
ಬೆಂಗಳೂರು, ಆಗಸ್ಟ್ 23, 2021: ಉತ್ಥಾನ ಮಾಸಪತ್ರಿಕೆಯ ವತಿಯಿಂದ ಕಾಲೇಜು ವಿದ್ಯಾರ್ಥಿಗಳಿಗಾಗಿ ’ಭಾರತದ ಸ್ವಾತಂತ್ರ್ಯ ಹೋರಾಟದ ಮಜಲುಗಳು’ ಎಂಬ ವಿಷಯದ ಕುರಿತು ರಾಜ್ಯಮಟ್ಟದ ಪ್ರಬಂಧ ಸ್ಪರ್ಧೆಯನ್ನು ಆಯೋಜಿಸಿದೆ.
ಪ್ರಬಂಧ ಸ್ಪರ್ಧೆಯ ವಿಷಯ: ಭಾರತದ ಸ್ವಾತಂತ್ರ್ಯ ಹೋರಾಟದ ಮಜಲುಗಳು
- ಈ ಸ್ಪರ್ಧೆಯಲ್ಲಿ ಪದವಿ ಮತ್ತು ಸ್ನಾತಕೋತ್ತರ ವಿದ್ಯಾರ್ಥಿಗಳು ಮಾತ್ರ ಭಾಗವಹಿಸಬಹುದು
- ಪ್ರಬಂಧ ಸ್ಪರ್ಧೆಯು ಕನ್ನಡ ಭಾಷೆಯಲ್ಲಿ ಇರುತ್ತದೆ.
- ಮೇಲಿನ ವಿಷಯದ ಕುರಿತಾಗಿ ೧೫೦೦ ಪದಗಳಿಗೆ ಮೀರದಂತೆ ಪ್ರಬಂಧವನ್ನು ಬರೆದು ಇಮೇಲ್ utthanacompetitions@gmail.com / ಕೆಳಗಿನ ವಿಳಾಸಕ್ಕೆ ಅಂಚೆ ಮೂಲಕ ನವೆಂಬರ್ ೨೦ರ ಒಳಗೆ ಕಳುಹಿಸಬೇಕು.
- ಬಹುಮಾನ
ಮೊದಲ ಬಹುಮಾನ: ರೂ. ೧೦,೦೦೦ /-
ಎರಡನೆಯ ಬಹುಮಾನ: ರೂ. ೭,೦೦೦ /-
ಮೂರನೆಯ ಬಹುಮಾನ: ರೂ. ೫,೦೦೦/-
ಹತ್ತು ಮೆಚ್ಚುಗೆಯ ಬಹುಮಾನಗಳು: ತಲಾ ರೂ. ೨,೦೦೦/-
- ಪ್ರಬಂಧ ನಮಗೆ ತಲಪಲು ಕೊನೆಯ ದಿನಾಂಕ: ನವೆಂಬರ್ 20, 2021
೬. ಪ್ರಬಂಧವನ್ನು ಕಳುಹಿಸಬೇಕಾದ ವಿಳಾಸ:
ಸಂಪಾದಕರು,
‘ಉತ್ಥಾನ’ ವಾರ್ಷಿಕ ಪ್ರಬಂಧ ಸ್ಪರ್ಧೆ – ೨೦೨೧
’ಕೇಶವ ಶಿಲ್ಪ’, ಕೆಂಪೇಗೌಡನಗರ,
ಬೆಂಗಳೂರು – ೫೬೦ ೦೦೪
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ: 7795441894 / 08026604673

ಕಾಲೇಜು ವಿದ್ಯಾರ್ಥಿಗಳಿಗಾಗಿ ‘ಉತ್ಥಾನ’ ಪ್ರಬಂಧ ಸ್ಪರ್ಧೆ – 2021
ವಿಷಯ: ಭಾರತದ ಸ್ವಾತಂತ್ರ್ಯ ಹೋರಾಟದ ಮಜಲುಗಳು
ಆಧಾರ ಬಿಂದುಗಳು:
ಸ್ವರಾಜ್ಯ ಅಥವಾ ಸ್ವಾತಂತ್ರ್ಯ ಎಂದರೆ ನಿಮ್ಮ ಕಲ್ಪನೆ ಏನು? ಜಗತ್ತಿನ ಇನ್ನಾವುದೇ ದೇಶ ಎದುರಿಸದಷ್ಟು ಪರಕೀಯ ಆಕ್ರಮಣಗಳನ್ನು ಎದುರಿಸಿದ ನಂತರವೂ ಭಾರತ ತನ್ನತನವನ್ನು ಉಳಿಸಿ, ಸಂರಕ್ಷಿಸಿಕೊಂಡು ಬಂದಿದೆ. ಇದು ಹೇಗೆ ಸಾಧ್ಯವಾಯಿತು? ಗ್ರೀಕರು, ಕುಶಾನರು, ಹೂಣರು, ಅರಬ್ಬರು, ಮೊಘಲರು, ಪೋರ್ಚುಗೀಸರು, ಡಚ್ಚರು, ಫ್ರೆಂಚರು, ಕೊನೆಗೆ ಆಂಗ್ಲರು – ಹೀಗೆ ಭಾರತದ ಸ್ವಾತಂತ್ರ್ಯ ಹೋರಾಟಕ್ಕೆ ದೀರ್ಘಕಾಲೀನ ಇತಿಹಾಸವಿದೆಯಲ್ಲವೆ? ಭಾರತದ ಸ್ವಾತಂತ್ರ್ಯ ಹೋರಾಟದಲ್ಲಿ ಎಷ್ಟು ಧಾರೆಗಳನ್ನು ಗುರುತಿಸಬಹುದು? ಭಾರತದ ಸ್ವರಾಜ್ಯ-ಸ್ವಾತಂತ್ರ್ಯ ಹೋರಾಟದಲ್ಲಿ ಸಮಾಜಜಾಗೃತಿ ಹಾಗೂ ಸಮಾಜಸುಧಾರಣೆಯ ಪಾತ್ರವೇನು?
