ವೃತ್ತಿಜೀವನವನ್ನು ದೂರದ ಹೈದರಾಬಾದ್‌ನಲ್ಲಿ ಕಳೆದವರು ಮತ್ತು ಆನಂತರ ಅಲ್ಲೇ ನೆಲೆಸಿದವರಾಗಿದ್ದರೂ ಕನ್ನಡ ಭಾಷೆ ಮತ್ತು ಸಾಹಿತ್ಯಗಳ ಬಗೆಗೆ ನಿರಂತರ ಸ್ಪಂದಿಸುತ್ತಿರುವವರು ಕವಿ-ಸಾಹಿತಿ ಮತ್ತು ಭಾಷಾಶಾಸ್ತ್ರಜ್ಞ ಡಾ| ಕೆ.ವಿ. ತಿರುಮಲೇಶ್. ಅವರು ಕವಿ ಗೋಪಾಲಕೃಷ್ಣ ಅಡಿಗರಿಂದ ಆರಂಭಗೊಂಡ ನವ್ಯಸಾಹಿತ್ಯ ಚಳವಳಿಯಿಂದ ಪ್ರಭಾವಿತರಾಗಿ ಬರೆಯಲು ಆರಂಭಿಸಿ ಮುಂದೆ ಬಹುಎತ್ತರಕ್ಕೆ ಬೆಳೆದವರು. ಇಂಗ್ಲಿಷ್ ಸೇರಿದಂತೆ ಪಾಶ್ಚಾತ್ಯ ಸಾಹಿತ್ಯ ಮತ್ತು ಚಿಂತನಪ್ರಣಾಳಿಗಳನ್ನು ವಿಪುಲವಾಗಿ ಓದಿಕೊಂಡಿರುವ ತಿರುಮಲೇಶ್ ಪತ್ರಿಕಾ ಅಂಕಣ ಸೇರಿದಂತೆ ವಿವಿಧ ಕಡೆ ಆ ಕುರಿತು ಅಪಾರವಾಗಿ ಬರೆದಿದ್ದಾರೆ. ಕನ್ನಡ ಕಾವ್ಯ, ಸಾಹಿತ್ಯಗಳಲ್ಲಿ […]
ಅಡಿಗರು ಒಬ್ಬ ‘ಕವಿಗಳ ಕವಿ’ – ಡಾ. ಕೆ.ವಿ. ತಿರುಮಲೇಶ್
Month : April-2018 Episode : ಸ್ಮರಣೆ Author :