ಮನೆಮದ್ದು ಕೂಡಾ ಕೋವಿಡ್ ಕಾಲದಲ್ಲಿ ಭಾರತೀಯರ ಆರೋಗ್ಯ ಕಾಪಾಡುವಲ್ಲಿ ಪ್ರಮುಖ ಪಾತ್ರವಹಿಸಿದ ಇನ್ನೊಂದು ಸಂಗತಿ ಎಂದರೆ ಅತಿಶಯೋಕ್ತಿಯಲ್ಲ. ಸರ್ಕಾರದ ಆಯುಷ್ ಇಲಾಖೆಯೇ ಗೊತ್ತುಮಾಡಿದ ಸಾಂಪ್ರದಾಯಿಕ ಆಯುರ್ವೇದದ ಔಷಧಿಗಳ ಜೊತೆಗೆ ಅಮೃತಬಳ್ಳಿ ಕಷಾಯ, ಶುಂಠಿ, ಲವಂಗ, ಕಾಳುಮೆಣಸು, ಕೊತ್ತಂಬರಿ ಮೊದಲಾದ ಮಸಾಲೆ ಪದಾರ್ಥಗಳ ಕಷಾಯ, ನೆಲನೆಲ್ಲಿ ಸೊಪ್ಪಿನ ತಂಬುಳಿಯಿಂದ ಹಿಡಿದು ಅನೇಕ ರೀತಿಯ ಮನೆಮದ್ದುಗಳ ಪ್ರಯೋಗ ನಡೆಯಿತು. ಹಿತ್ತಲ ಗಿಡಮೂಲಿಕೆ, ಬಳ್ಳಿಗಳೂ ಔಷಧವಾಗಬಲ್ಲವು ಎನ್ನುವ ಮರೆತುಹೋದ ಜ್ಞಾನ ಮತ್ತೆ ನೆನಪಾಯಿತು. ಹಾಗೆಯೇ ನಮ್ಮ ದಿನನಿತ್ಯದ ಅಡುಗೆಯಲ್ಲಿ ಬಳಸುವ ಸಾಂಬಾರು ಸಾಮಗ್ರಿಗಳಲ್ಲಿ ಸಹ ಔಷಧೀಯ ಗುಣಗಳು ಶ್ರೀಮಂತವಾಗಿವೆ. ಇವೆಲ್ಲವೂ ಪರೋಕ್ಷವಾಗಿ ನಮ್ಮ ಆರೋಗ್ಯ ರಕ್ಷಣೆಯಲ್ಲಿ (ಇಮ್ಯುನಿಟಿ) ಮಹತ್ತ್ವದ ಪಾತ್ರ ವಹಿಸುತ್ತವೆ. ಮನೆಮದ್ದು ಮತ್ತು ಆಹಾರ ಪದ್ಧತಿ ನಮ್ಮ ಅಮೂಲ್ಯ ಆಸ್ತಿ.
ಮನೆಮದ್ದು
Month : July-2021 Episode : Author :