ಕೆಲವು ಮಂತ್ರಗಳ ಶಬ್ದವೇ ಅವುಗಳ ಅರ್ಥಕ್ಕಿಂತ ಮಹತ್ತ್ವದ್ದಾಗಿರುತ್ತದೆ. ಒಂದು ವಿಶಿಷ್ಟ ಕ್ರಮದ ಶಬ್ದೋಚ್ಚಾರಣೆಯಿಂದ ವಿಶಿಷ್ಟ ಶಕ್ತಿಯೊಂದು ಜನಿಸುತ್ತದೆ. ವೇದಮಂತ್ರಗಳು ಜೀವಿಗಳಿಗೆ ಈ ಲೋಕದಲ್ಲಿಯೂ ಲೋಕಾಂತರಗಳಲ್ಲಿಯೂ ಹಿತವನ್ನೆಸಗುತ್ತವೆಂದು ನಾವು ವಿಶ್ವಾಸವನ್ನಿರಿಸಿಕೊಳ್ಳಬೇಕು. ನಮ್ಮ ಪರಿಮಿತ ಗ್ರಹಿಕೆಯದಷ್ಟೆ ಆಧಾರದ ಮೇಲೆ ವೇದಗಳನ್ನು ಅರಿಯಲು ಯತ್ನಿಸಬಾರದು. ನಮ್ಮ ಕಣ್ಣು ಕಿವಿ ಬುದ್ಧಿಗಳ ಶಕ್ತಿಗೆ ಮೀರಿದ ಸಂಗತಿಗಳನ್ನು ಕುರಿತೇ ವೇದಗಳು ಹೇಳುವುದು. ಎಷ್ಟೋ ವೇಳೆ ಮಾಧ್ಯಮವಿಲ್ಲದೆಯೆ ಗ್ರಹಿಕೆಯು ಸಾಧ್ಯವಾಗುತ್ತದೆಂಬುದನ್ನು ವೇದೇತರ ಸಂದರ್ಭಗಳಲ್ಲಿಯೂ ನಾವು ಗಮನಿಸಬಹುದು. ನಮ್ಮ ಬುದ್ಧಿಯ ಪರಿಧಿಗೆ ಎಟುಕದ ಸಂಗತಿಗಳನ್ನು ಋಷಿಗಳು ವೇದದ […]
ವೇದಮಂತ್ರಗಳ ಭೂಮಿಕೆ
Month : February-2023 Episode : Author : ಶ್ರೀ ಚಂದ್ರಶೇಖರೇಂದ್ರಸರಸ್ವತೀ ಸ್ವಾಮಿಗಳು ಕಾಂಚಿ