
ಅಂದಿನ ದಿನಗಳೇ ಅಂಥವು. ಫೋನು-ಮೊಬೈಲ್ಗಳಿಲ್ಲದ ಕಾಲ. ಅಂಚೆಯಣ್ಣನೇ ಗತಿ. ಅವನೂ ಹಂಸದಷ್ಟೇ ನಿಧಾನ. ಆಗ ಅನಿರೀಕ್ಷಿತ ಅತಿಥಿಗಳು ಬಂದರೆ ಮಾಡಲು ವಿವಿಧ ಭಕ್ಷ್ಯಭೋಜ್ಯಗಳ ಪಟ್ಟಿ ಇರುತ್ತಿರಲಿಲ್ಲ. ಉತ್ತರ ಕರ್ನಾಟಕದಲ್ಲಿ ವಾಡಿಕೆಯಲ್ಲಿದ್ದುದು ಪುರಿ.. ಖೀರು , ಬಾಸುಂದಿ ಶ್ರೀಖಂಡ.. ಇತ್ಯಾದಿಗಳು. ಆಗ ಹೊರಗಿನಿಂದ ಕೊಂಡು ತರುವ ಪರಿಪಾಠವಿರಲಿಲ್ಲ. ಅಲ್ಲದೆ ಹಾಗೆ ತರುವುದು ತಮಗೆ ತಮ್ಮ ಪಾಕಪ್ರಾವೀಣ್ಯಕ್ಕೆ ಅವಮಾನವೆಂದು ಹೆಂಗಳೆಯರು ಭಾವಿಸುತ್ತಿದ್ದ ದಿನಗಳು… ಮಮ್ಮಾ.. ತೇಜಾ ಮನೇಲಿ ಹಾಲಿನವನೊಬ್ಬ ಕ್ಯಾನ್ನಲ್ಲಿ ಹಾಲನ್ನು ಡೈರೆಕ್ಟಾಗಿ ಮನೆಗೇ ತಂದು ಕೊಡ್ತಿದಾನೆ. ನೋ ಪ್ಲಾಸ್ಟಿಕ್.. […]