ತುರ್ತುಪರಿಸ್ಥಿತಿಯ ಅತಿರೇಕಗಳಲ್ಲಿ ಬಹಳಷ್ಟು ಜನರನ್ನು ಅವರ ವಸತಿಪ್ರದೇಶಗಳಿಂದ ಕಿತ್ತೊಗೆದು ಸ್ಥಳಾಂತರಗೊಳಿಸಿದ ನಿರ್ದಯ ಕಾರ್ಯಾಚರಣೆ ಕೂಡ ಮಹತ್ತ್ವವನ್ನು ಪಡೆದುಕೊಂಡಿದೆ. ದೇಶದ ಕೆಲವು ರಾಜ್ಯಗಳಲ್ಲಿ ಅದು ನಡೆಯಿತಾದರೂ ರಾಜಧಾನಿ ದೆಹಲಿಯಲ್ಲಿ ಅದು ಭೀಕರ ಸ್ವರೂಪವನ್ನೇ ಪಡೆದುಕೊಂಡಿತು. ದೆಹಲಿ ಅಭಿವೃದ್ಧಿ ಪ್ರಾಧಿಕಾರ (ಡಿಡಿಎ) ಮತ್ತು ದೆಹಲಿ ಮಹಾನಗರ ಪಾಲಿಕೆ (ಎಂಸಿಡಿ)ಗಳು ಬಹಳಷ್ಟು ಕಟ್ಟಡ ಮತ್ತಿತರ ನಿರ್ಮಾಣಗಳನ್ನು ನಾಶಮಾಡಿದವು. ತುರ್ತುಪರಿಸ್ಥಿತಿಯ ವೇಳೆ ಪ್ರತಿಭಟನೆಯು ಕಷ್ಟವಾಗಿದ್ದ ಕಾರಣ ಧ್ವಂಸಕಾರ್ಯವು ತುಂಬ ವೇಗವನ್ನು ಪಡೆದುಕೊಂಡಿತು. ಜನರ ಬಗ್ಗೆ ಯಾವುದೇ ಕಾಳಜಿ ಇಲ್ಲದೆ ಅವರ ಮನೆಗಳನ್ನು ಒಡೆದುಹಾಕಿದರು. […]
ತುರ್ತುಪರಿಸ್ಥಿತಿ: ದೆಹಲಿಯನ್ನು ನಡುಗಿಸಿದ ಸ್ವಚ್ಛತಾ ಕಾರ್ಯ, ೭ ಲಕ್ಷ ಜನರ ಸ್ಥಳಾಂತರ
Month : September-2023 Episode : ಭಾಗ-4 Author :