ಹಾಸ್ಯೋತ್ಥಾನ -ಫೆಬ್ರುವರಿ 2022
Month : February-2022 Episode : Author : ರಘುಪತಿ ಶೃಂಗೇರಿ
Month : February-2022 Episode : Author : ರಘುಪತಿ ಶೃಂಗೇರಿ
Month : February-2021 Episode : Author : ಎಸ್.ಆರ್. ರಾಮಸ್ವಾಮಿ
ಸಪಾದ ಶತೋತ್ಸವ ಹಲವು ಭಿನ್ನ ಭಿನ್ನ ಧಾರೆಗಳಲ್ಲಿ ದಶಕಗಳುದ್ದಕ್ಕೂ ನಡೆದ ಅನ್ಯಾನ್ಯ ಪ್ರಯತ್ನಗಳ ಫಲಿತವಾಗಿ 1947ರಲ್ಲಿ ಭಾರತಕ್ಕೆ ಸ್ವಾತಂತ್ರ್ಯ ಲಭಿಸಿತು. ಸ್ವಾತಂತ್ರ್ಯ ಪ್ರಾಪ್ತಿಗೆ ಲೋಕಮಾನ್ಯ ತಿಲಕರು, ಬಿಪಿನ ಚಂದ್ರಪಾಲ್, ಲಾಲಾ ಲಜಪತರಾಯ್, ಆ್ಯನಿ ಬೆಸೆಂಟ್, ಚಿತ್ತರಂಜನ್ದಾಸ್ ಮೊದಲಾದವರ ಕೊಡುಗೆ ಗಾಂಧಿಯವರ ಕೊಡುಗೆಯಷ್ಟೆ ಮಹತ್ತ್ವದ್ದು – ಎಂಬ ವಸ್ತುಸ್ಥಿತಿಯನ್ನು ಮರೆತಲ್ಲಿ ಇತಿಹಾಸವನ್ನು ವಿಕೃತಗೊಳಿಸಿದಂತೆ ಆಗುತ್ತದೆ. ಹಾಗೆ ಮಾಡುವುದು ಗಾಂಧಿಯವರು ನಿರಂತರ ಪ್ರತಿಪಾದಿಸಿದ ಸತ್ಯನಿಷ್ಠೆಗೇ ಅಪಚಾರ ಮಾಡಿದಂತೆ ಆಗುತ್ತದೆ. ಪೂರ್ಣ ಲೇಖನವನ್ನು PDF ನಲ್ಲಿ ಇಲ್ಲಿ ಓದಿ : https://utthana.in/?p=9260 […]
Month : February-2021 Episode : Author : ಎಸ್. ಕಾರ್ತಿಕ್
ಭಾರತೀಯ ಜ್ಞಾನಕ್ಷೇತ್ರದ ಮಹಾನ್ ಸಾಧಕರನ್ನು, ಕವಿಗಳನ್ನು, ಅಮರಕೃತಿಗಳನ್ನು ಪ್ರಪಂಚಕ್ಕೆ ನೀಡಿದ ನಾಡು ಭಾರತದ ಮಕುಟಮಣಿಯಾದ ಕಾಶ್ಮೀರ. ಇಂತಹ ಕಾಶ್ಮೀರದಲ್ಲಿ ಬರೆಹವನ್ನು ಮಾಡಲು ಪ್ರಧಾನವಾಗಿ ಬಳಸುತ್ತಿದ್ದ ಲಿಪಿ ಶಾರದಾಲಿಪಿ. ಶಾರದಾ ಲಿಪಿಯು ಕಾಶ್ಮೀರ ಪ್ರದೇಶದಲ್ಲಿ ಬಳಕೆಯಲ್ಲಿರುವ/ಬಳಕೆಯಲ್ಲಿದ್ದ ಪ್ರಮುಖ ಲಿಪಿಯಾಗಿದ್ದು, ಕ್ರಿ.