ದಿನಗಳು ಕಳೆದಂತೆ ಯುದ್ಧವು ವಿವಿಧ ಪ್ರದೇಶಗಳಿಗೆ ವಿಸ್ತರಿಸುತ್ತಾ ಹೋಯಿತು. ಭಾರತೀಯ ಪಡೆಗಳು ಎಲ್ಲ ಸವಾಲುಗಳನ್ನು ಎದುರಿಸಿ ವಿಜಯಿಗಳಾಗುತ್ತಾ ಸಾಗಿದವು. ವಿಜಯವೇನೂ ಸುಲಭವಾಗಿ ದೊರಕಲಿಲ್ಲ. ಪ್ರತಿಯೊಂದು ಹೆಜ್ಜೆಯೂ ಸವಾಲೇ, ಪ್ರತಿಯೊಂದು ಕದನದಲ್ಲೂ ಪ್ರಾಣವನ್ನು ಪಣಕ್ಕಿಟ್ಟೇ ಹೋರಾಡಬೇಕು. ಕೆಲವು ಕದನಗಳಲ್ಲಿ ಸೋತದ್ದೂ ಉಂಟು, ಹಿಮ್ಮೆಟ್ಟಬೇಕಾದ ಪ್ರಸಂಗಗಳೂ ಇದ್ದವು. ಅಂತಿಮ ವಿಜಯ ಲಕ್ಷ್ಯದಲ್ಲಿರಬೇಕಾದಾಗ, ಕೆಲವು ಸೋಲು ಪ್ರಮುಖವಾಗುವುದಿಲ್ಲ. ಹೊಸ ಯೋಜನೆಗಳೊಂದಿಗೆ ಸೋಲಾಗಿದ್ದ ಪ್ರದೇಶಗಳನ್ನು ಗೆದ್ದುಕೊಂಡರು. ಪ್ರತಿಯೊಂದು ಕದನವೂ ಒಂದು ಅಪ್ರತಿಮ ಹೋರಾಟದ ಕಥೆಯೇ. ೧೯೪೭ರ ಆಗಸ್ಟ್ ೧೪ರಂದು ಪಾಕಿಸ್ತಾನದ ಉದಯವಾಯಿತು. ಅಖಂಡ […]
೧೯೪೭-೪೮ ರ ಭಾರತ-ಪಾಕಿಸ್ತಾನ ಮೊದಲ ಯುದ್ಧ
Month : October-2021 Episode : Author : ಎಸ್. ಎಸ್. ನರೇಂದ್ರಕುಮಾರ್