
ನಮ್ಮ ಮಿತ್ರರು ಪಾಠಶಾಲೆಯೊಂದರಲ್ಲಿ ಅಧ್ಯಾಪಕರು. ಶ್ರಮದ ಅನುಭವ ಕಿಂಚಿತ್ತೂ ಇಲ್ಲದವರು. ಅವರ ಬದುಕಿನಲ್ಲಿ ಅದರ ಅಗತ್ಯ ಕಿಂಚಿತ್ತೂ ಉಂಟಾಗದೇ ಹೋಯಿತು. ರೊಕ್ಕದಿಂದ ನಮಗೆ ಬೇಕಾದ ಶ್ರಮವನ್ನು ಖರೀದಿಸುವ ಸನ್ನಿವೇಶ ಇರುವಾಗ ಇಂಥ ಅಗತ್ಯ ಉಂಟಾಗಲಾರದು ಕೂಡಾ. ಅವರ ಮನೆಯ ಕಟ್ಟಡನಿರ್ಮಾಣಕಾರ್ಯದಲ್ಲಿಯೂ ಇದೇ ಬಗೆಯಲ್ಲಿ ಶ್ರಮದ ಖರೀದಿ ನಡೆದೇ ಇದೆ. ಆದರೆ ನಿರ್ಮಾಣವಾಗುತ್ತಿರುವ ಆ ಮನೆ ತಮ್ಮ ಮನೆ ಎಂದೆನಿಸಬೇಕಿದ್ದರೆ ತಮ್ಮಿಂದ ಸಾಧ್ಯವಾಗಬಹುದಾದ ಶ್ರಮವನ್ನಾದರೂ ಖರೀದಿಸದೆ ತಾವೇ ಸ್ವತಃ ಹಾಕಬೇಕು ಎಂಬ ನಿಲವಿನಿಂದ ತೊಡಗಿದರು. ಮಿತ್ರರೊಬ್ಬರು ಮನೆ ಕಟ್ಟಿಸುತ್ತಿದ್ದರು. […]