ಶ. 8ನೆಯ ಶತಮಾನದ ಸುಮಾರಿನಿಂದ ಅಸ್ತಿತ್ವದಲ್ಲಿತ್ತು. ಕಾಶ್ಮೀರಕ್ಕೆ ಶಾರದಾಪೀಠವೆಂಬ ಪ್ರಸಿದ್ಧಿಯುಂಟು (ನಮಸ್ತೇ ಶಾರದಾದೇವೀ ಕಾಶ್ಮೀರಪುರವಾಸಿನೀ). ಸರಸ್ವತೀ ದೇವಿಯ ಮತ್ತೊಂದು ಹೆಸರಾದ ಶಾರದಾ ಎಂಬುದನ್ನೇ ಈ ಲಿಪಿಗೆ ಇಟ್ಟಿರುವುದು ಕಂಡುಬರುತ್ತದೆ. ಈ ಲಿಪಿಯು ಕಾಶ್ಮೀರ, ಲಡಾಖ್, ಗಾಂಧಾರ (ಈಗಿನ ಆಫಘನಿಸ್ತಾನದ […]
Month : February-2021 Episode : Author :
ಚೀಣಾದಿಂದ ಟಿಬೆಟ್ ದುರಾಕ್ರಮಣ, ಭಾರತದ ಈಶಾನ್ಯ ಭಾಗ ಪ್ರದೇಶದ ಒತ್ತುವರಿ, ಈಚಿನ ವರ್ಷಗಳಲ್ಲಿ ಜಗತ್ತಿನ ಹಲವಾರೆಡೆಗಳಲ್ಲಿ ಬಗೆಬಗೆಯಾಗಿ ನೇರವಾಗಿಯೂ ಛದ್ಮಮಾರ್ಗಗಳಲ್ಲಿಯೂ ಚೀಣಾ ತನ್ನ ಮಾರುಕಟ್ಟೆಗಳನ್ನು ನಿರ್ಮಿಸಿಕೊಳ್ಳುತ್ತಿರುವುದು – ಇವೆಲ್ಲ ಸರ್ವವಿದಿತವೇ ಆಗಿವೆ. ಚೀಣಾದ ವಿಸ್ತರಣ ಪ್ರಯತ್ನಗಳ ಇನ್ನು ಹಲವು ಮುಖಗಳು ಇತ್ತೀಚೆಗೆ ಬೆಳಕಿಗೆ ಬಂದಿವೆ. ಈಗ್ಗೆ ಒಂದು ವರ್ಷ ಹಿಂದೆ (ಫೆಬ್ರುವರಿ 2020) ಅಮೆರಿಕದ ‘ವಾಲ್ ಸ್ಟ್ರೀಟ್ ಜರ್ನಲ್’ನಡೆಸಿದ ಒಂದು ತನಿಖೆಯಿಂದ ಹೊರಪಟ್ಟ ಸಂಗತಿ – ಅಮೆರಿಕದ ಎರಡು ಜಗತ್ಪ್ರಸಿದ್ಧ ವಿಶ್ವವಿದ್ಯಾಲಯಗಳಿಗೆ ಚೀಣಾದಿಂದಲೂ ಸೌದಿ ಅರೇಬಿಯ, ಖಟಾರ್, […]
Month : February-2021 Episode : Author :
