ದಿನವು ಬಾಂದಳದಲ್ಲಿ ಗರಿಬಿಚ್ಚಿ ಹಾರಾಡಿ ಮರಳಿ ಮನೆಗೈತರುವೆ ಗೆಳೆಯ ಬಾನಾಡಿ || ಇರು, ನಿನ್ನ ಸಂಗಡವೆ ಬರುವೆ ನಾ ಪಯಣಿಗನೆ ಎನಗು ಹಾರಲು ಕಲಿಸು ಒಲಿದು ಜತೆಗೂಡಿ || ಭುವಿಯ ಪರಿಧಿಯ ಮೀರಿ ನಭದ ಏಣಿಯನೇರಿ ಇಳೆಯ ಸೌಂದರ್ಯವನು ಸವಿವ ಮನದಣಿಯೆ|| ಮೋಡದಲೆಗಳ ಮೇಲೆ ಮೋದದಲಿ ತೇಲಾಡಿ ಜೋಡಿ ಹಕ್ಕಿಗಳಾಗಿ ನಲಿವ ಮೈಮರೆಯೆ|| ಹೊಳೆವ ಸೂರ್ಯನ ಕಿರಣಗಳಿಗೆ ಮೈಯೊಡ್ಡುತಲಿ ಪಯಣಗೈವ ನಾವು ಗಗನದೊಳು ಸಾಗಿ|| ಭವದ ಸಂಕ?ಗಳ, ದುಗುಡ ದುಮ್ಮಾನಗಳ ಕ್ಷಣಮರೆತು ಹಾಯಾಗಿ ಇರುವ ಜೊತೆಯಾಗಿ|| ವಿಧಿಯ […]
ಬಾನಾಡಿ
Month : September-2017 Episode : Author : ಜಯರಾಮ ರೈ ಕುಂಜಾಡಿ