ಜನಸಂಖ್ಯೆಯ ಪ್ರಮಾಣದಲ್ಲಿ ಚೀಣಾವನ್ನು ಭಾರತ ಹಿಂದಿಕ್ಕಬಹುದೆಂಬ ಸಂಭವಮಂಡನೆ ಒಂದಷ್ಟು ಸಮಯದಿಂದ ಪ್ರಚಲಿತವಿತ್ತು. ಈ ಊಹನೆಯು ನಿಜವಾಗುತ್ತಿದೆಯೆಂಬ ಸೂಚನೆ ಇತ್ತೀಚೆಗೆ ಲಭಿಸಿದೆ. ಈ ವರ್ಷದ (೨೦೨೩) ನಡುಭಾಗದ ವೇಳೆಗೆ ಭಾರತದ ಜನಸಂಖ್ಯೆ ಚೀಣಾದ್ದಕ್ಕಿಂತ ಮೂವತ್ತು ಲಕ್ಷದಷ್ಟು ಅಧಿಕವಾಗಬಹುದು – ಎಂಬ ಅಂದಾಜನ್ನು ಇದೀಗ ವಿಶ್ವಸಂಸ್ಥೆ ಪ್ರಕಟಿಸಿದೆ. ಆ ಅಂದಾಜಿನಂತೆ ಭಾರತದ ಜನಸಂಖ್ಯೆ ೧.೪೨೮೬ ಶತಕೋಟಿ ತಲಪುತ್ತದೆ; ಚೀಣಾದ್ದು ೧.೪೨೫೭ ಶತಕೋಟಿಯಷ್ಟು ಇರುತ್ತದೆ. ಈ ಮಾಹಿತಿ ಆರ್ಥಿಕಾದಿ ವಲಯಗಳಲ್ಲಿ ಪರಾಮರ್ಶನೆಗೆ ಗ್ರಾಸವಾಗಿದೆ. ಜನಸಂಖ್ಯೆ ಹೆಚ್ಚಿದಷ್ಟೂ ಸಮಸ್ಯೆಗಳು ಹೆಚ್ಚುತ್ತವೆಂಬ ಹಿಂದೆ ವಾಡಿಕೆಯಾಗಿದ್ದಂಥ […]
ಜನಸಂಖ್ಯೆಯ ಹೆಚ್ಚಳ
Month : June-2023 Episode : Author : ಎಸ್. ಆರ್. ಆರ್.