ಬೆಂಗಳೂರು, ಆಗಸ್ಟ್ ೩೦, ೨೦೨೧: ಉತ್ಥಾನ ಮಾಸಪತ್ರಿಕೆಯು ರಾಜ್ಯ ಮಟ್ಟದ ವಾರ್ಷಿಕ ಕಥಾ ಸ್ಪರ್ಧೆಯನ್ನು ಆಯೋಜಿಸಿದೆ.
- ಕಥಾ ಸ್ಪರ್ಧೆಯು ಕನ್ನಡದಲ್ಲಿ ಇರುತ್ತದೆ.
- ಕಥೆ 3,000 ಪದಗಳ ಮಿತಿಯಲ್ಲಿ ಇರಬೇಕು.
- ಒಬ್ಬರು ಒಂದು ಕಥೆಯನ್ನು ಮಾತ್ರ ಕಳುಹಿಸಬಹುದು.
- ಕಥೆಗಳು ಸ್ವತಂತ್ರವಾಗಿರಬೇಕು. ಭಾಷಾಂತರವಾಗಲಿ, ಅನುಕರಣೆಯಾಗಲಿ ಆಗಿರಕೂಡದು. ಎಲ್ಲೂ ಸ್ವೀಕೃತವಾಗಿರಬಾರದು; ಪರಿಶೀಲನೆಗಾಗಿಯೂ ಯಾವುದೇ ಅನ್ಯ ಪತ್ರಿಕೆ, ಸಂಸ್ಥೆಗೆ ಕಳುಹಿಸಿರಬಾರದು. ಸಾಮಾಜಿಕ ಜಾಲತಾಣಗಳಲ್ಲೂ ಪ್ರಕಟವಾಗಿರಬಾರದು.
- ಕಾಗದದ ಒಂದೇ ಮಗ್ಗುಲಲ್ಲಿ ಸ್ಫುಟವಾಗಿ ಬರೆದು ಕೆಳಗಿನ ವಿಳಾಸಕ್ಕೆ ಅಂಚೆ ಮೂಲಕ ಅಥವಾ ನುಡಿ, ಬರಹ, ಯೂನಿಕೋಡ್ ತಂತ್ರಾಂಶದಲ್ಲಿ ಸಿದ್ಧಪಡಿಸಿ ಇ-ಮೇಲ್ ಮೂಲಕ ಕಳುಹಿಸಬಹುದು. ಇಮೇಲ್ ವಿಳಾಸ : [email protected]
- ಬಹುಮಾನ
ಮೊದಲನೆಯ ಬಹುಮಾನ ರೂ. 15,000
ಎರಡನೆಯ ಬಹುಮಾನ ರೂ. 12,000
ಮೂರನೆಯ ಬಹುಮಾನ ರೂ. 10,000
ಐದು ಮೆಚ್ಚುಗೆಯ ಬಹುಮಾನಗಳು ತಲಾ ರೂ. 2,000
- ಕಥೆಗಳು ನಮಗೆ ತಲಪಲು ಕೊನೆಯ ದಿನಾಂಕ: ಅಕ್ಟೋಬರ್ 31, 2021
- ಕಥೆಯನ್ನು ಕಳುಹಿಸಬೇಕಾದ ವಿಳಾಸ:
ಸಂಪಾದಕರು,
’ಉತ್ಥಾನ’ ವಾರ್ಷಿಕ ಕಥಾ ಸ್ಪರ್ಧೆ – ೨೦೨೧
‘ಕೇಶವ ಶಿಲ್ಪ , ಕೆಂಪೇಗೌಡನಗರ, ಬೆಂಗಳೂರು ೫೬೦ ೦೦೪
ದೂರವಾಣಿ: ೦೮೦ – ೨೬೬೦ ೪೬೭೩