ಮರಗಳು ಮಣಿದಾವ ತಾಯಿ ನೀ ನೀರುಣಿಸಿ ಬೆಳೆಸಿದ ಋಣಕ್ಕಾಗಿ ಜನಮನ ಕಂಬನಿ ಮಿಡಿದಾವ ತಾಯಿ ನಿನ್ನಗಲುವಿಕೆಯ ನೋವು ಅತಿಯಾಗಿ || ಮಕ್ಕಳಿಲ್ಲದ ನೋವು ಮರೆತವ್ವ ನೀನು ಸಸಿಗಳ ನೆಟ್ಟು ಖುಷಿಪಟ್ಟೆ ನೀನು ಓದದಿದ್ದರೇನು ಬರೆಯದಿದ್ದರೇನು ಪರಿಸರದ ಪಾಠ ಕಲಿಸಿಕೊಟ್ಟೆ ನೀನು || ಬಿರುದು ಬಾವಲಿ ಹರಿದು ಬಂದಾವ ತಾಯಿ ಕೀರ್ತಿಗಳಿಸಿತು ನಾಡು ನಿನ್ನ ಕೃತಿಯಿಂದಾಗಿ ಸಾರ್ಥಕವಾಯಿತವ್ವ ನಿನ್ನ ಹೋರಾಟ ಕಾಲದ ಎದಿಯಾಗ ಚಿರವಾಗಿ ಉಳಿದು || ಸ್ಪಟಿಕದಷ್ಟೇ ಪರಿಶುದ್ಧ ನಿನ್ನಂತರಂಗ ಸ್ವಾರ್ಥಕ್ಕೆ ಇರಲಿಲ್ಲ ನಿನ್ನಲ್ಲಿ ಎಳ್ಳಷ್ಟು ಜಾಗ […]













