ದಯಾನಂದ ಸರಸ್ವತಿಗಳ ಇನ್ನೂರನೇ ಜನ್ಮದಿನ ಪರ್ವದ ಸ್ಮರಣೆಯ ನಿಮಿತ್ತ ವಿಶೇಷ ಲೇಖನ ಬಾಲ್ಯದಿಂದಲೇ ಶಾಸ್ತ್ರಾಭ್ಯಾಸವನ್ನು ನಡೆಸಿದ ಮೂಲಶಂಕರ ನಿರಂತರವಾದ ಅಧ್ಯಯನ, ಲೋಕಸಂಚಾರ, ಉಪನ್ಯಾಸಗಳ ಮೂಲಕ ಲೋಕಪ್ರಸಿದ್ಧರಾಗುತ್ತಾರೆ. ಸಂನ್ಯಾಸ ಸ್ವೀಕರಿಸಿ ದಯಾನಂದ ಸರಸ್ವತಿಯವರಾದರು. ಸಾಂಗ ವೇದಾಧ್ಯಯನ ಮಾಡಿದರು. ಸಮಾಜದ ಸಮಸ್ಯೆಯ ಮೂಲವನ್ನು ಅರಿಯಲು ಯತ್ನಿಸಿದರು. ವೇದಗಳನ್ನು ತಳಹದಿಯಾಗಿರಿಸಿಕೊಂಡು, ಹಿಂದೂಸಮಾಜಕ್ಕೆ ಕವಿದಿದ್ದ ಕತ್ತಲೆಯಿಂದ ಅದನ್ನು ದೂರಗೊಳಿಸುವಂತೆ ಮತ್ತು ಹೊಸ ಬೆಳಕಿನ ದರ್ಶನವಾಗುವಂತೆ ಮಾಡುವಲ್ಲಿ ದಯಾನಂದ ಸರಸ್ವತಿಯವರು ತಮ್ಮ ಜೀವನವನ್ನೇ ಸಮರ್ಪಿಸಿದರು. ವೇದಗಳ ಕಡೆಗೆ ಹಿಂತಿರುಗಿ ಎನ್ನುವುದೇ ಅವರ ಜೀವನದ ಘೋಷಣೆಯಾಯಿತು. […]
ದಯಾನಂದ ಸರಸ್ವತಿ
Month : September-2023 Episode : Author : ಡಾ. ರೋಹಿಣಾಕ್ಷ ಶಿರ್ಲಾಲು