
‘ಅಗ್ನಿಗರ್ಭದ ಪ್ರಸವ ವೇದನೆ’ ಬ್ರಿಟಿಷ್ ಆಡಳಿತದ ವಿರುದ್ಧ ನಡೆದ ಹೋರಾಟಗಳು ಹಲವು. ಪ್ರತಿಯೊಂದು ಹೋರಾಟವೂ ತನ್ನದೇ ಆದ ಮಹತ್ತ್ವವನ್ನು ಪಡೆದಿದೆ. 1930 ಏಪ್ರಿಲ್ 30ರಂದು ನಡೆದ ಚಿತ್ತಗಾಂವ್ ಶಸ್ತ್ರಾಗಾರ ಪ್ರಕರಣವು ಬ್ರಿಟಿಷರಲ್ಲಿ ತಲ್ಲಣವನ್ನು ಮೂಡಿಸಿತ್ತು. ಶಿಕ್ಷಕರಾಗಿದ್ದ ಸೂರ್ಯಸೇನ್ ಸ್ವಾತಂತ್ರ್ಯ ಹೋರಾಟಕ್ಕಾಗಿ ಜನರನ್ನು ಒಗ್ಗೂಡಿಸಿದ್ದು, ಹೋರಾಡಿದ್ದು ಇತಿಹಾಸದ ಪುಟಗಳಲ್ಲಿ ವಿಶೇಷ ಸ್ಥಾನವನ್ನು ಪಡೆದುಕೊಂಡಿದೆ. ಚಿತ್ತಗಾಂವ್ ಶಸ್ತ್ರಾಗಾರದ ಮುಂದೆ ಸೇರಿದ ಹೋರಾಟಗಾರರು ರಾಷ್ಟ್ರಧ್ವಜವನ್ನು ಹಾರಿಸಿ ಚಿತ್ತಗಾಂವ್ ಸ್ವತಂತ್ರ ಎಂದು ಘೋಷಿಸಿದ್ದು ಸ್ವಾತಂತ್ರ್ಯ ಹೋರಾಟದ ಒಂದು ಮೈಲಿಗಲ್ಲು ಎನ್ನಬಹುದು. ತರುಣರ ಪಡೆಯು […]