಹೆಗ್ಡೆ ಅವರು ಉಪಸ್ಥಿತರಿದ್ದರು.
ಮೊದಲ ಬಹುಮಾನ (ರೂ.8,000)
ಸಂಗೀತಾ ಎನ್. ಶೆಟ್ಟಿ, ಡಾ|| ಎ.ವಿ. ಬಾಳಿಗಾ ಕಾಲೇಜ್ ಆಫ್ ಆಟ್ಸ್ ಆಂಡ್ ಸೈನ್ಸ್, ಕುಮುಟಾ
ಎರಡನೇ ಬಹುಮಾನ (ರೂ. 5,000)
ಸಾಯಿಶ್ರೀಪದ್ಮ ಡಿ.ಎಸ್. , ವಿವೇಕಾನಂದ ಕಾಲೇಜು ಪುತ್ತೂರು
ಮೂರನೇ ಬಹುಮಾನ (ರೂ. 2,000)
- ಶ್ರೀರಾಮನಂದನ ಪಿ. , ವಿವೇಕಾನಂದ ಕಾಲೇಜು ಪುತ್ತೂರು
- ಪವನ ಎಮ್. , ವಿಕೆಐಟಿ, ಬೆಂಗಳೂರು
ಮೆಚ್ಚುಗೆ ಬಹುಮಾನ
ಮಾನಸಾ ಎಮ್ ಹೆಗ್ಡೆ , ಪೆಸೆಟ್ ಬೆಂಗಳೂರು ಸೌತ್ ಪ್ಯಾಂಪಸ್