ಉತ್ಥಾನ ಮಾಸಪತ್ರಿಕೆ ಆಯೋಜಿಸಿದ ವಾರ್ಷಿಕ ಕಥಾಸ್ಪರ್ಧೆ ೨೦೨೧ರ ಫಲಿತಾಂಶ ಪ್ರಕಟಗೊಂ ಬಳ್ಳಾರಿಯ ವೀರೇಂದ್ರ ರಾಬಿಹಾಳ್ ಅವರು ಪ್ರಥಮ ಬಹುಮಾನ ಪಡೆದಿದ್ದಾರೆ.
ಉತ್ಥಾನ ವಾರ್ಷಿಕ ಕಥಾಸ್ಪರ್ಧೆ ೨೦೨೧ರ ಮೊದಲನೆ, ಎರಡನೆಯ, ಮೂರನೆಯ ಬಹುಮಾನ ಪಡೆದ ಕಥೆ ಮತ್ತು ಐದು ಮೆಚ್ಚುಗೆಯ ಕಥೆಗಳನ್ನು ಆಯ್ಕೆ ಮಾಡಲಾಗಿದೆ. ಪ್ರಥಮ ಬಹುಮಾನವನ್ನು (ರೂ. ೧೫,೦೦೦) ಬಳ್ಳಾರಿಯ ವೀರೇಂದ್ರ ರಾಬಿಹಾಳ್, ಎರಡನೇ ಬಹುಮಾನವನ್ನು (ರೂ. ೧೨,೦೦೦) ಉಡುಪಿಯ ಸುಧಾ ಹೆಗಡೆ ಮತ್ತು ಮೂರನೇ ಬಹುಮಾನವನ್ನು (ರೂ. ೧೦,೦೦೦) ತೀರ್ಥಹಳ್ಳಿಯ ಸವಿರಾಜ್ ಆನಂದೂರು ಅವರು ಪಡೆದಿದ್ದಾರೆ.
ಐದು ಮೆಚ್ಚುಗೆಯ ಕಥೆಗಳನ್ನು ಆಯ್ಕೆ ಮಾಡಲಾಗಿದ್ದು, ಗೋಕಾಕ್‌ನ ಲಕ್ಷ್ಮಣ ಶರೆಗಾರ, ಉತ್ತರ ಕನ್ನಡದ ಕಲ್ಪನಾ ಹೆಗಡೆ, ಬೆಂಗಳೂರಿನ ರಘು ಎ., ಕೊಡಗಿನ ಸ್ಮಿತಾ ಅಮೃತರಾಜ್ ಸಂಪಾಜೆ ಮತ್ತು ಬೆಂಗಳೂರಿನ ರಮೇಶ್ ಕುಮಾರ್ ನಾಯಕ್ ಅವರು ಬರೆದ ಕಥೆಗಳು ಮೆಚ್ಚುಗೆ ಬಹುಮಾನಕ್ಕೆ (ತಲಾ ರೂ. ೨,೦೦೦) ಆಯ್ಕೆಯಾಗಿವೆ.
ಉತ್ಥಾನ ಮಾಸಪತ್ರಿಕೆಯು ಕಳೆದ ೩೫ ವರ್ಷಗಳಿಂದ ವಾರ್ಷಿಕ ಕಥಾಸ್ಪರ್ಧೆಯನ್ನು ಆಯೋಜಿಸುತ್ತಿದ್ದು, ಈ ವರ್ಷದ ೨೦೨೧ರ ವಾರ್ಷಿಕ ಕಥಾ ಸ್ಪರ್ಧೆಯಲ್ಲಿ ಕನ್ನಡದ ಖ್ಯಾತ ಕಥೆಗಾರರೂ ಸೇರಿದಂತೆ ಒಟ್ಟು ೩೪೨ ಕಥೆಗಳು ಭಾಗವಹಿಸಿದ್ದವು. ಲೇಖಕಿ, ಕಥೆಗಾರ್ತಿ, ಮೈಸೂರಿನ ಮಹಾರಾಣಿ ಮಹಿಳಾ ವಿಜ್ಞಾನ ಕಾಲೇಜಿನ ಪ್ರಾಧ್ಯಾಪಕಿ ಖ್ಯಾತ ಕಥೆಗಾರ್ತಿ ಎಂ.ಎಸ್. ವೇದಾ ಅವರು ತೀರ್ಪುಗಾರರಾಗಿ ಬಹುಮಾನಿತ ಕಥೆಗಳನ್ನು ಆಯ್ಕೆ ಮಾಡಿದರು.
ವಿಜೇತರ ವಿವರ ಹೀಗಿದೆ:
1. ಪ್ರಥಮ ಬಹುಮಾನ
(ರೂ. ೧೫,೦೦೦) ವೀರೇಂದ್ರ ರಾಬಿಹಾಳ್, ಬಳ್ಳಾರಿ, “ದೊರೆ”
2. ಎರಡನೆ ಬಹುಮಾನ
(ರೂ. ೧೨,೦೦೦) ಸುಧಾ ಹೆಗಡೆ, ಉಡುಪಿ, “ರಾಮಾಯಣ ಕಥಾಪ್ರಸಂಗ”
3. ಮೂರನೆಯ ಬಹುಮಾನ
(ರೂ. ೧೦,೦೦೦) ಸವಿರಾಜ್ ಆನಂದೂರು, ತೀರ್ಥಹಳ್ಳಿ, ಶಿವಮೊಗ್ಗ, “ದ್ರೌಪದೀ ಪಟ್ಟಾಭಿಷೇಕ ಪ್ರಸಂಗವು”
ಮೆಚ್ಚುಗೆ ಬಹುಮಾನಗಳು (ತಲಾ ರೂ. ೨,೦೦೦)
- ಲಕ್ಷ್ಮಣ ಶರೆಗಾರ, ಗೋಕಾಕ, “ಗಂಡ-ಹೆಂಡತಿ ಆಟ”
- ಕಲ್ಪನಾ ಹೆಗಡೆ, ಉತ್ತರ ಕನ್ನಡ, “ಜೇನುಗೂಡು”
- ರಘು ಎ., ಬೆಂಗಳೂರು, “ಆರಿದ್ರಾ”
- ಸ್ಮಿತಾ ಅಮೃತರಾಜ್ ಸಂಪಾಜೆ, ಕೊಡಗು, “ಚಾಮಿಯಪ್ಪ”
- ರಮೇಶ್ ಕುಮಾರ್ ನಾಯಕ್, ಬೆಂಗಳೂರು, “ಕಾರ್ಪೋರೇಟ್ ಕಂಪನಿ ಮತ್ತು ಗೋಪಾಲಯ್ಯನ ಹಸು”
ಉತ್ಥಾನ ಕಥಾ ಸ್ಪರ್ಧೆಯಲ್ಲಿ ಭಾಗವಹಿಸಿದ ಎಲ್ಲ ಕಥೆಗಾರ-ಕಥೆಗಾರ್ತಿಯರಿಗೆ ಹಾಗೂ ಬಹುಮಾನ ಪಡೆದವರಿಗೆ ಅಭಿನಂದನೆಗಳು.