ಕೆಲವು ವೃತ್ತಿಗಳಲ್ಲಿರುವವರು ಪರಿಶುದ್ಧರಾಗಿ ಇರಬೇಕೆಂದು ಸಮಾಜ ನಿರೀಕ್ಷಿಸುತ್ತದೆ; ಮುಖ್ಯವಾಗಿ ಸಮಾಜಕ್ಕೆ ಬೋಧಿಸುವ ಅಥವಾ ತಿಳಿವಳಿಕೆ ಹೇಳುವಂತಹ ಸ್ಥಾನಗಳಲ್ಲಿ ಇರುವವರು. ಒಂದು ನೆಲೆಯಲ್ಲಿ ಅರ್ಚಕರು, ಪುರೋಹಿತರು ಅಂತಹ ಸ್ಥಾನದಲ್ಲಿದ್ದರೆ, ಮಕ್ಕಳಿಗೆ ಪಾಠ ಹೇಳುವ ಅಧ್ಯಾಪಕರು, ಪ್ರಾಚಾರ್ಯರು ಖಂಡಿತವಾಗಿಯೂ ಅಂತಹ ಸ್ಥಾನದಲ್ಲಿರುತ್ತಾರೆ. ಮಕ್ಕಳು ಮುಖ್ಯವಾಗಿ ನೋಡಿ ಕಲಿಯುವುದರಿಂದ ಶಿಕ್ಷಕರಾದವರ ನಡೆನುಡಿಗಳು ಮಾದರಿಯಾಗಿರಬೇಕಾಗುತ್ತದೆ. ಇನ್ನು ಆಧುನಿಕ ಜೀವನದ ಸಂದರ್ಭವನ್ನು ಗಮನದಲ್ಲಿಟ್ಟುಕೊಂಡು ಹೇಳುವುದಾದರೆ ಪತ್ರಿಕೆ, ಪತ್ರಕರ್ತರು ಅಥವಾ ಮಾಧ್ಯಮದ ಮಂದಿ ಅಂಥದ್ದೇ ಸ್ಥಾನದಲ್ಲಿರುತ್ತಾರೆ ಎನ್ನಬಹುದು. ಇದು ಮಾತು ಅಥವಾ ಬರವಣಿಗೆಯ ಸಹಜ ಗುಣ. […]
ಎನ್ಡಿಟಿವಿಯ ಬೃಹಜ್ಜಾತಕವು
Month : July-2017 Episode : Author : ಎಂ.ಬಿ. ಹಾರ್ಯಾಡಿ