ಅದ್ವೈತಸ್ಥಿತಿಯಲ್ಲಿ ಯಾರು ಯಾರಿಗೆ ಏನನ್ನು ಕೊಡುವರು? ಭ್ರಾಂತಿರೂಪ ಹಾಸಿಗೆಯ ಮೇಲೆ ಒಬ್ಬಾತ ಗಾಢವಾದ ಅಜ್ಞಾನದಿಂದ ನಿದ್ರಿಸ್ತನಾಗಿರುವಾಗ ಜನ್ಮ-ಮೃತ್ಯುಗಳ ದುಷ್ಟ ಸ್ವಪ್ನವನ್ನು ಭೋಗಿಸುವನು. ಅನಂತರ ಅಕಸ್ಮಾತ್ತಾಗಿ ಎಚ್ಚೆತ್ತ ಮೇಲೆ ಆ ಎಲ್ಲ ಸ್ವಪ್ನಗಳು ಸುಳ್ಳಾಗುವವು. ತನ್ನಲ್ಲಿಯೇ ತನ್ನ ನಿತ್ಯ ಸದ್ಭಾವದ (ತಾನು ಅಮರನೆಂಬ) ಪ್ರತ್ಯಯವು ಬರುವುದು. ಆದ್ದರಿಂದ ಧನಂಜಯನೇ, ಮನುಷ್ಯನು ನಾಶವಂತ ದೇಹದ ಅಭಿಮಾನವನ್ನು ತಳೆದು, ತಾನೇ ತನ್ನ ನಾಶಕ್ಕೆ ಕಾರಣನಾಗುವನು. ಈ ಮನವರಿಕೆಯಿಂದ ಅಹಂಕಾರವನ್ನು ಬಿಡಬೇಕು. ಅಂದರೆ ತಾನು ನಿತ್ಯಸಿದ್ಧ ಬ್ರಹ್ಮವಸ್ತುವಾಗುವನು. ಇದರಿಂದ ಸಹಜವಾಗಿ ತಾನೇ ತನ್ನ […]
ಅದ್ವೈತಸ್ಥಿತಿ
Month : March-2016 Episode : Author : ಸಂತ ಜ್ಞಾನೇಶ್ವರ ಮಹಾರಾಜರು