
೧ ಎಂದಿನಂತೆ ಆ ಸಾಧು ಧ್ಯಾನಾಸಕ್ತನಾಗಿ ಕೂತಿದ್ದ. ಒಬ್ಬ ಮನುಷ್ಯ ಬಂದು ಆತನ ಪಾದಮುಟ್ಟಿ ನಮಸ್ಕರಿಸಿದ. ಮೆಲ್ಲಗೆ ಕಣ್ಣುಬಿಟ್ಟು ಎದುರಿಗಿದ್ದವನನ್ನು ನೋಡಿದ ಸಾಧು. “ಏನು ಮಗು ಬಂದದ್ದು? ನೋಡಿದರೆ ತುಂಬ ದುಃಖದಲ್ಲಿರುವಂತಿದೆ? ಕರುಣೆಯಿಂದ ಕೇಳಿದ. “ಹೌದು ಸ್ವಾಮಿ. ನೋವುಗಳಿಂದ ತತ್ತರಿಸಿ ಹೋಗಿದ್ದೇನೆ. ವ್ಯಕ್ತಿ ಕಂಬನಿದುಂಬಿ ಉತ್ತರಿಸಿದ. “ಮಗು, ನಿನ್ನ ನೋವು ಏನೆಂದು ನನಗೆ ಗೊತ್ತಿಲ್ಲ. ಆದರೆ ಎಷ್ಟು ಎಂಬುದು ಮುಖದ ಮೇಲೆ ಕಾಣುತ್ತಿದೆ. ಸಂತೈಸಿಕೋ ಮಗೂ. “ಅದೇ ನನಗೆ ತಿಳಿಯುತ್ತಿಲ್ಲ ಸ್ವಾಮಿ… ಹಾಗಾಗಿಯೇ ನಿಮ್ಮ ಬಳಿ ಬಂದೆ. […]