ಮೇಲಿನ ವಿಷಯದ ಕುರಿತಾಗಿ ೧೫೦೦ ಪದಗಳಿಗೆ ಮೀರದಂತೆ ಪ್ರಬಂಧವನ್ನು ಬರೆದು ಈ ಕೆಳಗಿನ ಇಮೇಲ್/ವಿಳಾಸಕ್ಕೆ ಕಳುಹಿಸಿ.
ಸ್ಪರ್ಧೆಯ ನಿಯಮಗಳು:
- ಈ ಸ್ಪರ್ಧೆಯಲ್ಲಿ ಪದವಿ ಮತ್ತು ಸ್ನಾತಕೋತ್ತರ ವಿದ್ಯಾರ್ಥಿಗಳು ಮಾತ್ರ ಭಾಗವಹಿಸಬಹುದು.
- ಸ್ಪರ್ಧೆಗೆ ಕಳುಹಿಸುವ ಪ್ರಬಂಧ ವಿದ್ಯಾರ್ಥಿಯ ಸ್ವಂತ ರಚನೆಯಾಗಿರಬೇಕು. ಈವರೆಗೆ ಎಲ್ಲಿಯೂ ಯಾವ ರೀತಿಯಲ್ಲೂ ಪ್ರಕಟ ಅಥವಾ ಪ್ರಸಾರ ಆಗಿರಬಾರದು.
- ಕಳುಹಿಸುವ ಪ್ರಬಂಧವನ್ನು ಕಾಲೇಜು/ವಿಭಾಗ ಮುಖ್ಯಸ್ಥರಿಂದ ದೃಢೀಕರಿಸಬೇಕು.
- ಸ್ಪರ್ಧೆಯಲ್ಲಿ ಭಾಗವಹಿಸಿದ ಪ್ರಬಂಧವನ್ನು ಹಿಂದಿರುಗಿಸುವ ವ್ಯವಸ್ಥೆ ಇರುವುದಿಲ್ಲ.
- ಸ್ಪರ್ಧಿಗಳು ತಮ್ಮ ಹೆಸರು, ಪರಿಚಯ, ಮೊಬೈಲ್ ನಂಬರ್, ಕಾಲೇಜಿನ ಹೆಸರು, ಸೀಲ್ ಇತ್ಯಾದಿಗಳು ಇರುವ ಹಾಳೆಯನ್ನು ಪ್ರಬಂಧ ಬರೆದು ಕಳುಹಿಸಲು ಉಪಯೋಗಿಸಬಾರದು.
- ಪ್ರಬಂಧವನ್ನು ಹಾಳೆಯ ಒಂದೆ ಮಗ್ಗುಲಲ್ಲಿ ಸ್ಫುಟವಾಗಿ ಬರೆದಿರಬೇಕು. ಹಾಳೆಗಳನ್ನು ಚಿತ್ರಗಳಿಂದ, ಬಣ್ಣಗಳಿಂದ ಅಲಂಕರಿಸುವುದು ಬೇಡ.
- ಸ್ಪರ್ಧಿಗಳು ತಮ್ಮ ಹೆಸರು, ಪರಿಚಯ, ಮೊಬೈಲ್ ನಂಬರ್, ಕಾಲೇಜಿನ ಹೆಸರು, ವಿಳಾಸ ಇತ್ಯಾದಿಗಳನ್ನು ಪ್ರತ್ಯೇಕ ಹಾಳೆಯಲ್ಲಿ ಬರೆದು ಲಗತ್ತಿಸಬೇಕು. ಜೊತೆಗೆ ಭಾವಚಿತ್ರವೂ ಇರಬೇಕು.
- ಪ್ರಬಂಧವನ್ನು ನುಡಿ, ಬರಹ ಅಥವಾ ಯೂನಿಕೋಡ್ ತಂತ್ರಾಂಶದಲ್ಲಿ ಸಿದ್ಧಪಡಿಸಿ utthanacompetitions@gmail.com – ಈ ವಿಳಾಸಕ್ಕೆ ಇ-ಮೇಲ್ ಮೂಲಕವೂ ಕಳುಹಿಸಬಹುದು.
- ಬಹುಮಾನಿತ ಪ್ರಬಂಧಗಳನ್ನು ಯಾವುದೇ ರೂಪದಲ್ಲಿ, ಯಾವಾಗ ಬೇಕಾದರೂ ಬಳಸಿಕೊಳ್ಳುವ ಹಕ್ಕನ್ನು ’ಉತ್ಥಾನ’ವು ಕಾಯ್ದಿರಿಸಿಕೊಂಡಿದೆ.
- ತೀರ್ಪುಗಾರರ ಮೌಲ್ಯನಿರ್ಣಯದ ನಂತರ ಫಲಿತಾಂಶವನ್ನು ’ಉತ್ಥಾನ’ದಲ್ಲಿ ಪ್ರಕಟಿಸಲಾಗುವುದು. ಅದಕ್ಕೆ ಪೂರ್ವದಲ್ಲಿ ಯಾವುದೇ ಪತ್ರವ್ಯವಹಾರ ಸಾಧ್ಯವಾಗದು.
- ಸ್ಪರ್ಧೆಗೆ ಸಂಬಂಧಿಸಿದ ಎಲ್ಲ ವಿಚಾರಗಳಲ್ಲೂ ವ್ಯವಸ್ಥಾಪಕರದ್ದೇ ಅಂತಿಮ ತೀರ್ಮಾನ.