ಕಳೆದ ವರ್ಷದ ಆರಂಭದಲ್ಲಿ ಜಗತ್ತನ್ನು ಆಕ್ರಮಿಸಿದ ಕೋವಿಡ್-19 ಸಾಂಕ್ರಾಮಿಕ ಈ ವರ್ಷದ ಆರಂಭದಲ್ಲಿ ಬಹುಮಟ್ಟಿಗೆ ಹಿಂದಕ್ಕೆ ಸರಿಯತೊಡಗಿರುವ ಲಕ್ಷಣಗಳು ಗೋಚರಿಸಿವೆ. ಕಳೆದ ಹತ್ತು-ಹನ್ನೊಂದು ತಿಂಗಳಲ್ಲಿ ದೇಶದ ಸಾಮಾಜಿಕ-ಆರ್ಥಿಕ ಜೀವನವಷ್ಟೂ ಗ್ರಹಣಗ್ರಸ್ತವಾದಂತಿತ್ತು. ಜನರಲ್ಲಿ ಹಿಂದೆ ಇದ್ದುದಕ್ಕಿಂತ ಹೆಚ್ಚಿನ ಅನುಶಾಸನವನ್ನು ತಂದಿತೆಂಬ ಪ್ರಶಂಸೆಗೂ ವೈರಾಣು ಅರ್ಹವಾಗಿದೆ. ಎಲ್ಲಿಂದಲೊ ಬಂದೆರಗಿದ ವಿಪತ್ತನ್ನು ಶಾಪವಾಗಿ ಭಾವಿಸದೆ ಅವಕಾಶವನ್ನಾಗಿ ಪರಿವರ್ತಿಸಿದ್ದು ಪ್ರಧಾನಿ ನರೇಂದ್ರ ಮೋದಿಯವರ ಮುತ್ಸದ್ದಿತನ. ಅದರಿಂದಾಗಿ ಆತ್ಮನಿರ್ಭರತೆಯತ್ತಲೂ ಸ್ವಾವಲಂಬನೆಯತ್ತಲೂ ಸ್ಥಳೀಯ ಉತ್ಪಾದನೆಗಳಿಗೆ ಆದ್ಯತೆ ಸಲ್ಲಬೇಕೆನ್ನುವತ್ತಲೂ ದೇಶದ ಗಮನ ಹರಿಯುವಂತಾಯಿತು. ಪರಿಣಾಮವಾಗಿ ಮುಖ್ಯವಾದ ಆರ್ಥಿಕ […]
Month : February-2021 Episode : Author :
ಯದಿ ಸಂತಿ ಗುಣಾಃ ಪುಂಸಾಂ ವಿಕಸಂತ್ಯೇವ ತೇ ಸ್ವಯಂ | ನ ಹಿ ಕಸ್ತೂರಿಕಾಮೋದಃ ಶಪಥೇನ ವಿಭಾವ್ಯತೇ || – ಕುವಲಯಾನಂದ “ಜನರಲ್ಲಿ ಸ್ವಭಾವಗತವಾದ ಔದಾರ್ಯಾದಿ ಒಳ್ಳೆಯ ಗುಣಗಳಿದ್ದರೆ ಅವು ಯಾವ ಅನ್ಯಪ್ರೋತ್ಸಾಹನವೂ ಇಲ್ಲದೆ ತಾವಾಗಿ ಪ್ರಕಾಶಗೊಳ್ಳುತ್ತವೆ. ಕಸ್ತೂರಿಯ ಸುಗಂಧವನ್ನು ಯಾರೂ ಬಲವಂತದಿಂದ ಹೊರಹೊಮ್ಮಿಸಬೇಕಾಗಿಲ್ಲವಷ್ಟೆ?” ಬೇರೆಯವರಿಗೆ ಉಪಕಾರ ಮಾಡುವುದು ಉತ್ತಮ ವರ್ತನೆ. ಸಂದರ್ಭವಶದಿಂದಲೊ ವ್ಯವಸ್ಥಾನುಗುಣವಾಗಿಯೊ ಅನ್ಯಪ್ರೇರಣೆಯಿಂದಲೊ ಯಾರಿಗೋ ಉಪಕಾರ ಮಾಡಿದರೂ ಅದಕ್ಕೆ ಮೆಚ್ಚಿಕೆ ಸಲ್ಲತಕ್ಕದ್ದೇ. ಆದರೆ ಪರೋಪಕಾರದ ಶ್ರೇಷ್ಠ ರೂಪವೆಂದರೆ ಅವಕಾಶ ಗೋಚರಿಸಿದೊಡನೆ ಯಾವುದಕ್ಕೂ ಕಾಯದೆ ನೆರವಿಗೆ […]